ಕುಂದಾಪುರ ಬಾಲಕಿ ಮೇಲೆ ಅತ್ಯಾಚಾರ, ಸಿಕ್ಕಿಬಿದ್ದ ಕಾಮುಕ
ಕುಂದಾಪುರ, ಆಗಸ್ಟ್, 12 : ಖಂಬದಕೋಣೆ ಗ್ರಾಮದ ಅಪ್ರಾಪ್ತೆಯ ಮೇಲೆ ಮಂಗಳವಾರ ಅತ್ಯಾಚಾರ ನಡೆದಿದ್ದು, ಕಾಮುಕನನ್ನು ಸೆರೆಹಿಡಿದ ಪೊಲೀಸರು ಪೊಕ್ಸೋ, ಸೆಕ್ಷನ್ 363 ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.
ತೀರ್ಥಹಳ್ಳಿ ತರೀನ್ ಅಬ್ರಾಂ (34 ) ಎಂಬಾತ ಅತ್ಯಾಚಾರ ಎಸಗಿದ್ದು, ಈತ ಮೂಲತಃ ಬೆಂಗಳೂರಿನ ಹೆಬ್ಬಾಳದ ಟಾಟಾ ನಗರದವನು. ಬೈಂದೂರಿನ ಸಂಬಂಧಿಕರ ಮನೆಯಿಂದ ವಾಪಸಾಗುವ ವೇಳೆ ಈ ದುಷ್ಕೃತ್ಯಕ್ಕೆ ಮುಂದಾಗಿದ್ದಾನೆ.[ಅಮೆರಿಕದ ರಾಜಧಾನಿಯಲ್ಲಿ ಪುರುಷರು ಸುರಕ್ಷಿತರಲ್ಲ!]

ಘಟನೆ ವಿವರ :
ಬಾಲಕಿಯು ಖಂಬದಕೋಣೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮಂಗಳವಾರ ಸುಮಾರು 4.30ರ ಸಮಯದಲ್ಲಿ ತರಗತಿ ಮುಗಿಸಿ ತನ್ನ ಮನೆ ಹೇರಂಜಾಲು ಗ್ರಾಮದ ಹೆಗ್ಗಾವಿಹಿತ್ಲು ಎಂಬಲ್ಲಿಗೆ ನಡೆದುಕೊಂಡು ಹೋಗುತ್ತಿದ್ದಳು.
ಆ ಸಮಯದಲ್ಲಿ ಮಾರುತಿ ಇಕೋ ಕಾರಿನಲ್ಲಿ ಬಂದ ಅಬ್ರಾಂ ಬಾಲಕಿಯನ್ನು ಬಲವಂತದಿಂದ ಕಾರಿನೊಳಗೆ ಎಳೆದು ಅತ್ಯಾಚಾರ ನಡೆಸಿದ್ದಾನೆ. ಬಾಲಕಿ ಕಿರಿಚಾಟ ಆಲಿಸಿದ ಗ್ರಾಮಸ್ಥರು ಆರೋಪಿಯನ್ನು ಹಿಂಬಾಲಿಸಿದ್ದು, ಆತ ಆಕೆಯನ್ನು ಕಾರಿನಿಂದ ದೂಡಿ ಪರಾರಿಯಾಗಿದ್ದನು.
ತಲೆಮರೆಸಿಕೊಂಡ ಆರೋಪಿ ಅಬ್ರಾಂ ಕೊನೆಗೆ ಬಸ್ಸಿನಲ್ಲಿ ಹೋದದ್ದನ್ನು ಖಾತರಿ ಪಡಿಸಿಕೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬ್ರಹ್ಮಾವರದಲ್ಲಿ ಆತನನ್ನು ಹಿಡಿದು ಬೈಂದೂರು ಪೊಲೀಸರ ವಶಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications