Jowar Price: ಕರ್ನಾಟಕದ ವಿವಿಧೆಡೆ ಜೋಳದ ದರ ಎಷ್ಟಿದೆ? ಮಾರುಕಟ್ಟೆಗಳ ಬೆಲೆ ಪಟ್ಟಿ ಇಲ್ಲಿದೆ
ಬೆಂಗಳೂರು, ಮಾರ್ಚ್ 26: ಕರ್ನಾಟಕದ ರಾಜ್ಯದಲ್ಲಿ ಜೋಳದ ಕನಿಷ್ಠ ಬೆಲೆಯಲ್ಲಿ ಇಳಿಕೆ ಆಗಿದೆ. ಮಾರುಕಟ್ಟೆಗೆ ಜೋಳ ಬೆಲೆ ಬರುತ್ತಿದ್ದಂತೆ ದಿಢೀರನೇ ಬೆಲೆಯಲ್ಲಿ ಕುಸಿತವಾಗಿದೆ. ಅತ್ಯಧಿಕ ಬೆಲೆ ನೀಡಬೇಕಿದ್ದ ಜೋಳದ ಇಂದಿನ ಬೆಲೆಯು ಅದರ ಖರ್ಚು ನೀಗಿಸಲು ಸರಿ ಹೊಂದುತ್ತಿದೆ.
ಹೆಚ್ಚಾಗಿ ಉತ್ತರ ಕರ್ನಾಟಕದ ಎರೆಭೂಮಿ (ಕಪ್ಪು ಭೂಮಿ) ಹೆಚ್ಚಾಗಿ ಹಿಂಗಾರು ಆರಂಭದಲ್ಲಿ ಈ ಜೋಳ ಬೆಲೆ ಬೆಳೆಯುತ್ತಾರೆ. ದೇಹಕ್ಕೆ ಶಕ್ತಿ ನೀಡುವ ಈ ಜೋಳ ಈ ಭಾಗದ ಪ್ರಮುಖ ಆಹಾರ ಧಾನ್ಯಗಳಲ್ಲಿ ಒಂದಾಗಿದೆ. ಹೀಗಾಗಿ ಪ್ರತಿ ವರ್ಷವು ಹಾವೇರಿ, ರಾಣಿಬೆನ್ನೂರು, ಶಿಗ್ಗಾವಿ, ಹುಬ್ಬಳ್ಳಿ ಸುತ್ತಮುತ್ತ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಜೋಳ ಬೆಳೆಯಲಾಗುತ್ತದೆ.

ಹಿಂಗಾರು ಮಳೆ ಸಮರ್ಪಕವಾಗಿ ಬರದ ಕಾರಣ ಬಿತ್ತನೆ ಪ್ರಮಾಣ ಇಳಿಕೆ ಆಯಿತು. ಪ್ರಸ್ತಕ ಸಾಲಿನಲ್ಲಿ ಹೆಚ್ಚಾಗಿ ಜೋಳ ಬೆಳೆಯಲಾಗಲಿಲ್ಲ. ಇನ್ನೂ ಬಿತ್ತಿದ್ದ ಅಲ್ಪ ಸ್ವಲ್ಪ ಜೋಳ ಇಳುವರಿ ಸರಿಯಾಗಿ ಬರಲಿಲ್ಲ. ಅದನ್ನೇ ಸುಗ್ಗಿ ವೇಳೆ ಮಾರುಕಟ್ಟೆಗೆ ತಂದ ರೈತರಿಗೆ ದಿಢೀರ್ ಬೆಲೆ ಇಳಿಕೆ ಆಘಾತ ನೀಡಿತು.
ಕನಿಷ್ಠ ದರದಲ್ಲೂ ಕುಸಿತ
ಈ ಬಾರಿ ಬಿಳಿ, ಹೈಬ್ರಿಡ್ ಎರಡು ತರಹದ ಜೋಳಗಳಿಗೂ ಕರ್ನಾಟಕದಲ್ಲಿ ಸಾಕಷ್ಟು ಬೇಡಿಕೆ ಸೃಷ್ಟಿಯಾಗಲಿದೆ. ಇದರಿಂದ ಪ್ರತಿ ಕ್ವಿಂಟಾಲ್ ಜೋಳಕ್ಕೆ 8000 ರೂಪಾಯಿವರೆಗೆ ಬೆಲೆ ಸಿಗಲಿದೆ ಎನ್ನಲಾಗಿದೆ. ಬಂಗಾರ ಬೆಲೆ ಸಿಗಲಿದೆ ಎಂಬ ಆಸೆಕಂಗಳಿಂದ ಕೂತಿದ್ದ ರೈತರು ಫಸಲು ಬರುತ್ತಿದ್ದಂತೆ ಮಾರುಕಟ್ಟೆಗೆ ತರಲು ಆರಂಭಿಸಿದರು.

ಮಾರುಕಟ್ಟೆಗೆ ಜೋಳ ಬರುತ್ತಿದ್ದಂತೆ ಗುಣಮಟ್ಟ ಇನ್ನಿತರ ಆಧಾರದ ನೆಪದಲ್ಲಿ ಜೋಳದ ಬೆಲೆ ಗರಿಷ್ಠ 8000 ರೂಪಾಯಿಯಿಂದ ಕನಿಷ್ಠ 2000-3000 ರೂ.ಗೆ ಏಕಾಎಕಿ ಕುಸಿತಗೊಂಡಿತು. ಇದೀಗ ಸದ್ಯ ಕೃಷಿ ಮಾರುಕಟ್ಟೆ (ಎಪಿಎಂಸಿ) ಗಳಲ್ಲಿ ಜೋಳದ ಕನಿಷ್ಠ 1377 ರವೆರೆಗೂ ದರ ಇಳಿಕೆ ಆಗಿದೆ. ವಿಧಿ ಇಲ್ಲದೇ ಅನಿವಾರ್ಯವಾಗಿ ರೈತರು ಹಾಲಿ ಬೆಲೆಗೆ ಜೋಳ ಮಾರಾಟ ಮಾಡುತ್ತಿದ್ದಾರೆ. ಶಕ್ತ ರೈತರು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದ ಯಾವೆಲ್ಲ ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ? ಪಟ್ಟಿ ಸಹಿತ ಅಂಕಿ ಸಂಖ್ಯೆಗಳು ನಿಮ್ಮ ಮುಂದಿದೆ.
ಜಿಲ್ಲಾವಾರು ಮಾರುಕಟ್ಟೆ ದರ ಪಟ್ಟಿ ವಿವರ
* ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ಪ್ರತಿ ಕ್ವಿಂಟಾಲ್‌ಗೆ ರೂ. 1989 ನಿಂದ 2266 ರೂ. (ಸರಾಸರಿ ಬೆಲೆ 2084 ರೂ)
* ಬೆಂಗಳೂರು ನಗರ ಮಾರುಕಟ್ಟೆ ಜೋಳದ ಕ್ವಿಂಟಾಲ್ ಬೆಲೆ ರೂ. 2500 ನಿಂದ 3500 ರೂ. (ಸರಾಸರಿ ದರ 3000 ರೂ)
* ಗದಗ ಜಿಲ್ಲೆಯ ಮುಂಡರಗಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಜೋಳದ ದರ ರೂ. 1652 ಇದೆ (ಸರಾಸರಿ ದರ 1652ರೂ)
* ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಜೋಳದ ಬೆಲೆ ರೂ.1980 ನಿಂದ 3602 ರೂ. (ಸರಾಸರಿ ದರ 2495 ರೂ)
* ಗದಗ ಜಿಲ್ಲೆ ಲಕ್ಷ್ಮೇಶ್ವರ ಮಾರುಕಟ್ಟೆಯಲ್ಲಿ ಜೋಳದ ದರ ಪ್ರತಿ ಕ್ವಿಂಟಾಲ್ ಕನಿಷ್ಠ ರೂ. 1829 ರಿಂದ 3689 ರೂ. (ಸರಾಸರಿ ಬೆಲೆ ರೂ. 2598)
* ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ (ಅಮರಗೋಳ) ಪ್ರತಿ ಕ್ವಿಂಟಾಲ್ ದರ ರೂ.1809 ರಿಂದ 2951 ರೂ. (ಸರಾಸರಿ ಬೆಲೆ ರೂ. 2022)
* ಗದಗ ಜಿಲ್ಲೆಯ ನಗರ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಜೋಳದ ಬೆಲೆ ರೂ.1377 ನಿಂದ 4249 ರೂ. (ಸರಾಸರಿ ಬೆಲೆ ರೂ. 2950).
* ಬೀದರ್ ಬಸವ ಕಲ್ಯಾಣದಲ್ಲಿ ಜೋಳ ಕ್ವಿಂಟಾಲ್ ದರ ರೂ. 3100 ನಿಂದ 3800 ರೂ. (ಸರಾಸರಿ 3500 ರೂ.)
* ಗದಗ ಜಿಲ್ಲೆ ಲಕ್ಷ್ಮೇಶ್ವರ ಮಾರುಕಟ್ಟೆ (2) ಯಲ್ಲಿ ಜೋಳದ ದರ ಪ್ರತಿ ಕ್ವಿಂಟಾಲ್ ಕನಿಷ್ಠ ರೂ. 2120 ರಿಂದ 3909 ರೂ. (ಸರಾಸರಿ ಬೆಲೆ ರೂ. 3372).
ಚಿನ್ನದ ನಾಡು ರಾಯಚೂರಿನಲ್ಲೂ ಸಹ ಬಂಗಾರದ ಬೆಳೆ ಬೆಳೆದ ರೈತರಿಗೆ ಬೆಲೆ ಇಳಿಕೆ ಆರ್ಥಿಕ ನಷ್ಟಕ್ಕೆ ದೂಡಿದೆ. ರೈತರ ನಿರೀಕ್ಷೆಗಳು ಎಲ್ಲವು ಹುಸಿಯಾಗಿವೆ. ರೈತರ ಹಾಲಿ ಬೆಲೆಗೆ ಜೋಳ ಮಾರಾಟ ಮಾಡಿ ಬಂದ ಹಣದಲ್ಲಿ ಮುಂದಿನ ಮುಂಗಾರು ಹಂಗಾಮು ಬಿತ್ತನೆಗೆ ಅಣಿಯಾಗುತ್ತಿದ್ದಾರೆ.












Click it and Unblock the Notifications