• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

68 ವರ್ಷ ವಯಸ್ಸಿನ ಇವರು ಸಿವಿಲ್ ಡಿಪ್ಲೋಮಾ ವಿದ್ಯಾರ್ಥಿ

|
Google Oneindia Kannada News

ಕಾರವಾರ, ಫೆಬ್ರವರಿ 4: ಅವರಿಗೀಗ ಮಕ್ಕಳನ್ನು ಎತ್ತಿ ಆಡಿಸುವ ವಯಸ್ಸು. ಈ ಪ್ರಾಯದಲ್ಲೂ ಅವರು ಓರ್ವ ಕ್ರಿಯಾಶೀಲ ಹಾಗೂ ಆದರ್ಶ ವಿದ್ಯಾರ್ಥಿಯಾಗಿ ನಿತ್ಯ ತರಗತಿಗೆ ಹಾಜರಾಗುತ್ತಿದ್ದಾರೆ. ತಮಗಿಂತ ಹಿರಿಯನಿಗೆ ಶಿಕ್ಷಕರಾಗಿ ಪಾಠ ಮಾಡುವ ಅದೃಷ್ಟ ಆ ಕಾಲೇಜಿನ ಉಪನ್ಯಾಸಕರದ್ದು.

ಅಂದಹಾಗೆ ಆ ಯಂಗ್ ಸೀನಿಯರ್ ವಿದ್ಯಾರ್ಥಿಯೇ ಶಿರಸಿಯ ಆದರ್ಶ ನಗರದ ನಿವಾಸಿ ನಾರಾಯಣ ಭಟ್ಟ. ವಯಸ್ಸು 68, ಆದರೂ ಇಲ್ಲಿನ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ. ಎಕ್ಸ್ಟ್ರನಲ್ ವಿದ್ಯಾರ್ಥಿ ಕೂಡ ಇವರಲ್ಲ. ನಿತ್ಯ ಕಾಲೇಜಿನ ಸಮವಸ್ತ್ರ ಧರಿಸಿ ಸರಿಯಾದ ಸಮಯಕ್ಕೆ ಕಾಲೇಜಿನ ತರಗತಿಗೆ ಹಾಜರಾಗಿ, ಟೀನೇಜ್ ವಿದ್ಯಾರ್ಥಿಗಳ ಜೊತೆಗೆ ಹೊಂದಿಕೊಂಡು, ಅವರಂತೆಯೇ ಕ್ಲಾಸಿನಲ್ಲಿ ಕುಳಿತು ಪಾಠ ಕೇಳುತ್ತಾರೆ.

ನಿತ್ಯದ ಹೋಮ್ ವರ್ಕ್ ಅನ್ನು ಕೂಡ ಚಾಚೂ ತಪ್ಪದೇ ಮಾಡಿಕೊಂಡು ಬರುವ ಮೂಲಕ ಕಾಲೇಜಿನ ಆದರ್ಶ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದಾರೆ. ತಾಂತ್ರಿಕ ಶಿಕ್ಷಣದ ಇತಿಹಾಸದಲ್ಲೇ ಇಷ್ಟೊಂದು ಸೀನಿಯರ್ ವ್ಯಕ್ತಿ ವಿದ್ಯಾರ್ಥಿಯಾಗಿದ್ದು ಬಹುಶಃ ಇದೇ ಮೊದಲು.

ಕಾರವಾರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 1973ರಲ್ಲಿ ಮೆಕ್ಯಾನಿಕಲ್ ಡಿಪ್ಲೋಮಾದಲ್ಲಿ ರಾಜ್ಯಕ್ಕೆ ದ್ವಿತೀಯ ಶ್ರೇಣಿ ಪಡೆದಿದ್ದ ನಾರಾಯಣ ಭಟ್ಟರು, ಬಿಣಗಾದ ಕಾಸ್ಟಿಕ್ ಸೋಡಾ ಫ್ಯಾಕ್ಟರಿಯಲ್ಲಿ (ಆಗಿನ ಬಿಲ್ಟ್, ಈಗಿನ ಗ್ರಾಸಿಮ್ ಇಂಡಸ್ಟ್ರೀಸ್) ನೌಕರಿಗೆ ಸೇರಿಕೊಂಡಿದ್ದರು.

ಉತ್ತರಾಖಂಡದಲ್ಲಿ 'ಉತ್ತರ ಕನ್ನಡದ ಸಮಸ್ಯೆ ಮತ್ತು ಪರಿಹಾರೋಪಾಯ’ಉತ್ತರಾಖಂಡದಲ್ಲಿ 'ಉತ್ತರ ಕನ್ನಡದ ಸಮಸ್ಯೆ ಮತ್ತು ಪರಿಹಾರೋಪಾಯ’

1993ರವರೆಗೆ ಕರ್ತವ್ಯ ನಿರ್ವಹಿಸಿ, ನಂತರ ಗುಜರಾತ್ ನಲ್ಲಿ 2013ರವರೆಗೆ ಕಾರ್ಯನಿರ್ವಹಿಸಿ ನಿವೃತ್ತರಾಗಿ, ಶಿರಸಿಗೆ ಬಂದು ನಿವೃತ್ತಿ ಜೀವನ ಕಳೆಯುತ್ತಿದ್ದರು.

ಆದರೆ ಸುಮ್ಮನೆ ಮನೆಯಲ್ಲಿ ಸಮಯ ವ್ಯರ್ಥ ಮಾಡುವ ಬದಲು ಸಿವಿಲ್ ಡಿಪ್ಲೋಮಾ ಮಾಡಬೇಕೆಂಬ ಮಹಾದಾಸೆಯೊಂದಿಗೆ ಶಿರಸಿ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿಗೆ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದು, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಸಹಕಾರದಿಂದ 2019ರಲ್ಲಿ ಪ್ರವೇಶ ಲಭಿಸಿ, ನಿತ್ಯ ತರಗತಿಗೆ ಹಾಜರಾಗಿ ಪ್ರಥಮ ವರ್ಷದಲ್ಲಿ ಶೇ.91 ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.

   ಒಂಟಿ ಸಲಗಕ್ಕೆ ಸಾಥ್ ಕೊಟ್ಟಿದ್ದು ಯಾರು ಗೊತ್ತಾ?? | Oneindia Kannada

   ಮೆಕ್ಯಾನಿಕಲ್ ಡಿಪ್ಲೊಮಾ ಮುಗಿಸಿದ ನನಗೆ ಸಿವಿಲ್ ಡಿಪ್ಲೊಮಾ ಮಾಡಬೇಕೆಂಬ ಹುಮ್ಮಸ್ಸಿತ್ತು. ಹೀಗಾಗಿ ಕಾಲೇಜಿಗೆ ಸೇರುತ್ತೇನೆ ಎಂದಾಗ ಪತ್ನಿ,‌ ಮಕ್ಕಳು, ಅಳಿಯಂದಿರು ಕೂಡ ಖುಷಿಯಿಂದಲೇ ಒಪ್ಪಿದರು ಎಂದು ನಾರಾಯಣ ಭಟ್ ಹುಮ್ಮಸ್ಸಿನಿಂದಲೇ ನುಡಿಯುತ್ತಾರೆ.

   English summary
   Narayan Bhatta is a resident of the Adarsha nagar of Sirsi. Age 68, he is a student at RN Shetty Polytechnic College.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X