ಅಂಕೋಲ ಬಳಿ ಎರಡು ಕೋಟಿ ಮೌಲ್ಯದ ಬ್ರೌನ್ ಶುಗರ್ ವಶಕ್ಕೆ
ಕಾರವಾರ, ಮಾರ್ಚ್ 18: ಎರಡು ಕೋಟಿ ಮೌಲ್ಯದ ಬ್ರೌನ್ ಶುಗರ್ ಸಾಗಾಟ ಮಾಡುತ್ತಿದ್ದವರನ್ನು ಉತ್ತರ ಕನ್ನಡ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿಯಿಂದ ಅಂಕೋಲಾ ಮಾರ್ಗವಾಗಿ ಕಾರಿನಲ್ಲಿ ಬ್ರೌನ್ ಶುಗರ್ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು, ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಿಂದ 2 ಕೆ.ಜಿ 600 ಗ್ರಾಂ ಬ್ರೌನ್ ಶುಗರ್ ಅನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ. ಸಿದ್ದಾಪುರ ಮೂಲದ ವೀರೇಂದ್ರ ಹೆಗಡೆ, ನಾರಾಯಣ ಭಾಗ್ವತ್, ಅಂಕೋಲಾ ಹಳವಳ್ಳಿಯ ಚಂದ್ರಹಾಸ ಗುನಗಾ ಹಾಗೂ ಪ್ರವೀಣ್ ಭಟ್ ಪೊಲೀಸರ ವಶದಲ್ಲಿದ್ದಾರೆ.












Click it and Unblock the Notifications