ವಿಧಾನಪರಿಷತ್ ಸ್ಪೀಕರ್ ಸ್ಥಾನಕ್ಕೆ ಯಾರು ಯಾರ ಹೆಸರು?

ಬೆಂಗಳೂರು, ಜೂನ್ 07: ಕರ್ನಾಟಕ ವಿಧಾನಪರಿಷತ್ ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಸೇರುವ ಅವಕಾಶ ಕೈತಪ್ಪಿದೆ. ಈ ನಡುವೆ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ಅವರ ಹೆಸರು ಕೇಳಿ ಬಂದಿದೆ. ಆದರೆ, ಸಚಿವ, ಸಭಾಪತಿ ಸ್ಥಾನ ಬೇಡ ಎಂದು ಹೊರಟ್ಟಿ ಪ್ರತಿಕ್ರಿಯಿಸಿದ್ದಾರೆ.

75 ಸದಸ್ಯ ಬಲದ ವಿಧಾನಪರಿಷತ್ ನಲ್ಲಿ 11 ಮಂದಿ ನಾಮನಿರ್ದೇಶನಗೊಂಡಿದ್ದಾರೆ. ಪದವಿಧರ ಹಾಗೂ ಶಿಕ್ಷಣ ಕ್ಷೇತ್ರದಿಂದ ಕೂಡಾ ಆಯ್ಕೆ ಮಾಡಲಾಗುತ್ತದೆ.

ಸದ್ಯ ಹಾಲಿ ವಿಧಾನಪರಿಷತ್ ಸದಸ್ಯರ ಪೈಕಿ ಜಯಮಾಲಾ(23 ಜೂನ್ 2020 ರನಕ ಅವಧಿ) ಅವರು ಮಾತ್ರ ಸಚಿವ ಸಂಪುಟ ಸೇರುವ ಅವಕಾಶ ಪಡೆದುಕೊಂಡಿದ್ದಾರೆ. ಜೆಡಿಎಸ್ ನಿಂದ ಬಸವರಾಜ ಹೊರಟ್ಟಿ, ಬಿಎಂ ಫಾರೂಖ್ ಕೂಡಾ ಸಚಿವ ಸ್ಥಾನದ ಅಕಾಂಕ್ಷಿಗಳಾಗಿದ್ದರು. ಆದರೆ, ಇಬ್ಬರಿಗೂ ಅವಕಾಶ ಸಿಕ್ಕಿಲ್ಲ.

Who will become Legislative Council Speaker?

ಈಗ ಸಭಾಪತಿ ಸ್ಥಾನಕ್ಕೆ ಹಿರಿಯ ಸದಸ್ಯರನ್ನು ಆಯ್ಕೆ ಮಾಡಲು ಮೈತ್ರಿ ಒಕ್ಕೂಟ ಮುಂದಾಗಿದ್ದು, ಬಹುಶಃ ಮುಂಬರುವ ಸಮನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸುವ ಸಾಧ್ಯತೆಗಳಿವೆ.

ಜಯಮಾಲಾ ಅವರಿಗೆ ಪರಿಷತ್ ಸಭಾಪತಿ ಸ್ಥಾನ ನೀಡುವ ಬಗ್ಗೆ ಮಾತುಗಳು ಕೇಳಿ ಬಂದರೂ, ಅವರಿಗೆ ಸಚಿವ ಸ್ಥಾನ ಸಿಕ್ಕಿರುವುದರಿಂದ ಬಸವರಾಜ ಹೊರಟ್ಟಿ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು, ಸಭಾನಾಯಕರನ್ನಾಗಿ ಮಾಡುವ ಸಾಧ್ಯತೆಯಿದೆ.

ಇನ್ನು ಕಾಂಗ್ರೆಸ್ಸಿನಿಂದ ಎಸ್ ಆರ್ ಪಾಟೀಲ್, ಎಚ್ ಎಂ ರೇವಣ್ಣ, ವಿಎಸ್ ಉಗ್ರಪ್ಪ ಅವರಿಗೆ ಸಭಾಪತಿ ಸ್ಥಾನ ದೊರೆಯುವ ಸಾಧ್ಯತೆಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+