Get Updates
Get notified of breaking news, exclusive insights, and must-see stories!

ನರೇಂದ್ರ ಮೋದಿ- ಎಸ್‌.ಎ. ರಾಮದಾಸ್ ಆಪ್ತತೆ ಹಿಂದಿನ ಸೀಕ್ರೇಟ್ ಏನು ಗೊತ್ತಾ?

ಬೆಂಗಳೂರು, ಜೂ. 21: ಪ್ರಧಾನಿ ನರೇಂದ್ರ ಮೋದಿ ಅವರ ಮೈಸೂರು ಭೇಟಿ ವೇಳೆ ಮಾಜಿ ಸಚಿವ ಎಸ್‌.ಎ ರಾಮದಾಸ್ ಅವರನ್ನು ಅತಿ ಆಪ್ತತೆಯಿಂದ ಬರಮಾಡಿಕೊಂಡು ಬೆನ್ನು ತಟ್ಟಿದ ದೃಶ್ಯ ವೈರಲ್ ಆಗಿದೆ. ಆದ್ರೆ, ರಾಮದಾಸ್ ಅವರನ್ನು ಕಂಡ ರೀತಿ ಬೇರೆ ಯಾರನ್ನೂ ಮೋದಿ ಕಾಣಲಿಲ್ಲ. ಮೋದಿ ಅವರ ಈ ಪ್ರೀತಿಯ ಹಿಂದಿನ ಅಸಲಿ ಸತ್ಯ ಬೇರೆಯದ್ದೇ ಇದೆ.

ಎಸ್. ಎ. ರಾಮದಾಸ್ ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರು. ಅವರು ರಾಜಕೀಯ ಆಲೋಚನೆಗೂ ಮೊದಲೂ ಆರ್ಎಸ್ಎಸ್ ಹಾಗೂ ಹಿಂದುತ್ವಕ್ಕೆ ಹೆಚ್ಚು ಒತ್ತು ನೀಡಿದ್ದರು. ಎಸ್. ಎ. ರಾಮದಾಸ್ ಅವರ ತಂದೆ ಅಶ್ವತ್ಥ್ ನಾರಾಯಣರಾವ್ ಮತ್ತು ಅವರ ತಾಯಿ ಸರೋಜಮ್ಮ ಅವರು ಮೊದಲಿನಿಂದಲೂ ಮೋದಿ ಕುಟುಂಬಕ್ಕೆ ಪರಮಾಪ್ತರು. ಎಸ್‌.ಎ. ರಾಮದಾಸ್ ಅವರು 2010 ರಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಕುಟುಂಬ ಮೈಸೂರು ದಸರಾ ವೀಕ್ಷಣೆಗೆ ಬಂದಿತ್ತು.

ಕರ್ನಾಟಕಕ್ಕೆ ಬಂದ್ರೆ ಮೋದಿ ಇರುತ್ತಿದ್ದ ಜಾಗ ಎಲ್ಲಿ:

ಕರ್ನಾಟಕಕ್ಕೆ ಬಂದ್ರೆ ಮೋದಿ ಇರುತ್ತಿದ್ದ ಜಾಗ ಎಲ್ಲಿ:

ಮೈಸೂರು ಜಿಲ್ಲಾ ಉಸ್ತುವಾರಿಯಾಗಿದ್ದ ಎಸ್. ಎ. ರಾಮದಾಸ್ ಅವರ ಮನೆಯಲ್ಲಿಯೇ ಮೋದಿ ಎರಡು ದಿನ ಉಳಿದುಕೊಂಡಿದ್ದರಂತೆ. ಮಾತ್ರವಲ್ಲ ಸ್ವತಃ ರಾಮದಾಸ್ ಅವರ ಕಾರನ್ನೇ ಬಳಿಸಿ ಎರಡು ದಿನ ನರೇಂದ್ರ ಮೋದಿ ಮೈಸೂರು ಸುತ್ತಾಡಿದ್ದರು. ಮೋದಿ ಅವರ ಎರಡು ದಿನದ ಅತಿಥ್ಯ ವಹಿಸಿದ್ದ ರಾಮದಾಸ್ ಅವರ ತಾಯಿ ಸರೋಜಮ್ಮ ಸ್ವತಃ ಕೈ ಅಡುಗೆ ಮಾಡಿ ಬಡಿಸಿದ್ದರು. ರಾಮದಾಸ್ ಅವರ ತಾಯಿ ಅಡುಗೆ ಅಂದರೆ ಪ್ರಧಾನಿ ಮೋದಿಗೆ ತುಂಬಾ ಇಷ್ಟ. ಹೀಗೆ ಆರಂಭವಾದ ಸಂಬಂಧ ಇಂದಿಗೂ ಅದೇ ರೀತಿ ಮುಂದುವರೆದಿದೆ.

ಮೋದಿ ಮನೆಯಲ್ಲಿ ರಾಮದಾಸ್ ಕುಟುಂಬ ದೀಪಾವಳಿ

ಮೋದಿ ಮನೆಯಲ್ಲಿ ರಾಮದಾಸ್ ಕುಟುಂಬ ದೀಪಾವಳಿ

ಒಮ್ಮೆ ರಾಮದಾಸ್ ಮತ್ತು ಅವರ ತಾಯಿ ಸೇರಿದಂತೆ ಕುಟುಂಬ ಗುಜರಾತ್‌ ಗೆ ತೆರಳಿತ್ತು. ಮೋದಿ ಮನೆಯಲ್ಲಿಯೇ ದೀಪಾವಳಿ ಆಚರಿಸಿದ್ದರು. ರಾಮದಾಸ್ ಅವರ ತಾಯಿಯನ್ನು ಎರಡು ದಿನ ಗುಜರಾತ್ ಪ್ರವಾಸಕ್ಕೆ ಕಳುಹಿಸಿ ರಾಜ್ಯ ಹೇಗಿದೆ ಹೇಳಬೇಕು ಎಂದು ಸೂಚಿಸಿದ್ದರಂತೆ. ಎರಡು ದಿನ ಗುಜರಾತ್ ಸುತ್ತಾಡಿದ್ದ ರಾಮದಾಸ್ ಅವರ ತಾಯಿ ನಾನು ನಿಜವಾದ ರಾಮರಾಜ್ಯವನ್ನು ಕಂಡೆ ಎಂದು ಹೇಳಿದ ಕೂಡಲೇ ಮೋದಿ ಅವರು ಪುಳಕಿತರಾಗಿದ್ದರು. ರಾಮದಾಸ್ ಅವರ ತಾಯಿಯ ಅಡುಗೆಯನ್ನು ತುಂಬಾ ಇಷ್ಟ ಪಡುತ್ತಿದ್ದ ಮೋದಿ ಅವರಿಗೆ ಬೇಕಾದ ಅಡುಗೆ ಮಾಡಿ ಕೊಟ್ಟಿದ್ದರಂತೆ. ರಾಮದಾಸ್ ಹಾಗೂ ಮೋದಿ ಕುಟುಂಬದ ನಡುವೆ ದಶಕಗಳಿಂದಲೂ ಸಹೋದರತ್ವ ಬಾಂಧವ್ಯ ಬೆಸೆದಿದೆ.

ರಾಮದಾಸ್ ತಾಯಿ ಮೇಲೆ ಮೋದಿಗೆ ಅಪಾರ ಗೌರವ:

ರಾಮದಾಸ್ ತಾಯಿ ಮೇಲೆ ಮೋದಿಗೆ ಅಪಾರ ಗೌರವ:

ರಾಜತಾಂತ್ರಿಕವಾಗಿ ರಾಜ್ಯದ ಬಿಜೆಪಿ ನಾಯಕರು ಈಗಲೂ ಮೋದಿ ಅವರನ್ನು ಭೇಟಿ ಮಾಡಬೇಕಾದರೆ ಎಸ್‌.ಎ. ರಾಮದಾಸ್ ಅವರೇ ಸಂಪರ್ಕ ಸೇತು. ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವೇಳೆ ಬಿ.ಎಸ್. ಯಡಿಯೂರಪ್ಪ ಅವರ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದು ರಾಮದಾಸ್ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಮೋದಿ ಮತ್ತು ರಾಮದಾಸ್ ಕುಟುಂಬದ ನಡುವಿನ ಬಾಂಧವ್ಯ ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ. ಕೌಟುಂಬಿಕ ಬಾಂಧವ್ಯದಿಂದಲೇ ಬೆಸೆದಿವೆ. ಹೀಗಾಗಿ ಮೈಸೂರಿಗೆ ಬಂದರೆ ಮೋದಿ ಮೊದಲು ಕೇಳುವುದೇ ರಾಮದಾಸ್ ಕುಟುಂಬವನ್ನು.

ರಾಜಕೀಯ ಹೊರತು ಪಡಿಸಿದ ಬಾಂಧವ್ಯ

ರಾಜಕೀಯ ಹೊರತು ಪಡಿಸಿದ ಬಾಂಧವ್ಯ

ಜೂ. 20 ರಂದು ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಎಸ್. ಎ ರಾಮದಾಸ್ ಅವರನ್ನು ಸಹೋದರನಂತೆ ತಬ್ಬಿ ಬೆನ್ನು ತಟ್ಟಿ ಕುಶಲೋಪರಿ ವಿಚಾರಿಸಿದ್ದರು ಮೋದಿ. ರಾಮದಾಸ್ ಅವರ ಸಹೋದರ ಸೇರಿದಂತೆ ಕುಟುಂಬದ ಯೋಗಕ್ಷೇಮವನ್ನು ವಿಚಾರಿಸಿದ್ದರು. ಇದು ಇದೀಗ ಬಿಜೆಪಿ ಪಾಳಯದಲ್ಲಿ ಭಾರೀ ಸಂಚಲನವುಂಟು ಮಾಡಿದೆ. ರಾಮದಾಸ್ ಅವರಿಗೆ ಮೋದಿ ಇಷ್ಟು ಪರಮಾಪ್ತರೇ ಎಂಬ ಚರ್ಚೆ ಹುಟ್ಟುಕೊಂಡಿದೆ. ಮೋದಿ ಜತೆಗಿನ ಅಪ್ತತೆ ಬಗ್ಗೆ ಈವರೆಗೂ ರಾಮದಾಸ್ ಎಲ್ಲೂ ಬಹಿರಂಗ ಪಡಿಸಿರಲಿಲ್ಲ. ಇದೀಗ ಮೋದಿ ಅವರೇ ಸ್ವತ ರಾಮದಾಸ್ ಅವರನ್ನು ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿಸಿದ ಪರಿ ನೋಡಿ ಬಿಜೆಪಿ ನಾಯಕರೇ ದಾಂಗಾಗಿದ್ದಾರೆ.

ಮೈಸೂರಿನ ಹೋಟೆಲ್‌ನಲ್ಲಿ ರಾಮದಾಸ್ ಮೋದಿ ಭೇಟಿ:

ಮೈಸೂರಿನ ಹೋಟೆಲ್‌ನಲ್ಲಿ ರಾಮದಾಸ್ ಮೋದಿ ಭೇಟಿ:

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾತ್ರಿ ಉಳಿದಿಕೊಂಡಿದ್ದ ಮೈಸೂರಿನ ಹೋಟೆಲ್‌ಗೆ ರಾಮದಾಸ್ ಕುಟುಂಬವನ್ನು ಆಹ್ವಾನಿಸಿದ್ದರು. ರಾಮದಾಸ್, ಅವರ ಸಹೋದರ, ಇಡೀ ಕುಟುಂಬ ಮೋದಿ ಅವರನ್ನು ಭೇಟಿ ಮಾಡಿತ್ತು. ಈ ವೇಳೆಯೂ ಕುಟುಂಬದ ಜತೆ ಕೆಲ ಕಾಲ ಮೋದಿ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಯಾವೊಬ್ಬ ಬಿಜೆಪಿ ನಾಯಕ ಮೋದಿ ಜತೆ ಈ ಪರಿಯ ಬಾಂಧವ್ಯ ಇಟ್ಟುಕೊಂಡಿಲ್ಲ. ಎಸ್. ಎ. ರಾಮದಾಸ್ ರಾಜಕಾಂತ್ರಿಕ ಮಾತ್ರವಲ್ಲದೇ ಕೌಟುಂಬಿಕ ಬಾಂಧವ್ಯವನ್ನು ಸಹ ಕಾಪಾಡಿಕೊಂಡು ಬಂದಿದ್ದಾರೆ. ಅಂತೂ ಮೋದಿ ಅವರ ಮೈಸೂರಿನ ಭೇಟಿ ವೇಳೆ ರಾಮದಾಸ್ ಕುಟುಂಬದ ಬಾಂಧವ್ಯ ಬಹಿರಂಗವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+