ಆರೋಗ್ಯ ಶಿಬಿರ, ಮಕ್ಕಳಿಗೆ ಬ್ಯಾಗ್ ವಿತರಿಸಿ ಪತ್ರಿಕಾ ದಿನಾಚರಣೆ

ಕಾರವಾರ, ಜುಲೈ 1: ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕ, ಶೂ, ಸೈಕಲ್ ಜೊತೆಗೆ ಸರ್ಕಾರ ಬ್ಯಾಗ್ ಅನ್ನೂ ನೀಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಒತ್ತಾಯಿಸಿದರು.

ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ತಾಲ್ಲೂಕಿನ ಚಿತ್ತಾಕುಲಾ ಸೀಬರ್ಡ್ ಕಾಲನಿಯ ಸರ್ಕಾರಿ ಹೈಸ್ಕೂಲಿನಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, 68 ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಗಳನ್ನು ವಿತರಿಸಿ ಅವರು ಮಾತನಾಡಿದರು. ಸಾಮಾಜಿಕ ಜಾಲತಾಣಗಳು ಇಂದು ಬೇಡದ ಸುದ್ದಿ ಹರಡುತ್ತಿವೆ. ವಾಸ್ತವ ವರದಿಗಾಗಿ ಮಾಧ್ಯಮಗಳು ಬೇಕಿವೆ ಎಂದು ಮಾಧ್ಯಮಗಳ ಕುರಿತು ಮಾತನಾಡಿದರು.

ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಮುಖ್ಯ ಅತಿಥಿಯಾಗಿ ಆಗಮಿಸಿದ್ದು, ಪ್ರಜಾಪ್ರಭುತ್ವವನ್ನು ಕಾಯುವ ಕೆಲಸವನ್ನು ಪತ್ರಿಕಾ ರಂಗ ಮಾಡುತ್ತಿದೆ. ಆದರೆ ತಮ್ಮ ಕರ್ತವ್ಯದ ಸಂದರ್ಭದಲ್ಲಿ ಪತ್ರಕರ್ತರು ಹಲ್ಲೆಗೊಳಗಾಗುವ ಸಂದರ್ಭಗಳೂ ಹೆಚ್ಚುತ್ತಿವೆ. ಇದರಿಂದ ಪತ್ರಕರ್ತರಿಗೆ ಸೇವಾ ಭದ್ರತೆ ಕೊಡುವ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಎಂದರು.

bags distributed to students on behalf of press day

ಟ್ಯಾಗೋರ್ ಪ್ರಶಸ್ತಿ: ಕನ್ನಡ ಪ್ರಭ ಹಾವೇರಿ ವರದಿಗಾರ ನಾರಾಯಣ ಹೆಗಡೆ, ತರುಣ ಭಾರತ ವರದಿಗಾರ ಪಿ.ಕೆ.ಚಾಪಗಾಂವಕರ್ ಹಾಗೂ ಟಿವಿ9 ಕ್ಯಾಮರಾಮನ್ ದಿನೇಶ ಹಿತ್ತಲದವರ್ ಅವರಿಗೆ ಟ್ಯಾಗೋರ್ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಪ್ರಜಾವಾಣಿ ವರದಿಗಾರ ಸದಾಶಿವ ಎಂ.ಎಸ್. ಸನ್ಮಾನಿತರನ್ನು ಪರಿಚಯಿಸಿದರು. ಪ್ರಶಾಂತ ಮಹಾಲೆ, ಎಸ್.ಎಸ್.ಸಂದೀಪ ಸಾಗರ, ವಾಸುದೇವ ಗೌಡ, ಗುರುಪ್ರಸಾದ ಹೆಗಡೆ ಹಾಗೂ ದೇವರಾಜ ನಾಯ್ಕ ಅವರಿಗೆ ಯುವ ಸಾಧಕ ಪತ್ರಕರ್ತ ಪ್ರಶಸ್ತಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಸತತ 101 ವರ್ಷಗಳಿಂದ ಮುದ್ರಣವಾಗುತ್ತಿರುವ ರಾಜ್ಯದ ಏಕೈಕ ಪತ್ರಿಕೆ ಕಾನಡಾ ವೃತ್ತ'ದ ಸಂಪಾದಕ ಶ್ರೀಕಾತ ಶಾನಬಾಗ ಅವರನ್ನು ಸನ್ಮಾನಿಸಲಾಯಿತು. ಪತ್ರಿಕೆಯ ಕುರಿತು ಕೌತುಕದ ಇತಿಹಾಸವನ್ನು ಕನ್ನಡ ಪ್ರಭದ ವಸಂತಕುಮಾರ ಕತಗಾಲ ಬಿಚ್ಚಿಟ್ಟರು.

bags distributed to students on behalf of press day

ಉಚಿತ ಆರೋಗ್ಯ ಚಿಕಿತ್ಸೆ: ಪತ್ರಿಕಾ ದಿನಾಚರಣೆ ಜೊತೆ ಜೊತೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹೈಸ್ಕೂಲ್ ಆವರಣದಲ್ಲಿ ಯಶಸ್ವಿಯಾಗಿ ಸೋಮವಾರ ಕೈಗೊಳ್ಳಲಾಯಿತು. ಸತ್ಯ ಸಾಯಿ ಸೇವಾ ಸಂಸ್ಥೆಯ ಸಾಯಿ ಧನ್ವಂತರಿ ವಾಹನ ಹೈಸ್ಕೂಲ್ ಆವರಣಕ್ಕೆ ಆಗಮಿಸಿತ್ತು. ಶಾಲೆ ಹಾಗೂ ಸುತ್ತಲಿನ ಗ್ರಾಮಗಳ 137 ಜನರಿಗೆ ಉಚಿತ ಚಿಕಿತ್ಸೆ ನೀಡಲಾಯಿತು. ವೈದ್ಯರ ದಿನಾಚರಣೆಯ ಅಂಗವಾಗಿ ಎಲ್ಲ ವೈದ್ಯರು ಹಾಗೂ ಸತ್ಯಸಾಯಿ ಸೇವಾ ಸಮಿತಿಯ ರಾಮದಾಸ ಆಚಾರಿ ಅವರನ್ನು ಸನ್ಮಾನಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+