ಯಡಿಯೂರಪ್ಪಗೆ ಕೋವಿಡ್ ಸೋಂಕು; 75 ಜನರಿಗೆ ಕ್ವಾರಂಟೈನ್

ಬೆಂಗಳೂರು, ಆಗಸ್ಟ್ 04: ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಕೋವಿಡ್ ಸೋಂಕು ತಗುಲಿವೆ. ಯಡಿಯೂರಪ್ಪ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 75 ಜನರಿಗೆ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗಿದೆ. ಇವರಲ್ಲಿ ಉಪ ಮುಖ್ಯಮಂತ್ರಿಗಳು, ಅಧಿಕಾರಿಗಳು ಸೇರಿದ್ದಾರೆ.

Recommended Video

      Ayodhya Rambhoomi ಪೂಜೆಗೆ Karnatakaದ 8 ಮಂದಿಗೆ ಆಹ್ವಾನ | Oneindia Kannada

      ಯಡಿಯೂರಪ್ಪಗೆ ಯಾವುದೇ ಸೋಂಕಿನ ಲಕ್ಷಣಗಳು ಇಲ್ಲ. ಆದರೆ, ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಭಾನುವಾರ ರಾತ್ರಿ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಜೊತೆ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ.

      ಮುಖ್ಯಮಂತ್ರಿಗಳ ಜೊತೆ ಸಂಪರ್ಕದಲ್ಲಿದ್ದ 75 ಜನರಿಗೆ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗಿದೆ. ಇವರಲ್ಲಿ ಕುಟುಂಬ ಸದಸ್ಯರು, ಗೃಹ ಕಚೇರಿ ಸಿಬ್ಬಂದಿ, ಉಪ ಮುಖ್ಯಮಂತ್ರಿಗಳು, ಐಎಎಸ್ ಅಧಿಕಾರಿಗಳು ಸೇರಿದ್ದಾರೆ.

      ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಡಾ. ಅಶ್ವತ್ಥ ನಾರಾಯಣ, ಗೋವಿಂದ ಕಾರಜೋಳಗೆ ಹೋ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಹಲವು ಅಧಿಕಾರಿಗಳು ಕ್ವಾರಂಟೈನ್‌ ಆಗಿದ್ದಾರೆ.

      ಗೃಹ ಕಚೇರಿಯ ಸಿಬ್ಬಂದಿಗಳು

      ಗೃಹ ಕಚೇರಿಯ ಸಿಬ್ಬಂದಿಗಳು

      ಯಡಿಯೂರಪ್ಪ ನಿವಾಸ 'ಕಾವೇರಿ', ಗೃಹ ಕಚೇರಿ 'ಕೃಷ್ಣಾ'ದ ಸಿಬ್ಬಂದಿಗಳನ್ನು ಪರೀಕ್ಷೆ ಮಾಡಲಾಗಿದೆ. ಮೊದಲು ಹಂತದಲ್ಲಿ ಪರೀಕ್ಷೆ ಮಾಡಿದ 30 ಸಿಬ್ಬಂದಿ ಪೈಕಿ 6 ಜನರಿಗೆ ಸೋಂಕು ಖಚಿತವಾಗಿದೆ. 45 ಜನರ ವರದಿ ಬರಬೇಕಿದೆ.

      75 ಜನರ ಪ್ರಾಥಮಿಕ ಸಂಪರ್ಕ

      75 ಜನರ ಪ್ರಾಥಮಿಕ ಸಂಪರ್ಕ

      ಯಡಿಯೂರಪ್ಪ ಜೊತೆ ಸಂಪರ್ಕದಲ್ಲಿದ್ದ 75 ಜನರನ್ನು ಗುರುತಿಸಲಾಗಿದೆ. ಇವರಲ್ಲಿ ಕುಟುಂಬ ಸದಸ್ಯರು, ಸಚಿವರು, ಐಎಎಸ್ ಅಧಿಕಾರಿಗಳು, ಕಾರು ಚಾಲಕರು, ಭದ್ರತಾ ಸಿಬ್ಬಂದಿ ಸೇರಿದ್ದಾರೆ. ಎಲ್ಲರ ಪರೀಕ್ಷೆ ವರದಿ ಬರುವ ತನಕ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.

      ಶಾಸಕರು, ಸಚಿವರು

      ಶಾಸಕರು, ಸಚಿವರು

      ಮೂವರು ಉಪ ಮುಖ್ಯಮಂತ್ರಿಗಳು, ಏಳು ಸಚಿವರು, 10 ಶಾಸಕರು ಯಡಿಯೂರಪ್ಪ ಅವರನ್ನು ಒಂದು ವಾರದಲ್ಲಿ ಭೇಟಿಯಾಗಿದ್ದರು. 10 ಹಿರಿಯ ಅಧಿಕಾರಿಗಳ ಜೊತೆ ಯಡಿಯೂರಪ್ಪ ಸಭೆ ನಡೆಸಿದ್ದರು. ಇವರಲ್ಲಿ ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತ ಕಮಲ್ ಪಂತ್ ಸಹ ಸೇರಿದ್ದಾರೆ.

      ಆಸ್ಪತ್ರೆಯಲ್ಲಿ ಚಿಕಿತ್ಸೆ

      ಆಸ್ಪತ್ರೆಯಲ್ಲಿ ಚಿಕಿತ್ಸೆ

      77 ವರ್ಷದ ಬಿ. ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೂ ಕೋವಿಡ್ ಸೋಂಕು ದೃಢಪಟ್ಟಿದ್ದು, ಅವರು ಸಹ ಸೋಮವಾರ ರಾತ್ರಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+