ದುಬಾರಿ ಕಾರುಗಳ ಪಟ್ಟಿ : ಇಂದು ಎಚ್ಡಿಕೆಯಿಂದ ದಾಖಲೆ ಬಿಡುಗಡೆ

ಮಂಡ್ಯ, ಫೆಬ್ರವರಿ 26 : ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧದ ವಾಚು ಮತ್ತು ದುಬಾರಿ ಕಾರುಗಳ ಆರೋಪಕ್ಕೆ ಇಂದು ಉತ್ತರ ಸಿಗಲಿದೆ. 'ನಾನು ಕಟ್ಟುತ್ತಿರುವ ವಾಚ್ ಮತ್ತು ನನ್ನ ಮಗನ ಬಳಿಯಿರುವ ಐಷಾರಾಮಿ ಕಾರು ಹಾಗೂ ದುಬಾರಿ ಬೆಲೆಯ ವಾಚ್‍ ಬಗ್ಗೆ ಶುಕ್ರವಾರ ಉತ್ತರ ಕೊಡುವುದಾಗಿ' ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಂಕನಾಥಪುರ ಗ್ರಾಮದಲ್ಲಿ ಗುರುವಾರ ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ ಅವರು, 'ಕುಮಾರಸ್ವಾಮಿ ಬಳಿ 5 ಐಷಾರಾಮಿ ಕಾರುಗಳಿವೆ, 1 ಕೋಟಿ ರೂ. ಮೊತ್ತದ ವಾಚ್ ಕಟ್ಟುತ್ತಾನೆ ಎಂದೆಲ್ಲಾ ಸಿದ್ದರಾಮಯ್ಯ ಅವರ ಪರವಾಗಿ ಕೆಲವರು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಅವರದ್ದೇ ಸರ್ಕಾರವಿದೆ, ತನಿಖೆ ನಡೆಸಿ ರಾಜ್ಯದ ಜನತೆ ಮುಂದೆ ಸತ್ಯ ತೆರೆದಿಡಲಿ' ಎಂದು ಸವಾಲು ಹಾಕಿದರು. [ಕುಮಾರಸ್ವಾಮಿ ದುಬಾರಿ ಕಾರುಗಳ ಪಟ್ಟಿ]

hd kumaraswamy

'ನನ್ನ ಮಗ ನಿಖಿಲ್ ಐಷಾರಾಮಿ ಕಾರಿನಲ್ಲಿ ಓಡಾಡುತ್ತಾನೆ, ಕೋಟಿ ಮೊತ್ತದ ವಾಚ್ ಕಟ್ಟುತ್ತಾನೆ ಎಂದೆಲ್ಲ ಸಿದ್ದರಾಮಯ್ಯ ಬೆಂಬಲಿಗರಾದ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಎಚ್.ಎಂ.ರೇವಣ್ಣ ಆರೋಪಿಸಿದ್ದಾರೆ. ಶುಕ್ರವಾರ ಎಲ್ಲದಕ್ಕೂ ಉತ್ತರ ಕೊಡುವುದಾಗಿ' ಕುಮಾರಸ್ವಾಮಿ ಹೇಳಿದರು. [ವಾಚ್ ವಿವಾದ : ಕುಮಾರಸ್ವಾಮಿ ಕೇಳಿದ 5 ಪ್ರಶ್ನೆಗಳು]

'ಸಿದ್ದರಾಮಯ್ಯ ಅವರ ಬಳಿಯಿರುವ ದುಬಾರಿ ಬೆಲೆಯ ವಾಚನ್ನು ಯಾರು ಕೊಟ್ಟಿದ್ದು? ಎಂದು ಬಹಿರಂಗಪಡಿಸಲು ಇಷ್ಟು ದಿನ ತೆಗೆದುಕೊಂಡಿದ್ದು ಯಾಕೆ? ಇದರಿಂದಲೇ ಗೊತ್ತಾಗುತ್ತದೆ ಅವರು ಈ ಪ್ರಕರಣವನ್ನು ಮುಚ್ಚಿಡಲು ದುಬೈನಲ್ಲಿರುವ ತನ್ನ ಸ್ನೇಹಿತ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಇದನ್ನೆಲ್ಲ ಜನ ನಂಬುವುದಿಲ್ಲ ಎಂಬುದು ಅವರಿಗೆ ತಿಳಿದಿರಲಿ' ಎಂದರು. [ಕೈಗಡಿಯಾರದ ರಾದ್ಧಾಂತ, ಕಡೆಗೂ ಬಾಯ್ಬಿಟ್ಟ ಸಿದ್ದರಾಮಯ್ಯ]

ಫೆ.20ರ ಶನಿವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಸಿದ್ದರಾಮಯ್ಯ ಆಪ್ತ ಎಚ್.ಎಂ.ರೇವಣ್ಣ ಮುಂತಾದ ನಾಯಕರು, ಕುಮಾರಸ್ವಾಮಿ ಅವರ ದುಬಾರಿ ಕಾರುಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದರು.

ದುಬಾರಿ ಕಾರುಗಳ ಪಟ್ಟಿ ಬಿಡುಗಡೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಚ್ ಪುರಾಣ ಬಿಚ್ಚಿಟ್ಟಿದ್ದ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸಿಗರು ತಿರುಗೇಟು ನೀಡಿದ್ದರು. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದು, ಕಾಂಗ್ರೆಸಿಗರ ಆರೋಪಗಳಿಗೆ ಉತ್ತರ ನೀಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+