Vickypedia: ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ 'ಸಿಂಗಲ್ ಗರ್ಲ್ಸ್...' ವಿಕ್ಕಿಪೀಡಿಯ ವಿಕಾಸ್ ಹೊಸ ಸಾಂಗ್
'ನಾನು ನಂದಿನಿ ಬೆಂಗಳೂರಿಗೆ ಬಂದಿನಿ..' ಈ ಸಾಂಗ್ ಯಾರೆಲ್ಲಾ ಕೇಳಿದ್ದೀರೋ ಅವರಿಗೆಲ್ಲಾ ವಿಕ್ಕಿಪೀಡಿಯ ವಿಕಾಸ್ ಗೊತ್ತೇ ಇರುತ್ತೆ. ವಿಕಾಸ್ ಆಗಾಗಾ ಕನ್ನಡ, ಇಂಗ್ಲೀಷ್ ಇತರ ಭಾಷೆಯ ಹಾಡುಗಳ ರಿಲೀಕ್ಸ್‌ಗೆ ಹುಡುಗಿ ಉಡುಪಿನಲ್ಲಿ ತಮ್ಮದೇ ಆದ ಶೈಲಿಯಲ್ಲಿ ಹಾಡುಗಳನ್ನು ಕ್ರಿಯೇಟ್ ಮಾಡುತ್ತಾರೆ. ಇತ್ತೀಚೆಗೆ ಅವರ 'ಸಿಂಗಲ್ ಗರ್ಲ್ಸ್...' ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹೌದು.. 'ಸಿಂಗಲ್ ಗರ್ಲ್ಸ್...' ಹಾಡನ್ನು ಅವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ಸಾಕಷ್ಟು ಜನ ಇದನ್ನು ಇಷ್ಟಪಟ್ಟಿದ್ದಾರೆ. ಪುಟ್ಟ ಮಕ್ಕಳ 'Jingle Bells.. Jingle Bells.. Jingle All The Way..' ರೈಮ್ಸ್‌ನ ರಿಲೀಕ್ಸ್‌ಗೆ ವಿಕ್ಕಿಪೀಡಿಯ ವಿಕಾಸ್ 'Single Girls...Single Girls.. Single All The Way..' ಎಂಬ ಹಾಡನ್ನು ಕ್ರಿಯೇಟ್ ಮಾಡಿದ್ದಾರೆ. ಈ ಹಾಡಿನಲ್ಲಿ ಹುಡುಗಿಯರು ಮದುವೆಯಾಗದೇ ಇರಲು ಕಾರಣವನ್ನು ವಿಕಾಸ್ ತಿಳಿಸಿದ್ದಾರೆ. ಹಾಗಾದರೆ ವಿಕಾಸ್ ಕ್ರಿಯೇಟ್ ಮಾಡಿದ ಹಾಡು ಹೇಗಿದೆ..?

'ಸಿಂಗಲ್ ಗರ್ಲ್ಸ್' ಹೊಸ ಸಾಂಗ್...
''ಸಿಂಗಲ್ ಗರ್ಲ್ಸ್.... ಸಿಂಗಲ್ ಗರ್ಲ್ಸ್... ಸಿಂಗಲ್ ಆಲ್ ದಿ ವೇ.. Life Will End Without Boyfriend We Will Die This Way... Heyyy.... ಸಿಂಗಲ್ ಗರ್ಲ್ಸ್.... ಸಿಂಗಲ್ ಗರ್ಲ್ಸ್... ಸಿಂಗಲ್ ಆಲ್ ದಿ ವೇ.. Life Will End Without Boyfriend We Will Die This Way... I Liked A Handsome Boy But ಅವನ್ದು ಬೇರೆ Caste ನಮ್ ಮನೆಲ್ ಒಪ್ಪಲ್ಲ So Commit ಆಗ್ಲಿಲ್ಲ... ಹುಡುಗ ಬಂದಿದ್ದ ಅವನು ತುಂಬಾ Cute ಇದ್ದ Last ಅಲ್ಲಿ Dowry ಕೇಳ್ಬಿಟ್ಟ So ಮುಂದಕ್ ಹೋಗ್ಲಿಲ್ಲ.. Heyyy...
Single Girls...Single Girls.. Single All The Way.. Life Will End Without Boyfriend We Will Die This Way...ಅವನು ಕುಡಿಯೋದಿಲ್ವಂತೆ Family Orthodox ಅಂತೆ House Wife ಆಗು ಅಂದ ಅದಕೆ ನಾನ್ ಒಪ್ಕೋಳಿಲ್ಲ.... ನಾನು World Tour ಮಾಡಬೇಕು.. Higher Studies ಮಾಡ್ಬೇಕು... ನನ್ ಕಾಲ್ ಮೇಲ್ ನಾನು ನಿಲ್ಬೇಕ್ ಅಂತ ಮದುವೇ ಆಗ್ಲಿಲ್ಲ Heyyy...''
ಹಾಡಿನ ತಾತ್ಪಾರ್ಯವೇನು?
ವಿಕ್ಕಿಪೀಡಿಯಾ ವಿಕ್ಕಿ ಈ ಹಾಡಿನ ಮೂಲಕ ಮದುವೆಯಾಗದೇ ಇರುವ ಹುಡುಗಿಯ ಆಸೆ ಏನು? ಮದುವೆ ಯಾಕಾಗಿ ಆಗಲ್ಲ? ಅವಳ ಗುರಿ ಏನು ಎನ್ನುವ ಬಗ್ಗೆ ತಿಳಿಸಿದ್ದಾರೆ. ಹುಡುಗಿಯರು ಮದುವೆ ಆಗಬೇಕು ಅಂತ ಹುಡುಗನನ್ನು ನೋಡುತ್ತಾರೆ. ಆದರೆ ಹುಡುಗನ ಆಸೆಗಳು ಹಾಗೂ ಹುಡುಗಿಯ ಆಸೆಗಳು ಮ್ಯಾಚ್ ಆಗದೆ ಮದುವೆ ಆಗದೆ ಹುಡುಗಿಯರು ಒಂಟಿಯಾಗಿ ಇರುತ್ತಾರೆ ಎನ್ನುವುದು ಈ ಹಾಡಿನ ತಾತ್ಪರ್ಯವಾಗಿದೆ. ಈ ಹಾಡಿಗೆ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಜನ ಈ ಹಾಡನ್ನು ಇಷ್ಟಪಟ್ಟಿದ್ದಾರೆ. ಜೊತೆಗೆ ಹೆಚ್ಚೆಚ್ಚು ಹಂಚಿಕೊಂಡಿದ್ದಾರೆ.
ದಿವಾಳಿ ಮತ್ತು ದೀಪಾವಳಿ ವ್ಯತ್ಯಾಸ
ಈ ಹಿಂದೆ ವಿಕಾಸ್ ದೀಪಾವಳಿ ಹಬ್ಬಕ್ಕೆಂದು ದಿವಾಳಿ ಹಾಗೂ ದೀಪಾವಳಿ ಹಬ್ಬದ ನಡುವಿನ ವ್ಯತ್ಯಾಸ ತಿಳಿಸುವ ಹಾಡನ್ನು ಹಂಚಿಕೊಂಡಿದ್ದರು. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಮಳೆ ಅವಾಂತರದ ವಿಡಿಯೋ ಕ್ರೀಯೆಟ್ ಮಾಡಿ ಹಂಚಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ನಾನು ನಂದಿನಿ ಬೆಂಗಳೂರಿಗೆ ಬಂದಿನಿ...
'ನಾನು ನಂದಿನಿ ಬೆಂಗಳೂರಿಗೆ ಬಂದಿನಿ...' ವಿಕಾಸ್ ಕ್ರಿಯೇಟ್ ಮಾಡಿದ ಈ ಹಾಡು ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಸಾಕಷ್ಟು ಮೆಚ್ಚುಗೆಯನ್ನೂ ಸಹ ಪಡೆದುಕೊಂಡಿತ್ತು. ವಿಕಾಸ್ ಹುಡುಗಿಯರ ಉಡುಪಿನಲ್ಲಿ ಮಾಡುವ ವಿಡಿಯೋಗಳು ವಿಶೇಷವಾಗಿ ಯುವ ಜನತೆಯ ಗಮನ ಸೆಳೆಯುತ್ತವೆ. ಹೀಗಾಗಿ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತವೆ. ಈವರೆಗೆ ವಿಕಾಸ್ ಕ್ರಿಯೇಟ್ ಮಾಡಿದ ವಿಡಿಯೋಗಳು ಸಾಕಷ್ಟು ಯುವಜನತೆಯ ಮೆಚ್ಚುಗೆ ಪಡೆದಿವೆ.












Click it and Unblock the Notifications