ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜಮೀರ್ ಅಹ್ಮದ್
ಬೆಂಗಳೂರು, ಜೂನ್ 06: ಇಂದು ಸಚಿವರಾದ ಎಲ್ಲರೂ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಕಾಂಗ್ರೆಸ್‌ನ ಜಮೀರ್ ಅಹ್ಮದ್ ಖಾನ್ ಮಾತ್ರ ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಚಾಮರಾಜಪೇಟೆ ಕ್ಷೇತ್ರದಿಂದ ಗೆದ್ದುಬಂದಿರುವ ಜಮೀರ್ ಅಹ್ಮದ್ ಅವರು ಅಧಿಕಾರ ಪದ, ಗೋಪ್ಯತಾ ಪ್ರಮಾಣ ವಚನವನ್ನು ಇಂಗ್ಲಿಷ್‌ನಲ್ಲಿ ಸ್ವೀಕರಿಸಿ ಅಲ್ಲಾಹ್ ನ ಹೆಸರಿನಲ್ಲಿ ಪ್ರಮಾಣ ಮಾಡಿದರು.
ಜಮೀರ್ ಅಹ್ಮದ್‌ಗೆ ಕನ್ನಡ ಬರುತ್ತದೆಯಾದರೂ ಅವರ ಕನ್ನಡದಲ್ಲಿ ಉರ್ದು ಪ್ರಭಾವ ಹೆಚ್ಚಿದೆ ಹಾಗಾಗಿ ಅವರ ಉಚ್ಛಾರ ಒಮ್ಮೊಮ್ಮೆ ಹಾಸ್ಯಕ್ಕೆ ಗುರಿಯಾಗುತ್ತದೆ. ಈ ಹಿಂದೆ ಅವರು ಮಾಡಿರುವ ಭಾಷಣಗಳು ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯಕ್ಕೆ ಗುರಿಯಾಗಿರುವುದೂ ಉಂಟು.

ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಬಂದು ಗೆಲುವು ಕಂಡಿದ್ದ ಜಮೀರ್ ಅಹ್ಮದ್‌ಗೆ ಈ ಬಾರಿ ಸಚಿವ ಸ್ಥಾನ ಸಿಗುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ ಸಿದ್ದರಾಮಯ್ಯ ಅವರ ಕೃಪೆಯಿಂದ ಜಮೀರ್‌ಗೆ ಸಚಿವ ಸ್ಥಾನ ಒಲಿದಿದೆ ಎನ್ನಲಾಗುತ್ತಿದೆ.












Click it and Unblock the Notifications