ಜಮೀರ್‌ಗೆ ಸಿಕ್ತು ಸಿದ್ದರಾಮಯ್ಯ ಬಳಸುತ್ತಿದ್ದ ಫಾರ್ಚೂನರ್‌ ಕಾರು

Recommended Video

      ಜಮೀರ್‌ಗೆ ಸಿಕ್ತು ಸಿದ್ದರಾಮಯ್ಯ ಬಳಸುತ್ತಿದ್ದ ಫಾರ್ಚೂನರ್‌ ಕಾರು | Oneindia Kannada

      ಬೆಂಗಳೂರು, ಜು.3: ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ಕೊನೆಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸುತ್ತಿದ್ದ ಫಾರ್ಚೂನರ್ ಕಾರು ಪಡೆಯಲು ಯಶಸ್ವಿಯಾಗಿದ್ದಾರೆ.

      ಸಚಿವರಾದ ಬಳಿಕ ಸರ್ಕಾರದಿಂದ ಇನ್ನೋವಾ ಕಾರನ್ನು ಅವರಿಗೆ ನೀಡಲಾಗಿತ್ತು ಆದರೆ ಸಿದ್ದರಾಮಯ್ಯ ಅವರು ಬಳಸಿದ್ದ ಫಾರ್ಚೂನರ್‌ ಕಾರು ತಮಗೆ ಬೇಕು ಎಂದು ಪಟ್ಟು ಹಿಡಿದಿದ್ದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು ನನಗೆ ಹೊಸ ಕಾರು ಬೇಕು ಎಂದು ಕೇಳಿಲ್ಲ ಸಿದ್ದರಾಮಯ್ಯ ಅವರು ಬಳಸಿದ್ದ ಹಳೆಯ ಫಾರ್ಚೂನರ್‌ ಕಾರು ಬೇಕು ಎಂದು ಹೇಳಿದ್ದರು.

      ಇದೀಗ ಹಲವು ದಿನಗಳ ಬಳಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬಳಸುತ್ತಿದ್ದ ಕೆಎ-೦1, ಜಿಎ-2016 ಕಾರು ಜಮೀರ್‌ ಅವರಿಗೆ ಸರ್ಕಾರ ನೀಡಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ಕಾರಿಗೂ ಮೊದಲು 2013ರಿಂದ ಸಿದ್ದರಾಮಯ್ಯ ಅವರು ಕೆಎ-01, ಜಿ-5734 ಫಾರ್ಚೂನರ್‌ ಕಾರು ಬಳಸುತ್ತಿದ್ದರು.

      Zameer gets Fortuner SUV finally

      2016ರ ಜೂನ್‌ನಲ್ಲಿ ಕೆಎ-01, ಜಿಎ-2016 ಕಾರನ್ನು ಹೊಸದಾಗಿ ಪಡೆದಿದ್ದರು. ಹಳೆಯ ಕಾರಿನ ಮೇಲೆ ಕಾಗೆ ಕುಳಿತಿದ್ದರಿಂದ ಕಾರು ಬದಲಿಸಿದ್ದಾಗಿಯೂ ವಿವಾದ ಉಂಟಾಗಿತ್ತು. ಇದೀಗ 2016ರ ಜೂನ್‌ನಿಂದ ಸಿದ್ದರಾಮಯ್ಯ ಬಳಸಿದ್ದ ಕಾರು ಜಮೀರ್‌ ಪಾಲಾಗಿದೆ ಎಂದು ತಿಳಿದುಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+