14 ಕ್ಷೇತ್ರಗಳಲ್ಲಿ ಅಂಚೆ ಮತದಾನ: ಎಲ್ಲೆಲ್ಲಿ, ವಿಳಾಸ
ಬೆಂಗಳೂರು, ಏಪ್ರಿಲ್ 30: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರಂದು ಮತದಾನ ನಡೆಯುತ್ತಿದೆ. ಚುನಾವಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳು ಅಂಚೆ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಮೇ 1 ರಿಂದ 3ರ ತನಕ ಅಂಚೆ ಮತದಾನ ಮಾಡಬಹುದು.
ಲೋಕಸಭಾ ಸಾರ್ವತ್ರಿಕ ಚುನಾವಣೆ ಕರ್ತವ್ಯದಲ್ಲಿ ತೊಡಗಿ ಮತದಾನ ದಿನದಂದು ಗೈರು ಹಾಜರಿ ಹಾಗೂ ಅಗತ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಮೇ 1 ರಿಂದ 3ರ ವರೆಗೆ ಅಂಚೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಅಂದು ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾಗುವ ವಿವಿಧ ಕ್ಷೇತ್ರಗಳ ಸಿಬ್ಬಂದಿಗಳು ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗವು ಅಂಚೆ ಮತದಾನ ಮಾಡಲು ವಿಶೇಷ ಅವಕಾಶ ಕಲ್ಪಿಸಿದೆ.
ಇದಕ್ಕಾಗಿ ಚುನಾವಣಾ ಆಯೋಗ ಅಗತ್ಯ ಸೇವೆಗಳಡಿ ಗುರುತಿಸಿರುವ ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟ ಅಧಿಕಾರಿ/ ಸಿಬ್ಬಂದಿಗಳು ಅಂಚೆ ಮತವನ್ನು ಚಲಾಯಿಸಲು ಅವಕಾಶ ಒದಗಿಸಲಾಗಿದೆ.
14 ಲೋಕಸಭಾ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯ ತನಕ ಮಾತ್ರ ಅಂಚೆ ಮತದಾನ ಮಾಡಬಹುದು. ಯಾರು ಅಂಚೆ ಮತದಾನ ಮಾಡಬೇಕು ಎಂದು ಈಗಾಗಲೇ ನೋಂದಣಿ ಮಾಡಿಕೊಳ್ಳಲಾಗಿದೆ. ಯಾವ ಕ್ಷೇತ್ರದಲ್ಲಿ ಎಲ್ಲಿ ಮತದಾನ ಮಾಡಬೇಕು ಎಂಬ ವಿಳಾಸ ಇಲ್ಲಿದೆ ನೋಡಿ.
1. ಚಿಕ್ಕೋಡಿ. ತಹಶೀಲ್ದಾರ್ ಕಛೇರಿ ಕೋರ್ಟ್ ಹಾಲ್, ಬಸವೇಶ್ವರ ಸರ್ಕಲ್ ಹತ್ತಿರ, ಚಿಕ್ಕೋಡಿ
2. ಬೆಳಗಾವಿ. ಜಿಲ್ಲಾಧಿಕಾರಿಗಳ ಕಛೇರಿ (ಮುಜರಾಯಿ ವಿಭಾಗ). ನೆಲ ಮಹಡಿ, ಬೆಳಗಾವಿ
3. ಬಾಗಲಕೋಟೆ. ಜಿಲ್ಲಾಧಿಕಾರಿಗಳ ಕಛೇರಿ, ಬಾಗಲಕೋಟೆ ಜಿಲ್ಲಾಡಳಿತ ಭವನ, ನವನಗರ. ಬಾಗಲಕೋಟೆ
4. ವಿಜಯಪುರ. ಸಹಾಯಕ ನಿರ್ದೇಶಕರ ಕಛೇರಿ (IRA), ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಡಿಸಿ ಕಛೇರಿ ಆವರಣ, ಎಸ್‌ಬಿಎಂ ಎಂಟಿಎಂ ಎದುರು. ವಿಜಯಪುರ.
5. ಕಲಬುರಗಿ. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಮಿನಿ ವಿಧಾನಸೌಧ ಹತ್ತಿರ), ಸ್ಟೇಷನ್ ರಸ್ತೆ, ಕಲಬುರಗಿ
6. ರಾಯಚೂರು. ತಹಶೀಲ್ದಾರ್ ಕಛೇರಿ. ರಾಯಚೂರು
7. ಬೀದರ್. 50-ಬೀದರ್. ಎಆರ್‌ಓ ಕಛೇರಿ. ಸಹಾಯಕ ಆಯುಕ್ತರ ಕಛೇರಿ. ಡಿಸಿ ಕಛೇರಿ.
8. ಕೊಪ್ಪಳ. ಮೀಟಿಂಗ್ ಹಾಲ್ ಡಿಸಿ ಕಛೇರಿ. ಕೊಪ್ಪಳ
9. ಬಳ್ಳಾರಿ. ಗಾಂಧಿ ಭವನ. ಜಿಲ್ಲಾಧಿಕಾರಿಗಳ ಕಛೇರಿ. ರೈಲ್ವೆ ನಿಲ್ದಾಣದ ಎದುರು. ಬಳ್ಳಾರಿ
10. ಹಾವೇರಿ. ಆರ್‌ಓ ಆಫೀಸ್ ಕೋರ್ಟ್ ಹಾಲ್, ಹಾವೇರಿ
11. ಧಾರವಾಡ. ತಹಶೀಲ್ದಾರ್ ಕಛೇರಿ ಧಾರವಾಡ. (ಚುನಾವಣಾ ಶಾಖೆ)
12. ಉತ್ತರ ಕನ್ನಡ. ಡಿಸಿ ಕಛೇರಿ, ಕಾರವಾರ
13. ದಾವಣಗೆರೆ. ಕೊಠಡಿ ಸಂಖ್ಯೆ 5. ಆಡಳಿತ ಕಛೇರಿ, ನೆಲ ಮಹಡಿ, ಸ್ಮಾರ್ಟ್ ಸಿಟಿ ಕಛೇರಿ. ದಾವಣಗೆರೆ.
14. ಶಿವಮೊಗ್ಗ. ಎಆರ್‌ಒ ಕಛೇರಿ. 1ನೇ ಮಹಡಿ. ತಾಲೂಕು ಕಛೇರಿ, ಶಿವಮೊಗ್ಗ.
ಯಾರು-ಯಾರು ಅಂಚೆ ಮತದಾನ ಮಾಡಬಹುದು?; ರಾಜ್ಯದಲ್ಲಿ ಈ ಕೆಳಕಂಡ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳನ್ನು ಅಗತ್ಯ ಸೇವೆಗಳ ಅಡಿಯಲ್ಲಿ ಬರುವ ಇಲಾಖೆಗಳೆಂದು ಭಾರತ ಚುನಾವಣಾ ಆಯೋಗದಿಂದ ಗುರುತಿಸಲ್ಪಟ್ಟಿವೆ. ಇವರು ಮೇಲೆ ತಿಳಿಸಿರುವ ವಿಳಾಸಕ್ಕೆ ಭೇಟಿ ನೀಡಿ ಅಂಚೆ ಮತದಾನ ಮಾಡಬಹುದು. ಅದಕ್ಕಾಗಿ ಈಗಾಗಲೇ ನೋಂದಣಿ ಸಹ ಮುಗಿದಿದೆ.
ವಿದ್ಯುಚ್ಛಕ್ತಿ ಇಲಾಖೆ, ಭಾರತ್ ಸಂಚಾರ ನಿಗಮ ನಿಯಮಿತ, ರೈಲ್ವೇ ಇಲಾಖೆ, ದೂರದರ್ಶನ, ಆಕಾಶವಾಣಿ, ಆರೋಗ್ಯ ಇಲಾಖೆ, ವಿಮಾನಯಾನ ಇಲಾಖೆ, ಸಾರಿಗೆ ಸೇವೆ (ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಹಾಗೂ ಎನ್‌ಇಕೆಆರ್‌ಟಿಸಿ), ಅಗ್ನಿಶಾಮಕ ಸೇವೆಗಳು, ಮತದಾನ ದಿನದ ಸುದ್ದಿಗಳನ್ನು ಪ್ರಸಾರ ಮಾಡಲು ಅಧಿಕೃತಗೊಳಿಸಿದ ಮಾಧ್ಯಮ ವರದಿಗಾರರು, ಸಂಚಾರಿ ಪೊಲೀಸ್.
ಆಂಬ್ಯುಲೆನ್ಸ್ ಸೇವೆಗಳು, ಬಂದಿಖಾನೆ, ಕಂಟ್ರೋಲ್ ರೂಂ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳು, ಗ್ರಾಮೀಣ ಮತ್ತು ನಗರ ಕುಡಿಯುವ ನೀರು ಸರಬರಾಜು ಇಲಾಖೆಯ ಅಭಿಯಂತರರು ಅಂಚೆ ಮತದಾನ ಮಾಡಬಹುದು.












Click it and Unblock the Notifications