Khata: ಎ ಖಾತಾ - ಬಿ ಖಾತಾ ಎಂದರೇನು, ಆಸ್ತಿದಾರರಿಗೆ ಯಾವುದಿದ್ದರೆ ಹೆಚ್ಚು ಲಾಭ!

ಕರ್ನಾಟಕದಲ್ಲಿನ ಆಸ್ತಿದಾರರಿಗೆ ಎ ಖಾತಾ ಹಾಗೂ ಬಿ ಖಾತಾ ಮುಗಿಯಲಾರದ ಗೊಂದಲವಾಗಿ ಮಾರ್ಪಟ್ಟಿದೆ. ಅದರಲ್ಲೂ ಬೆಂಗಳೂರಿನಲ್ಲಿರುವ ಆಸ್ತಿದಾರರು ಬಿ ಖಾತಾ ತೆಗೆದುಕೊಂಡು ಆಸ್ತಿ ಇದ್ದರೂ ಪರದಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಆಸ್ತಿ ಇದ್ದರೂ ಬಿ ಖಾತಾ ಆಗಿದ್ದರೆ ಪ್ರಾಪರ್ಟಿದಾರರಿಗೆ ಹಲವು ಸೌಲಭ್ಯಗಳು ಸಿಗುವುದಿಲ್ಲ. ಹಾಗಾದರೆ ಎ ಖಾತಾ ಹಾಗೂ ಬಿ ಖಾತಾ ನಡುವಿನ ವ್ಯತ್ಯಾಸವೇನು. ಎ ಹಾಗೂ ಬಿ ಖಾತಾ ಇದ್ದರೆ ಯಾವ ಸೌಲಭ್ಯಗಳು ಸಿಗುತ್ತವೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎ ಖಾತಾ ಹಾಗೂ ಬಿ ಖಾತಾವನ್ನು ಪರಿಚಯಿಸಲಾಗಿತ್ತು. ಇದೀಗ ರಾಜ್ಯದಾದ್ಯಂತ ಒಂದು ಬಾರಿ ಬಿ - ಖಾತಾ ಪರಿಚಯ ಮಾಡಲಾಗಿದೆ. ಅಕ್ರಮ, ಅನಧಿಕೃತ ಹಾಗೂ ರೆವಿನ್ಯೂ ನಿವೇಶನಗಳಿಗೆ ಒಂದು ಬಾರಿ ಬಿ ಖಾತಾ ಸೌಲಭ್ಯ ಸಿಗಲಿದೆ. ಆದರೆ ಮುಂದಿನ ದಿನಗಳಲ್ಲಿ ಬಿ ಖಾತಾ ಸಿಗುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ಹೇಳಿದೆ. ಹಾಗಾದರೆ ಇಷ್ಟಕ್ಕೂ ಈ ಖಾತಾಗಳು ಎಂದರೇನು. ಬಿ ಖಾತಾಗಿಂತ ಎ ಖಾತಾ ಹೆಚ್ಚು ಸುರಕ್ಷಿತ ಯಾಕೆ ಎನ್ನುವ ಕಂಪ್ಲೀಟ್ ನೋಡೋಣ.

What is A Khata and B Khata Which is More Beneficial for Property Owners

ಖಾತಾ ಎನ್ನುವುದು ಆಸ್ತಿಗಳಿಗೆ ಆತ್ಮವಿದ್ದಂತೆ ಎಂದೇ ಹೇಳಬಹುದು. ಆಸ್ತಿಗಳ ಖರೀದಿ ಹಾಗೂ ಮಾರಾಟದ ಸಮಯದಲ್ಲಿ ಇಲ್ಲವೇ ಯಾವುದೇ ವಿಚಾರದಲ್ಲಾದರೂ ಆಸ್ತಿ ಖಾತಾ ಎನ್ನುವುದು ಅತ್ಯಗತ್ಯವಾಗುತ್ತದೆ. ಆಸ್ತಿ ಕಾನೂನುಬದ್ಧವಾಗಿದೆ ಎಂದು ಹೇಳುವುದಕ್ಕೆ ಖಾತಾ ಕಡ್ಡಾಯವಾಗಿ ಬೇಕಾಗುತ್ತದೆ. ಖಾತಾ ಎನ್ನುವುದು ಆಸ್ತಿಗೆ ಸಂಬಂಧಿಸಿದ ಪ್ರಮಾಣ ಪತ್ರವಾಗಿದೆ. ಇದರಲ್ಲಿ ಆಸ್ತಿಯ ವಿಸ್ತೀರ್ಣ ಹಾಗೂ ಆಸ್ತಿ ಯಾರಿಗೆ ಸೇರಿದೆ ಎನ್ನುವುದು ಸೇರಿದಂತೆ ಎಲ್ಲಾ ಸಂಪೂರ್ಣ ಮಾಹಿತಿಯೂ ಇರುತ್ತದೆ. ಖಾತಾ ಇದರೆ ಮಾತ್ರ ನಿಮಗೆ ಕಟ್ಟಡದ ಪರವಾನಗಿ, ಲೇಔಟ್ ನಿರ್ಮಾಣ ಯೋಜನೆಗೆ ಅನುಮೋದನೆ, ಬ್ಯಾಂಕ್‌ಗಳಿಂದ ಸಾಲ, ವಿದ್ಯುತ್ ಸಂಪರ್ಕ ಹಾಗೂ ನೀರಿನ ಸಂಪರ್ಕ ಸೇರಿದಂತೆ ಹಲವು ಸೌಲಭ್ಯಗಳು ಸಿಗುತ್ತವೆ.

ಎ - ಖಾತಾ ಎಂದರೇನು: ಎ ಖಾತಾ ಎನ್ನುವುದು ಆಸ್ತಿ ಕಾನೂನು ಬದ್ಧವಾಗಿದೆ ಎಂದಾಗುತ್ತದೆ. ಆಸ್ತಿ ಮಾಲೀಕರು ಆಸ್ತಿ ತೆರಿಗೆ ಪಾವತಿ ಮಾಡುವವ ಆಸ್ತಿದಾರರ ಪಟ್ಟಿಯಲ್ಲಿ ಇದ್ದಾರೆ ಎನ್ನುವುದನ್ನು ಪ್ರಮಾಣೀಕರಿಸುವ ದಾಖಲೆ. ಅಲ್ಲದೇ ಎ - ಖಾತಾ ಇದ್ದರೆ ಆ ಕಟ್ಟಡಗಳನ್ನು ಕಾನೂನುಬದ್ಧವಾಗಿ ನಿರ್ಮಾಣ ಮಾಡಲಾಗಿದೆ. ಸರಿಯಾಗಿ ತೆರಿಗೆ ದಾಖಲೆಗಳನ್ನು ಹೊಂದಿರುವ ಆಸ್ತಿ ಎಂದು ಗುರುತಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

ಬಿ ಖಾತಾ ಎಂದರೇನು: ಬಿ ಖಾತಾ ಎಂಬುದು ಅಕ್ರಮ ಅಥವಾ ಅರೆ-ಕಾನೂನು ಆಸ್ತಿ ಅಥವಾ ನಿವೇಶನ ಎನ್ನಲಾಗುತ್ತದೆ. ಅನುಮೋದನೆಗಳಿಗಾಗಿ ಬಾಕಿ ಉಳಿಸಲಾಗಿರುವ ಆಸ್ತಿಗಳನ್ನು ಬಿ ಖಾತಾ ವ್ಯಾಪ್ತಿಗೆ ಸೇರಿಸಲಾಗುತ್ತದೆ. ಅನಧಿಕೃತ ನಿವೇಶನ ಮತ್ತು ಬಡಾವಣೆಗಳನ್ನು ಬಿ ಖಾತಾ ವ್ಯಾಪ್ತಿಯಲ್ಲಿ ಇರಿಸಲಾಗಿದೆ.

ಬೆಂಗಳೂರಿನಲ್ಲಿ ಎ ಖಾತಾ ಹಾಗೂ ಬಿ ಖಾತಾ ವ್ಯತ್ಯಾಸ ಹಾಗೂ ಲಾಭ ವಿವರ

ಎ ಖಾತಾ ಮತ್ತು ಬಿ ಖಾತಾ: ಎ ಖಾತಾದ ಆಸ್ತಿಗಳು ಕಾನೂನು ಬದ್ಧವಾಗಿದ್ದು ಸುಲಭವಾಗಿ ವರ್ಗಾವಣೆ ಮತ್ತು ಮರು ಮಾರಾಟ ಮಾಡುವುದಕ್ಕೆ ಸಾಧ್ಯವಿದೆ. ಆದರೆ ಬಿ ಖಾತಾದಲ್ಲಿ ಈ ಸೌಲಭ್ಯಗಳು ಇರುವುದಿಲ್ಲ. ಎ ಖಾತಾಗೆ ವಾಣಿಜ್ಯ ಪರವಾನಗಿ ಸಿಗುತ್ತದೆ. ಅಲ್ಲದೇ ನಿರ್ಮಾಣ ಪರವಾನಗಿ ಹಾಗೂ ವಿಸ್ತರಣೆ ಅಂದರೆ ಅಂತಸ್ತುಗಳನ್ನು ಕಟ್ಟುವುದಕ್ಕೆ ಅವಕಾಶ ಇರಲಿದೆ. ಆದರೆ ಬಿ ಖಾತಾಗೆ ಈ ಸೌಲಭ್ಯಗಳು ಸಿಗಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+