ಹೊಸ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಹರಿಯಲ್ಲ, ನೀರಲ್ಲಿ ಬಿದ್ದರೆ ನೆನೆಯಲ್ಲ!
ಬೆಂಗಳೂರು, ನವೆಂಬರ್ 23: ಇನ್ನುಮುಂದೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಸಂಪೂರ್ಣ ಸುರಕ್ಷಿತ, ಹಾಗಾದರೆ ನೀರಿನಲ್ಲಿ ಬಿದ್ದರೆ ಅಕ್ಷರಗಳೆಲ್ಲವೂ ಅಳಿಸಿ ಹೋಗುವುದಿಲ್ಲವೇ, ಅಂಕಪಟ್ಟಿ ಹರಿಯುವುದಿಲ್ಲವೇ ಎಂದು ನೀವು ಪ್ರಶ್ನಿಸಬಹುದು.
ಹೌದು ಇನ್ನಮುಂದೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಷ್ಟು ಸುರಕ್ಷಿತವಾಗಿರುತ್ತದೆ, ನೀರಿನಲ್ಲಿ ಬಿದ್ದರೆ ನೆನೆಯುವುದೂ ಇಲ್ಲ, ಅಕ್ಷರಗಳೂ ಅಳಿಸುವುದಿಲ್ಲ, ಹರಿಯುವುದೂ ಇಲ್ಲ ವಿದ್ಯಾರ್ಥಿಗಳಿಗೆ ಮತ್ತಷ್ಟು ಸುರಕ್ಷಿತವಾದ ಅಂಕಪಟ್ಟಿಯನ್ನು ಒದಗಿಸಲು ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾರ್ಯೋನ್ಮುಖವಾಗಿದೆ.
2019ರ ಮಾರ್ಚ್, ಏಪ್ರಿಲ್‌ನಲ್ಲಿ ಬರೆಯುವ ಎಸ್‌ಎಸ್‌ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇಂತಹ ಅಂಕಪಟ್ಟಿಗಳು ಲಭ್ಯವಾಗಲಿದೆ.

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಈಗ ಲ್ಯಾಮಿನೇಷನ್ ರೂಪದಲ್ಲಿ ಅಂಕಪಟ್ಟಿಗಳನ್ನು ವಿತರಿಸುತ್ತಿದೆ. ಆದರೆ ಲ್ಯಾಮಿನೇಷನ್ ಮಾಡಿದ ಅಂಕಪಟ್ಟಿಗಳನ್ನು ಬಹಳ ದಿನ ಸುರಕ್ಷಿತವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಈ ಆಲೋಚನೆ ಮಾಡಿದ್ದಾರೆ.
ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಪ್ರತಿಯೊಬ್ಬರಿಗೂ ಪ್ರಮುಖವಾಗಿದೆ, ಯಾವುದೇ ಕೆಲಸಕ್ಕೆ ಸೇರಬೇಕಿದ್ದರೂ ಇನ್ಯಾವುದೇ ಕೋರ್ಸ್‌ಗಳನ್ನು ಆರಂಭಿಸಬೇಕಿದ್ದರೂ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯನ್ನೇ ಕೇಳುತ್ತಾರೆ. ಹಾಗಾಗಿ ಅದು ಹರಿದು ಹೋಗದಂತೆ , ನೀರಿಗೆ ಬಿದ್ದರೂ ನೆನೆಯದಂತೆ ಸಿದ್ಧಪಡಿಸಲಾಗುತ್ತಿದೆ.












Click it and Unblock the Notifications