ಡಿವೋರ್ಸ್ ಆಗಿದೆ ಹಣ ವಾಪಸ್ ಕೊಡಿ: ಫೋಟೋಗ್ರಾಫರ್‌ಗೆ ಮಹಿಳೆ ಒತ್ತಾಯ
ಇತ್ತೀಚಿನ ದಿನಗಳಲ್ಲಿ ಫೋಟೋ ಎನ್ನುವುದು ಜನ ಜೀವನದಲ್ಲಿ ಹಾಸು ಹೊಕ್ಕಿದೆ. ವಾಟ್ಸಪ್, ಫೇಸ್‌ಬುಕ್, ಇನ್ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳ ಸ್ಟೇಟಸ್, ಪೋಸ್ಟ್‌ಗಳನ್ನು ಪ್ರತಿನಿತ್ಯವೂ ಎಂಗೇಜ್ ಮಾಡುವುದು ಕೆಲವರ ರೂಢಿ. ಹೀಗಾಗಿ ಪ್ರತಿ ದಿನವೂ, ಕೆಲವರಂತೂ ಪ್ರತಿ ಗಂಟೆಗೂ ಫೋಟೋ ತೆಗೆಯುತ್ತಾರೆ. ಇಷ್ಟರ ಮಟ್ಟಿಗೆ ಫೋಟೋ ಪ್ರತಿನಿತ್ಯ ಜೀವನದಲ್ಲಿ ಪ್ರಾಮುಖ್ಯತೆ ಪಡೆದಿದೆ.
ಇನ್ನು ಮದುವೆಯಲ್ಲಿ ಫೋಟೋಗೆ ಪ್ರಮುಖ ಪ್ರಾಮುಖ್ಯತೆ ಎನ್ನಬಹುದು. ಪ್ರೀ ವೆಡ್ಡಿಂಗ್‌ನಿಂದ ಆರಂಭವಾಗಿ ಪ್ರತಿಯೊಂದು ಶಾಸ್ತ್ರ, ಮದುವೆ, ಆರತಕ್ಷತೆ, ಬೀಗರೂಟ ಹೀಗೆ ಪ್ರತಿಯೊಂದು ದಿನದ ಆ ವಿಶೇಷ ಕ್ಷಣಗಳನ್ನು, ಮಧುರ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗುತ್ತದೆ.

ಈ ವಿಶೇಷ ಸಂದರ್ಭದಲ್ಲಿ ಫೋಟೋಗ್ರಾಫರ್ ಸೃಜನ ಶೀಲತೆಯೇ ಮುಖ್ಯವಾಗಿರುತ್ತದೆ. ಹೀಗಾಗಿ ಮದುವೆ ಫೋಟೋಗಳನ್ನು ಪ್ರತಿ ಬಾರಿ ನೋಡಿದಾಗಲೂ ಫೋಟೋ ಸೆರೆ ಹಿಡಿದವರನ್ನು ಸಹ ನೆನಪಿಸಿಕೊಳ್ಳುತ್ತೇವೆ. ಜೊತೆಗೆ ಅವರ ಕೆಲಸ ಉತ್ತಮವಾಗಿದ್ದರೆ ಮೆಚ್ಚುಗೆಯನ್ನು ಸಹ ನೀಡಲಾಗುತ್ತದೆ. ಇದು ಸಾಮಾನ್ಯವಾಗಿ ಎಲ್ಲೆಡೆ ನಡೆಯುತ್ತದೆ. ಆದರೆ ಇಲ್ಲೊಬ್ಬಳು ಮಹಿಳೆ ತನಗೆ ವಿಚ್ಛೇದನ ವಾದ ಬಳಿಕ ತಮ್ಮ ಮದುವೆ ಫೋಟೋಗ್ರಾಫರ್‌ನನ್ನು ನೆನೆಪಿಸಿಕೊಂಡು ಆತನ ಬಳಿ ಪರಿಹಾರ ಕೇಳಿದ್ದಾಳೆ.
ಮದುವೆಯ ಫೋಟೋಗ್ರಾಫರ್‌ನನ್ನು 4 ವರ್ಷಗಳ ನಂತರ ಸಂಪರ್ಕಿಸಿದ ಮಹಿಳೆ, ಈ ಹಿಂದೆ ನೀಡಿದ ಹಣವನ್ನು ಮರಳಿ ನೀಡುವಂತೆ ಕೇಳಿದ್ದಾಳೆ. ಮೊದಲು ಫೋಟೋಗ್ರಾಫರ್ ಆಕೆ ತಮಾಷೆ ಮಾಡುತ್ತಿದ್ದಾಳೆ ಎಂದು ಭಾವಿಸಿ ರೀಪ್ಲೇ ಮಾಡಿದ್ದಾನೆ. ಇವರಿಬ್ಬರ ಮಧ್ಯೆ ಸುದೀರ್ಘ ವಾಟ್ಸಾಪ್ ಚಾಟ್ ನಡೆದಿದೆ. ಕೊನೆಗೆ ಅವಳ ವೈವಾಹಿಕ ಸ್ಥಿತಿಯ ಕಾರಣದಿಂದಾಗಿ ನಿಜವಾಗಿಯೂ ಹಣವನ್ನು ಕೇಳುತ್ತಿದ್ದಾಳೆ ಎಂಬುದನ್ನು ಅರಿತಿತು ಹಣವನ್ನು ಹಿಂದಿರುಗಿಸಲು ನಿರಾಕರಿಸಿದ್ದಾನೆ
ಫೋಟೋಗ್ರಾಫರ್ ಹಾಗೂ ಮಹಿಳೆ ನಡುವಿನ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು ಸದ್ಯ ವೈರಲ್ ಆಗಿದೆ. ಮದುವೆಯಾಗಿ 4 ವರ್ಷಗಳ ನಂತರ ಫೋಟೋಗ್ರಾಫರ್‌ನನ್ನು ಸಂಪರ್ಕಿಸಿದ ಮಹಿಳೆ, ತನ್ನನ್ನು ತಾನು ಪರಿಚಯ ಮಾಡಿಕೊಂಡು, 2019ರಲ್ಲಿ ನೀವು ಡರ್ಬನ್‌ನಲ್ಲಿ ನಡೆದ ನನ್ನ ಮದುವೆಯಲ್ಲಿ ಫೋಟೋಶೂಟ್ ಮಾಡಿದ್ದೀರಿ. ನಾನು ಈಗ ವಿಚ್ಛೇದನ ಪಡೆದಿದ್ದು, ನನಗೆ ಮತ್ತು ನನ್ನ ಮಾಜಿ ಪತಿಗೆ ಮುಂದೆ ಆ ಫೋಟೋಗಳ ಅಗತ್ಯವಿಲ್ಲ. ಹೀಗಾಗಿ, ನಾನು ನಿಮಗೆ ನೀಡಿದ ಹಣವನ್ನು ನನಗೆ ವಾಪಸ್ಸು ನೀಡಿ ಎಂದು ಕೇಳಿದ್ದಾಳೆ.
ಮಹಿಳೆ ಬೇಡಿಕೆಗೆ ಉತ್ತರಿಸಿದ ಫೋಟೋಗ್ರಾಫರ್, ಹಣ ಮರುಪಾವತಿ ಸಾಧ್ಯವಿಲ್ಲ ಎಂದಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಫೋಟೋಗ್ರಾಫರ್ ಮೇಲೆ ಪ್ರಕರಣ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಚಾಟಿಂಗ್ ಈಗ ಎಲ್ಲಡೆ ವೈರಲ್ ಆಗಿದ್ದು, ಮಹಿಳೆಯ ಮಾಜಿ ಪತಿ ಫೋಟೋಗ್ರಾಫರ್ ಬಳಿ ಕ್ಷಮೆ ಕೇಳಿದ್ದಾನೆ. ಫೋಟೋಗ್ರಾಫರ್ ಬಳಿ ಹಣ ಕೇಳಿದ ಮಹಿಳೆಯ ಉದ್ಧಟತನದ ಚಾಟಿಂಗ್ ನೋಡಿದ ನೆಟ್ಟಿಗರು ಆಕೆಯ ಬಳಿ ಕ್ಯಾಟರಿಂಗ್, ಬಟ್ಟೆ ಅಂಗಡಿ ಹಾಗೂ ಉಳಿವರ ಬಳಿಯೂ ಹಣ ವಾಪಸ್ ನೀಡಲು ಕೇಳಲು ಹೇಳಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.












Click it and Unblock the Notifications