ಒಂದೇ ಗಂಟೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ಯೂಟರ್ನ್! ಯಾವುದೇ ಕಾರಣಕ್ಕೂ ರಾಜಕೀಯ ಬಿಡಲ್ಲ ಎಂದ ಎಚ್‌ಡಿಕೆ
2023 ರ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಒಂದೇ ಗಂಟೆಯಲ್ಲಿ ಯೂಟರ್ನ್ ಹೊಡೆದಿದ್ದಾರೆ.
ರಾಮನಗರ,ಫೆಬ್ರವರಿ27: ಇದು ನನ್ನ ಕೊನೆಯ ಚುನಾವಣೆ 2023ರ ವಿಧಾನಸಭಾ ಚುನಾವಣೆಯ ಬಳಿಕ ನಾನು ಸ್ಪರ್ಧೆ ಮಾಡಲ್ಲ. 2028 ರ ವಿಧಾನಸಭಾ ಚುನಾವಣೆಗೆ ಕಾರ್ಯಕರ್ತರೇ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆಯನ್ನ ನೀಡಿದರು.
ಆದರೇ ಈ ಹೇಳಿಕೆ ಕೊಟ್ಟು ಒಂದೇ ಗಂಟೆಯ ನಂತ೦ರ ನಾನು ಈ ರೀತಿ ಹೇಳಿಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಯೂಟರ್ನ್ ಹೊಡೆದಿದ್ದಾರೆ. ನಾನು ಯಾವುದೇ ಕಾರಣಕ್ಕೂ ರಾಜಕೀಯದಿಂದ ವಿದಾಯ ಹೇಳುವುದಿಲ್ಲ. 2028 ರ ವಿಧಾನಸಭೆಗೆ ಚನ್ನಪಟ್ಟಣದಿಂದ ಕಾರ್ಯಕರ್ತರನ್ನ ನಿಲ್ಲಿಸುತ್ತೇನೆ. ಆಗ ನಾನು ಬೇರೆ ಕ್ಷೇತ್ರದಲ್ಲಿ ನಿಲ್ಲಬೇಕಾಗಬಹುದು ಎಂದು ಹೇಳಿದ್ದಾರೆ.

ನಾನು ಯಾವುದೇ ಕಾರಣಕ್ಕೂ ರಾಜಕೀಯ ಬಿಡಲ್ಲ. 2028ಕ್ಕೆ ಚನ್ನಪಟ್ಟಣದಿಂದ ಕಾರ್ಯಕರ್ತರನ್ನ ನಿಲ್ಲಿಸಿ ಗೆಲ್ಲಿಸ್ತೀನಿ, ಚನ್ನಪಟ್ಟಣದಲ್ಲಿ ಮಾತ್ರ 2023ಕ್ಕೆ ಕೊನೆಯ ಸ್ಪರ್ಧೆ. ಈ ಸಲ ಐದು ವರ್ಷದ ಸರ್ಕಾರ ತಂದು ಜನತೆಯ ಬದುಕಿಗೆ ಭರವಸೆ ಈಡೇರಿಸುತ್ತೇನೆ. ನಂತರ ನಾನು ರೆಸ್ಟ್ ತೆಗೆದುಕೊಳ್ಳ ಬೇಕಲ್ವಾ? ಅದಕ್ಕೆ ಕೊನೆಯ ವಿಧಾನಸಭೆ ಚುನಾವಣೆ ಅಂದೆ ಅಷ್ಟೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇನ್ನೂ ಪದೇ ಪದೇ ನಮ್ಮ ಕುಟುಂಬದ ವಿಚಾರವನ್ನ ಯಾಕೆ ಪ್ರಸ್ತಾಪ ಮಾಡುತ್ತಿರಾ. ನಮ್ಮ ಮನೆಯಲ್ಲಿ 6 ಜನ ಇದ್ದೇವೆ, ನಮ್ಮದು ದೊಡ್ಡ ಕುಟುಂಬ. ಆದರೆ, ಇವನಿಗೆ ಇರುವುದು ಒಬ್ಬ ತಮ್ಮ ಅವನನ್ನೇ ನೆಟ್ಟಗೆ ಇಟ್ಟುಕೊಂಡಿಲ್ಲ ಎಂದು ಪ್ರಹ್ಲಾದ್ ಜೋಶಿ ವಿರುದ್ಧ ಏಕವಚನದಲ್ಲಿಯೇ ಹರಿಹಾಯ್ದರು. ಪದೇ ಪದೆ ನನ್ನನ್ನು ಕೆಣಕಬೇಡಿ ಎಂದು ಹೇಳುತ್ತೇನೆ. ಆದರೂ ಕೆಣಕಿ ಅವರ ಬುಡಕ್ಕೆ ತಂದುಕೊಳ್ಳುತ್ತಾರೆ. ನಾನು ಏನೇ ಹೇಳಿದರೂ ದಾಖಲೆ ಇಟ್ಟುಕೊಂಡು ಹೇಳುತ್ತೇನೆ ಎಂದು ತಿಳಿಸಿದರು.

ಇದು ಬಮೂಲ್ ಉತ್ಸವ ಕಾರ್ಯಕ್ರಮ, ಬೆಂಗಳೂರು ಹಾಲು ಒಕ್ಕೂಟ ಸಹಕಾರ ಸಂಘದ ಕಾರ್ಯಕ್ರಮ ಅಲ್ಲ. ಇದು ಜಯ ಮತ್ತು ಸಹಕಾರ ಸಂಘದ ಕಾರ್ಯಕ್ರಮ.ಈ ಕಾರ್ಯಕ್ರಮಕ್ಕೆ ಅನುಮತಿ ಕೊಡಲು ಬಮೂಲ್ ನಿರಾಕರಿಸಿದೆ. ಎಲ್ಲಾ ಅಧಿಕಾರಿಗಳು ಯಾವ ರೀತಿ ನಡೆದುಕೊಂಡಿದ್ದಾರೆ ಅನ್ನೊದು ಗೊತ್ತಿದೆ. ಕೇವಲ ಇನ್ನೆರಡು ತಿಂಗಳು ಇದೆ ಅಷ್ಟೇ. ಚನ್ನಪಟ್ಟಣ ತಾಲೂಕಿನ ಹಾಲು ಉತ್ಪಾದಕರ ಸಂಘದ ಎಆರ್, ಡಿಆರ್ ಗಳ ಆಟ ನೋಡಿದ್ದೇನೆ. ಪ್ರತಿನಿತ್ಯ ಲೂಟಿ ಮಾಡುತ್ತಿರುವವ ಬಗ್ಗೆ ಮಾಹಿತಿ ಇದೆ ಎಂದು ಕುಮಾರಸ್ವಾಮಿ ಹೇಳಿದರು.
ಸಹಕಾರ ಕ್ಷೇತ್ರದಲ್ಲಿ ಕಾನೂನೇ ಇಲ್ಲದಂತಾಗಿದೆ. ಸಹಕಾರಿ ಕ್ಷೇತ್ರದ ಅಧಿಕಾರಿಗಳ ಈ ಕಳ್ಳಾಟ ಇನ್ನೆರಡು ತಿಂಗಳು ಅಷ್ಟೇ. ದೈವ ಕೃಷೆಯಿಂದ ಹಿಂದ ಸಿಎಂ ಆಗಿದ್ದೆ, ನಾನು ಯಾರಿಗೂ ಕಿರುಕುಳ ನೀಡುವ ಕೆಲಸ ಮಾಡಿಲ್ಲ. ಎಲವನ್ನೂ ಗಮನಿಸುತ್ತಿದ್ದೇನೆ, ನಾನು ಜನತೆಗೆ ಗೌರವಕೊಟ್ಟು ಬದುಕಿದ್ದೇನೆ. ನಾನು ಹೆದರುವುದು ಜನತೆಗೆ ಮಾತ್ರ ಎಂದು ಹೇಳಿದರು.












Click it and Unblock the Notifications