ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷಾಂತ್ಯ ವಿಶೇಷ : 2015ರ ಏಪ್ರಿಲ್ ಹಿನ್ನೋಟ

|
Google Oneindia Kannada News

ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕಾರಣಿ : ಏಪ್ರಿಲ್ 2 : ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಏಪ್ರಿಲ್ 2ರಿಂದ ಮೂರು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಯಿತು. ಕರ್ನಾಟಕದಲ್ಲಿ 1982, 1993, 1999, 2008, 2015 ಸೇರಿ ಒಟ್ಟು 5 ಬಾರಿ ಕಾರ್ಯಕಾರಣಿ ಸಭೆ ನಡೆದಿದೆ.

ಸರ್ಕಾರದಿಂದ ಜಾತಿ ಗಣತಿ : ಏಪ್ರಿಲ್ 11 : ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಏಪ್ರಿಲ್ 11 ರಿಂದ 30 ರವರೆಗೆ ನಡೆಯಿತು. ಈ ಸಮೀಕ್ಷೆ ಮೂಲಕ ರಾಜ್ಯದ ಪ್ರತಿಯೊಂದು ಕುಟುಂಬಕ್ಕೆ ಸೇರಿದ ವ್ಯಕ್ತಿಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿ-ಗತಿ, ಔದ್ಯೋಗಿಕ-ಆರ್ಥಿಕ ಮಾಹಿತಿಗಳನ್ನು ಸಂಗ್ರಹಣೆ ಮಾಡಲಾಯಿತು. [ಜಾತಿ ಗಣತಿ : ಏಕೆ, ಏನು, ಇದೆಲ್ಲಾ ಬೇಕೆ?]

april 2015

ಹುಬ್ಬಳ್ಳಿಗೆ ವಿಮಾನ ಸೇವೆ ಆರಂಭ : ಏಪ್ರಿಲ್ 12 : ಬೆಂಗಳೂರು-ಹುಬ್ಬಳ್ಳಿ ನಡುವಿನ ವಿಮಾನಯಾನ ಸೇವೆವೆ ಏರ್‌ ಪೆಗಾಸಸ್ ಚಾಲನೆ ನೀಡಿತು. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಏರ್ ಪೆಗಾಸಸ್ ವಿಮಾನಯಾನ ಸೇವೆಗೆ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು. [ವರ್ಷಾಂತ್ಯ ವಿಶೇಷ : 2015ರ ಜನವರಿ ಹಿನ್ನೋಟ]

ಕಾವೇರಿಗಾಗಿ ಕರ್ನಾಟಕ ಬಂದ್ : ಏಪ್ರಿಲ್ 18 : ಕುಡಿಯುವ ನೀರಿಗಾಗಿ ಕರ್ನಾಟಕ ಸರ್ಕಾರ ಆರಂಭಿಸಲಿರುವ ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ತಮಿಳುನಾಡು ಕ್ರಮ ಖಂಡಿಸಿ ಏ.18ರಂದು 'ಕನ್ನಡ ಒಕ್ಕೂಟ' ಹೆಸರಿನಲ್ಲಿ ಕರ್ನಾಟಕ ಬಂದ್‌ ನಡೆಸಿತು. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. [ಮೇಕೆದಾಟು ಯೋಜನೆ ವಿವಾದ ಏಕೆ, ಏನು?]

ಬದನವಾಳು ಸತ್ಯಾಗ್ರಹ : ಏಪ್ರಿಲ್ 19 : 'ಯಂತ್ರ ನಾಗರೀಕತೆ ನಿಗ್ರಹಿಸೋಣ, ಶ್ರಮ ಸಹಿತ ಸರಳ ಬದುಕನ್ನು ಪೋಷಿಸೋಣ' ಎಂಬ ಘೋಷಣೆಯೊಂದಿಗೆ ಏಪ್ರಿಲ್ 19ರಂದು ಬದನವಾಳು ಗ್ರಾಮದಲ್ಲಿ 'ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶ' ನಡೆಯಿತು. ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಈ ಸಮಾವೇಶಕ್ಕೆ ಬೆಂಬಲ ನೀಡಿದರು. ಮೈಸೂರು ಜಿಲ್ಲೆಯ ದಕ್ಷಿಣ ತುದಿಯಲ್ಲಿ ಚಾಮರಾಜನಗರ ಜಿಲ್ಲೆಗೆ ಅಂಟಿಕೊಡಂತೆ ಬದನವಾಳು ಗ್ರಾಮವಿದೆ.

iit

ಐಐಟಿ ಸ್ಥಾಪನೆಗೆ ಮೂರು ಜಿಲ್ಲೆ ಆಯ್ಕೆ : ಏಪ್ರಿಲ್ 25 : ಕರ್ನಾಟಕದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯನ್ನು ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ಮೂರು ಜಿಲ್ಲೆಗಳನ್ನು ಗುರುತಿಸಿತು. ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ರಾಯಚೂರು, ಧಾರವಾಡ, ಮೈಸೂರು ಜಿಲ್ಲೆಗಳನ್ನು ಐಐಟಿ ಸ್ಥಾಪನೆಗೆ ಗುರುತಿಸಲಾಗಿದೆ ಎಂದು ಹೇಳಿದರು. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು.

ಮೆಟ್ರೋ ಸಂಚಾರ ಆರಂಭ : ಏಪ್ರಿಲ್ 29 : ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ನಡುವಿನ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ಮೇ 1 ರಂದು ಚಾಲನೆ ದೊರೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ನಾಗಸಂದ್ರ ನಿಲ್ದಾಣದಲ್ಲಿ ನಮ್ಮ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಈ ಮಾರ್ಗದಲ್ಲಿ ಗರಿಷ್ಠ 23 ರೂ., ಕನಿಷ್ಠ 10 ರೂ. ಪ್ರಯಾಣದರವಿದೆ. [ನಾಗಸಂದ್ರ-ಪೀಣ್ಯ ಇಂಡಸ್ಟ್ರಿ ದರ ಪಟ್ಟಿ]

namma metro
English summary
Karnataka Year end special : What happened in Karnataka April 2015. Here is a list of main events.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X