Metoo: ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಏನಾಗ್ತಿದೆ, ಕನ್ನಡ ಚಿತ್ರರಂಗಕ್ಕೂ ತಟ್ಟಿದ ಬಿಸಿ!
Me too: ಮಲಯಾಳಂ (ಮಾಲಿವುಡ್) ಚಿತ್ರರಂಗ ಹಾಗೂ ತಮಿಳು (ಕೋಲಿವುಡ್) ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಮೀಟೂ ಇದೀಗ ಕನ್ನಡ ಚಿತ್ರರಂಗ (ಸ್ಯಾಂಡಲ್‌ವುಡ್)ನಲ್ಲೂ ಭಾರೀ ಸಂಚಲ ಮೂಡಿಸಿದೆ. ಈ ಚಿತ್ರರಂಗಗಳಲ್ಲಿ ಈಗಾಗಲೇ ಹಲವು ಪ್ರಮುಖ ನಟರ ಹೆಸರು ಕೇಳಿಬಂದಿದ್ದು. ಸಣ್ಣ ಹಾಗೂ ದೊಡ್ಡ ನಟಿಯುರು ಮುಂದೆ ಬಂದು ಮಾತನಾಡುತ್ತಿದ್ದಾರೆ.
ಮಲಯಾಳಂ ಮತ್ತು ತಮಿಳು ಚಿತ್ರರಂಗದ ನಂತರ ಕನ್ನಡ ಚಿತ್ರರಂಗದಲ್ಲೂ ಮೀಟೂ ಅಭಿಯಾನ ಜೋರಾಗಿದೆ. ಕೇರಳ ಸರ್ಕಾರ ರಚನೆ ಮಾಡಿದ ಹೇಮಾ ಕಮಿಟಿ ಮಾದರಿಯಲ್ಲೇ ಕನ್ನಡ ಚಿತ್ರರಂಗಕ್ಕೂ ಕಮಿಟಿ ಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.

ಮಲಯಾಳಂ ಚಿತ್ರರಂಗದಲ್ಲಿ ಏನಾಗಿತ್ತು ?
ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ಅಲ್ಲೋಲ ಕಲ್ಲೋಲವನ್ನೇ ಹೆಬ್ಬಿಸಿದೆ. ಮಲಯಾಳಂ ಚಿತ್ರರಂಗದ ಪ್ರಖ್ಯಾತ ನಟಿಯೊಬ್ಬರಿಗೆ ಕೇರಳದ ಪ್ರತಿಷ್ಠಿತ ನಗರಗಳಲ್ಲಿ ಒಂದಾಗಿರುವ ಕೊಚ್ಚಿಯಲ್ಲಿ ಲೈಂಗಿಕ ಸಮಸ್ಯೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಅಲ್ಲಿನ ಚಿತ್ರರಂಗ ಆ ನಟಿಯ ಸಹಾಯಕ್ಕೆ ಬಂದಿರಲಿಲ್ಲ.
ಸರ್ಕಾರ ಅಲ್ಲಿನ ವಿಮೆನ್ ಇನ್ ಸಿನಿಮಾ ಕಲೆಕ್ಟಿವ್ (wcc)ನ ಒತ್ತಾಯದ ಮೇಲೆ ಹೇಮಾ ಕಮಿಟಿಯನ್ನು ರಚನೆ ಮಾಡಿತ್ತು. ಆ ಕಮಿಟಿಯ ವರದಿ ಇದೀಗ ಹಲವು ಪ್ರಮುಖ ನಟರನ್ನು ನಡುಗಿಸಿದೆ. ಅಲ್ಲದೇ ಮೀಟೂ ಅಭಿಯಾನ ಪ್ರಾರಂಭವಾಗಿದೆ.
ಮಲಯಾಳಂನ ಪ್ರಮುಖ ನಟರಾದ ಸಿದ್ಧಿಕ್, ಮುಖೇಶ್, ಜಯಸೂರ್ಯ, ಮಣೆಯನ್‌ಪಿಳ್ಳರಾಜು, ಇಡವೇಲ ಬಾಬು, ರಂಜಿತ್, ನಿವಿನ್ ಪೌಲಿ ಸೇರಿದಂತೆ ಹಲವರ ಮೇಲೆ ಆರೋಪ ಕೇಳಿ ಬಂದಿದ್ದು. ನಿವಿಲ್ ಪೌಲಿ ಹಾಗೂ ಸಿದ್ಧಿಕ್ ಸೇರಿದಂತೆ ಹಲವು ಪ್ರಮುಖ ನಟರ ಮೇಳೆ ಕೇರಳ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ತಮಿಳು ಚಿತ್ರರಂಗಕ್ಕೂ ಕಾಲಿಟ್ಟ ಮೀಟೂ
ಮಲಯಾಳಂ ಚಿತ್ರರಂಗದ ನಂತರ ಮೀಟೂ ಅಭಿಯಾನ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿತ್ತು. ಈ ಚಿತ್ರರಂಗದ ನಾಡಿಗರ ಸಂಗಂ (ನಟ - ನಟಿಯರ ಸಂಘ)ದ ಪ್ರಧಾನ ಕಾರ್ಯದರ್ಶಿ ಹಾಗೂ ನಟ ವಿಶಾಲ್ ಅವರು ಸಹ ತಮಿಳು ಚಿತ್ರರಂಗಕ್ಕೂ ಹೇಮಾ ಕಮಿಟಿ ಮಾದರಿಯ ಕಮಿಟಿ ರಚನೆ ಮಾಡಬೇಕು ಎಂದು ಆಗ್ರಹಿಸಿದ್ದರು.
ಆದರೆ, ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಈ ಬಗ್ಗೆ ಯಾವುದೇ ಕಮೆಂಟ್ ಮಾಡದೆ ಅಂತರ ಕಾಯ್ದು ಕೊಂಡಿದ್ದರು. ಆದರೆ, ಹಲವು ನಟ - ನಟಿಯರು ಈ ಬಗ್ಗೆ ಮಾತನಾಡುತ್ತಿದ್ದು, ತಮಿಳು ಚಿತ್ರರಂಗದಲ್ಲೂ ಮೀಟೂ ಅಭಿಯಾನ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ.












Click it and Unblock the Notifications