ವಿಡಿಯೋ : ರಾಜ್ಯ ರಾಣಿ ಎಕ್ಸ್‌ಪ್ರೆಸ್‌ಗೆ ಮಹಿಳಾ ಸಾರಥಿ
ಬೆಂಗಳೂರು, ಮಾರ್ಚ್ 02 : ಭಾರತೀಯ ರೈಲ್ವೆ ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಬೆಂಗಳೂರು-ಮೈಸೂರು ನಡುವಿನ ರಾಜ್ಯ ರಾಣಿ ಎಕ್ಸ್‌ಪ್ರೆಸ್ ರೈಲನ್ನು ಭಾನುವಾರ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
Recommended Video

Indian Women beat Sri lanka by 7 wickets
ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ಈ ಕುರಿತು ಟ್ವೀಟ್ ಮಾಡಿದ್ದಾರೆ. "ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೂ ಮುನ್ನವೇ ಮಹಿಳೆಯರ ಸಬಲೀಕರಣದತ್ತ ನಡೆ" ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. ಮಹಿಳೆಯರು ರೈಲು ಚಲಾಯಿಸುವ ವಿಡಿಯೋವನ್ನು ಹಾಕಿದ್ದಾರೆ.
ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ರಾಜಾ ರಾಣಿ ರೈಲನ್ನು ಭಾನುವಾರ ಇಬ್ಬರು ಮಹಿಳೆಯರು ಚಲಾಯಿಸಿದ್ದಾರೆ. 48 ಸೆಕೆಂಡ್‌ಗಳ ವಿಡಿಯೋವನ್ನು ಇದುವರೆಗೂ 84.6 ಸಾವಿರ ಜನರು ನೋಡಿದ್ದಾರೆ. 15.9 ಸಾವಿರ ಜನರು ಇಷ್ಟಪಟ್ಟಿದ್ದಾರೆ.

ಕೇಂದ್ರ ಸಚಿವರ ಟ್ವೀಟ್‌ಗೆ ನೂರಾರು ಪ್ರತಿಕ್ರಿಯೆಗಳು ಬಂದಿದ್ದು, ಜನರು ಇದೊಂದು ಉತ್ತಮ ಬೆಳವಣಿಗೆ ಎಂದು ಕಮೆಂಟ್ ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೋ ಇಲ್ಲಿದೆ
null
null












Click it and Unblock the Notifications