ಭ್ರಷ್ಟಾಚಾರ: ಅಂದು ಬಿಎಸ್ವೈ ಬಗ್ಗೆ ಅಮಿತ್ ಶಾ ಬಾಯಿ ತಪ್ಪಿ ಆಡಿದ ಮಾತು ಈಗ ಫುಲ್ ಟ್ರೆಂಡಿಂಗ್

ಬೆಂಗಳೂರು, ಜುಲೈ 23: ವೈದ್ಯಕೀಯ ಉಪಕರಣ ಖರೀದಿಯಲ್ಲಿ ಯಡಿಯೂರಪ್ಪ ಸರಕಾರ ಭಾರೀ ಅಕ್ರಮ ಎಸಗಿದೆ ಎಂದು ಕೆಪಿಸಿಸಿ ಸುದ್ದಿಗೋಷ್ಠಿ ತರುವಾಯ, ಟ್ವಿಟ್ಟರ್ ನಲ್ಲಿ ಈ ವಿಚಾರ ಟಾಪ್ ಟ್ರೆಂಡಿಂಗ್ ನಲ್ಲಿದೆ.

Recommended Video

      America ನಂತರ Indiaದಲ್ಲಿ ಅತಿ ಹೆಚ್ಚು Covid test | Oneindia Kannada

      ಇದರ ನಡುವೆ, ಸಿದ್ದರಾಮಯ್ಯನವರ ಸರಕಾರದ ಅವಧಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ, ದಾವಣಗೆರೆಯಲ್ಲಿ ಬಾಯಿ ತಪ್ಪಿ ಆಡಿದ ಮಾತಿನ ವಿಡಿಯೋ, ಈಗ ಭರ್ಜರಿ ಬಿಕರಿಯಾಗುತ್ತಿದೆ.

      ದಾವಣಗೆರೆಯಲ್ಲಿ ಅಮಿತ್ ಶಾ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಅವರ ಪಕ್ಕದಲ್ಲಿ ಪ್ರಲ್ಹಾದ್ ಜೋಶಿ ಮತ್ತು ಯಡಿಯೂರಪ್ಪ ಕುಳಿತಿದ್ದರು. ಆಗ, ಬಾಯಿತಪ್ಪಿ, ಸಿದ್ದರಾಮಯ್ಯ ಅನ್ನುವ ಬದಲು, ಯಡಿಯೂರಪ್ಪನವರ ಹೆಸರನ್ನು ಹೇಳಿದ್ದರು. ಕೂಡಲೇ, ಜೋಶಿ, ಅಮಿತ್ ಶಾಗೆ ತಿದ್ದಿಕೊಳ್ಳಲು ಹೇಳಿದ್ದರು.

      Year Back Amit Shah Video On Yediyurappa And Corrpution, Now Going Viral

      "ಒಂದು ವೇಳೆ ಭ್ರಷ್ಟಾಚಾರದ ವಿಚಾರದಲ್ಲಿ ಸ್ಪರ್ಧೆ ನಡೆದರೆ, ಯಡಿಯೂರಪ್ಪನವರ ಸರಕಾರಕ್ಕೆ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಪ್ರಶಸ್ತಿ ಸಿಗಲಿದೆ"ಎಂದು ಅಮಿತ್ ಶಾ, ಬಾಯಿತಪ್ಪಿ ಹೇಳಿದ್ದರು.

      'ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ, ಮೋಟಾ ಭಾಯಿ ಸತ್ಯವನ್ನೇ ಹೇಳುತ್ತಿದ್ದಾರೆ', 'ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ, ವೈಯಕ್ತಿಕ ಲಾಭ ಪಡೆದುಕೊಳ್ಳುವುದರಲ್ಲಿ ನಿಸ್ಸೀಮರು' ಎನ್ನುವ ಪ್ರತಿಕ್ರಿಯೆ ಟ್ವಿಟ್ಟರ್ ನಲ್ಲಿ ವ್ಯಕ್ತವಾಗುತ್ತಿದೆ.

      "ಯಾವುದೇ ದೂರದೃಷ್ಟಿಯಿಲ್ಲದ, ಬರೀ ಭ್ರಷ್ಟಾಚಾರದಲ್ಲೇ ತೊಡಗಿರುವ ಯಡಿಯೂರಪ್ಪನವರ ಸರಕಾರ ಕಲಿಯುಗದ ಕೌರವರು ಇದ್ದಂತೆ"ಎಂದು ಡಿ.ಕೆ.ಶಿವಕುಮಾರ್, ಸರಕಾರದ ವಿರುದ್ದ ಕಿಡಿಕಾರಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+