ಬೆಂಗಳೂರು- ಹುಬ್ಬಳ್ಳಿ ರೈಲಿನಲ್ಲಿ 10 ವರ್ಷದ ಬಾಲಕಿಗೆ ಯುವಕನಿಂದ ಲೈಂಗಿಕ ಕಿರುಕುಳ

ಕರ್ನಾಟಕ, ಅಕ್ಟೋಬರ್ 27: ಬೆಂಗಳೂರಿನಿಂದ ಹುಬ್ಬಳ್ಳಿಗೆ ತನ್ನ ತಾಯಿ ಮತ್ತು ಅಜ್ಜಿಯೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 10 ವರ್ಷದ ಬಾಲಕಿಗೆ ಯುವಕನೊಬ್ಬ ಇತ್ತೀಚೆಗೆ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಪ್ರಕರಣ ಹೊರಬಿದ್ದಿದೆ.

ಸಹ ಪ್ರಯಾಣಿಕನೊಬ್ಬ ಲೈಂಗಿಕ ಕಿರುಕುಳ ಕೃತ್ಯದ ವೀಡಿಯೊವನ್ನು ಚಿತ್ರೀಕರಿಸಿದ ನಂತರ ಯುವಕನನ್ನು ಬಂಧಿಸಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಅಕ್ಟೋಬರ್ 17ರಂದು ರಾತ್ರಿ ಕೆಎಸ್‌ಆರ್ ಬೆಂಗಳೂರು- ಶ್ರೀಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ವಿಶೇಷ (ರೈಲು ಸಂಖ್ಯೆ 06241) ರೈಲು ತುಮಕೂರು ನಿಲ್ದಾಣವನ್ನು ದಾಟಿ ಕಡೂರು ಕಡೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಸಹ ಪ್ರಯಾಣಿಕರು ತಿಳಿಸಿದ್ದಾರೆ.

Youth Sexually Harasses 10-yr-old Girl in Bengaluru- Hubballi Train; Arrested And Booked Under Pocso Act

ಈ ಕುರಿತು ವಿವರ ನೀಡಿರುವ ಅವರು, ಯುವಕ ದಿನವಿಡೀ ಯುವತಿಯನ್ನು ಹಿಂಬಾಲಿಸುತ್ತಿದ್ದನು. "ಅವನು ಅವಳ ಕುಟುಂಬವು ನಿದ್ರಿಸುವುದನ್ನು ತಡರಾತ್ರಿಯವರೆಗೆ ಕಾಯುತ್ತಿದ್ದನು. ನಂತರ ಅವನು ಹುಡುಗಿಯನ್ನು ನೋಡುತ್ತಿದ್ದನು ಮತ್ತು ಅವಳನ್ನು ಉತ್ತೇಜಿಸಲು ಪ್ರಯತ್ನಿಸಿದನು. ಸಂತ್ರಸ್ತ ಬಾಲಕಿಗೆ ಏನು ನಡೆಯುತ್ತಿದೆ ಎಂಬುದರ ಸುಳಿವು ಕೂಡಾ ಇರಲಿಲ್ಲ ಎಂದು ತಿಳಿಸಿದ್ದಾರೆ.

ಘಟನೆಯನ್ನು ಕಣ್ಣಾರೆ ಕಂಡ ಸಹ ಪ್ರಯಾಣಿಕನೊಬ್ಬನು ತನ್ನ ಪೊಲೀಸ್ ಸಹೋದರನಿಗೆ ಸಹಾಯಕ್ಕಾಗಿ ಕರೆ ಮಾಡಿದ್ದಾನೆ. ಲೈಂಗಿಕ ಕಿರುಕುಳ ನೀಡುವವರನ್ನು ವಿಚಾರಣೆಗೆ ಒಳಪಡಿಸಲು ಕೆಲವು ಪುರಾವೆಗಳನ್ನು ಸೆರೆ ಹಿಡಿಯಲು ಹೇಳಿದ್ದಾರೆ. ನಂತರ ಪ್ರಯಾಣಿಕರು ತ್ವರಿತವಾಗಿ ವಿಡಿಯೊವನ್ನು ಚಿತ್ರೀಕರಿಸಿದರು. ಬಳಿಕ ರೈಲು ಬೋಗಿಯಲ್ಲಿದ್ದ ಜನರನ್ನು ಎಚ್ಚರಗೊಳಿಸಿದರು.

"ಲೈಂಗಿಕ ಕಿರುಕುಳ ನೀಡುವದನ್ನು ಗಮನಿಸಿದ ಪ್ರಯಾಣಿಕರು ಯುವಕನನ್ನು ಅವಾಚ್ಯವಾಗಿ ನಿಂದಿಸಿ, ಥಳಿಸಿದ್ದಾರೆ. ಒಬ್ಬ ಪ್ರಯಾಣಿಕರು ರೈಲ್ವೆಯ ತುರ್ತು ಪ್ರತಿಕ್ರಿಯೆ ವ್ಯವಸ್ಥೆ ಸಂಖ್ಯೆ 112ಗೆ ಕರೆ ಮಾಡಿದರು. ಬೆಂಗಳೂರು- ಹುಬ್ಬಳ್ಳಿ ವಿಶೇಷ ರೈಲು ಕಡೂರು ನಿಲ್ದಾಣವನ್ನು ತಲುಪಿದಾಗ, ಸರ್ಕಾರಿ ರೈಲ್ವೆ ಪೊಲೀಸರು ಕಂಪಾರ್ಟ್‌ಮೆಂಟ್‌ಗೆ ಬಂದು ಯುವಕನನ್ನು ಕರೆದೊಯ್ದರು ಎಂದು ಬಲ್ಲ ಮೂಲಗಳು ತಿಳಿಸಿದೆ.

ಆರೋಪಿಯು ಕರ್ನಾಟಕ ಮೂಲದವನಾಗಿದ್ದು, ನಿರುದ್ಯೋಗಿಯಾಗಿದ್ದಾನೆ. ಅವನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. "ಲೈಂಗಿಕ ಕಿರುಕುಳದ ವಿಡಿಯೋ ಯುವಕನನ್ನು ಕಠಿಣ ಕಾಯಿದೆಯಡಿಯಲ್ಲಿ ದಾಖಲಿಸಲು ದೊಡ್ಡ ಪುರಾವೆಯಾಗಿದೆ. ಪೋಕ್ಸೊ ಕಾಯ್ದೆ ಅಡಿಯಲ್ಲಿ ಅಪರಾಧಗಳು ಜಾಮೀನು ರಹಿತವಾಗಿವೆ ಎನ್ನಲಾಗಿದ್ದು, ಯುವಕನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

Recommended Video

      New Zealand ಆಟಗಾರನ ಮುಂದೆ Security ಎಂದು ಕೂಗಿದ್ದೇಕೆ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+