ಮೋದಿ ಉದ್ಘಾಟಿಸಲಿರುವ ಬೆಂಗಳೂರಿನ 'ಗಾರ್ಡನ್ ಟರ್ಮಿನಲ್' ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರು, ನ. 10: ಈಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಕಳೆ ನೀಡಿರುವುದು ಟರ್ಮಿನಲ್-2. ಇದನ್ನು ಗಾರ್ಡನ್ ಟರ್ಮಿನಲ್ ಅಂತಲೂ ಕರೆಯಬಹುದು. ಈ ಗಾರ್ಡನ್ ಟರ್ಮಿನಲ್ ಪ್ರಯಾಣಿಕರು ಮತ್ತು ಪ್ರವಾಸಿಗರನ್ನು ಬೆರಗುಗೊಳಿಸುತ್ತಿದೆ. ಕಣ್ಣಿನ ಜೊತೆಗೆ ಮನಕ್ಕೂ ಮುದ ನೀಡುತ್ತಿದೆ.

ಹೊಸದಾಗಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣದ 'ಗಾರ್ಡನ್ ಟರ್ಮಿನಲ್' ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಲಿದ್ದಾರೆ. ಮುಂಬೈ ಮತ್ತು ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಜೊತೆಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ ಅತ್ಯುತ್ತಮ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ, ಹಸಿರಿನ ಜೊತೆಗೆ ಕಂಗೊಳಿಸುವ ಈ ಹೊಸ ಗಾರ್ಡನ್ ಟರ್ಮಿನಲ್ ಬಗ್ಗೆ ನಿವು ತಿಳಿದುಕೊಳ್ಳಬೇಕಾದ ಹಲವು ವಿಷಯಗಳು ಇಲ್ಲಿವೆ ನೋಡಿ.

What U Know About Bengaluru Airport Garden terminal, Check Here

1) ಗಾರ್ಡನ್ ಟರ್ಮಿನಲ್ ಅನ್ನು 5,000 ಕೋಟಿ ರೂಪಾಯಿ ಹೂಡಿಕೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

2) ಇದು ಒಟ್ಟು 2,55,645 ಚದರ ಮೀಟರ್ ಪ್ರದೇಶದಲ್ಲಿ ಹರಡಿದೆ.

3) ಟರ್ಮಿನಲ್ -2 ತನ್ನ ಮೊದಲ ಹಂತದಲ್ಲಿ 22 ಸಂಪರ್ಕ ಗೇಟ್‌ಗಳು, 15 ಬಸ್ ಗೇಟ್‌ಗಳು, 95 ಚೆಕ್ ಇನ್‌ಗಳು ಮತ್ತು 17 ಭದ್ರತಾ ಪರಿಶೀಲನಾ ಲೇನ್‌ಗಳನ್ನು ಹೊಂದಿರುತ್ತದೆ.

4) ಒಂಬತ್ತು ಕಸ್ಟಮ್ಸ್ ಹ್ಯಾಂಡ್ ಬ್ಯಾಗೇಜ್ ಸ್ಕ್ರೀನಿಂಗ್ ಇರುತ್ತದೆ.

What U Know About Bengaluru Airport Garden terminal, Check Here

5) ಈ ಟರ್ಮಿನಲ್ 5,932 ಆಸನ ಸಾಮರ್ಥ್ಯವನ್ನು ಹೊಂದಿರುತ್ತದೆ. ಟರ್ಮಿನಲ್- 2 ರ ಹಂತ 1 ವರ್ಷಕ್ಕೆ 25 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ.

6) ಟರ್ಮಿನಲ್-2 ಅನ್ನು ನಾಲ್ಕು ಮಾರ್ಗದರ್ಶಿ ತತ್ವಗಳ ಮೇಲೆ ನಿರ್ಮಿಸಲಾಗಿದೆ. ಅವುಗಳೆಂದರೇ, 'ಟರ್ಮಿನಲ್ ಇನ್ ಎ ಗಾರ್ಡನ್', ಸುಸ್ಥಿರತೆ, ತಂತ್ರಜ್ಞಾನ ಮತ್ತು ನಾವೀನ್ಯತೆ ಮತ್ತು ಕರ್ನಾಟಕದ ಕಲೆ ಮತ್ತು ಸಂಸ್ಕೃತಿ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

7) ಟರ್ಮಿನಲ್-2 ದೊಡ್ಡ 'ಹ್ಯಾಂಗಿಂಗ್ ಗಾರ್ಡನ್' ಆಗಿದೆ.

8) "ಗಾರ್ಡನ್ ಟರ್ಮಿನಲ್ ವಾಸ್ತುಶಿಲ್ಪದ ಅದ್ಭುತ. ಇದು ಮೊದಲ 'ಗಾರ್ಡನ್ ಟರ್ಮಿನಲ್' ಆಗಿದೆ. ಈ ಟರ್ಮಿನಲ್ ಒಳಗೆ ಮತ್ತು ಹೊರಗೆ ಹಚ್ಚ ಹಸಿರಿನಿಂದ ಕೂಡಿರುತ್ತದೆ. ಪ್ರಯಾಣಿಕರು ಹೊಸ ಟರ್ಮಿನಲ್ ಮೂಲಕ ಪ್ರಯಾಣಿಸುವಾಗ ಉದ್ಯಾನದಲ್ಲಿ ನಡೆದಾಡುವ ಅನುಭವನ್ನು ಪಡೆಯುವಂತೆ ವಿನ್ಯಾಸಗೊಳಿಸಲಾಗಿದೆ" ಎಂದು ಇನ್ನೊಬ್ಬ ವಿಮಾನ ನಿಲ್ದಾಣದ ಅಧಿಕಾರಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+