Vijayalakshmi : ಜೈಲಿನಲ್ಲಿ ನರಕ ಅನುಭವಿಸುತ್ತಿರುವ ದರ್ಶನ್: ಗೆಳತಿಯರ ಜೊತೆ ವಿಜಯಲಕ್ಷ್ಮಿ ಪಾರ್ಟಿ- ರೊಚ್ಚಿಗೆದ್ದ ಫ್ಯಾನ್ಸ್

ಬೆಂಗಳೂರು, ಸೆಪ್ಟೆಂಬರ್‌ 12: ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ದರ್ಶನ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು, ಬಳ್ಳಾರಿ ಜೈಲಿನಲ್ಲಿದ್ದಾರೆ. ಹತ್ಯೆ ಪ್ರಕರಣದ ವಿರುದ್ಧ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್‌ನಲ್ಲಿ ದರ್ಶನ್ ಬಗ್ಗೆ ಒಂದೊಂದೇ ಸುದ್ದಿ ಹೊರಬೀಳುತ್ತಿದೆ. ಇತ್ತ ಪತ್ನಿ ವಿಜಯಲಕ್ಷ್ಮಿ ಗೆಳತಿಯೊಬ್ಬರ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದು, ದರ್ಶನ್‌ ಫ್ಯಾನ್ಸ್‌ ರೊಚ್ಚಿಗೆದ್ದಿದ್ದಾರೆ.

ದರ್ಶನ್ ವಿರುದ್ಧ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲಿ ದರ್ಶನ್ ಕೊಟ್ಟಿರುವ ಹೇಳಿಕೆಗಳನ್ನು ನಿರಂತರವಾಗಿ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ದೇಶಾದ್ಯಂತ ಚರ್ಚೆಯಾಗುತ್ತಿದೆ. ಈ ವೇಳೆ ಬಳ್ಳಾರಿಯಲ್ಲಿರುವ ದರ್ಶನ್ ಅವರನ್ನು ಇತ್ತೀಚೆಗೆ ವಿಜಯಲಕ್ಷ್ಮಿ ಹೋಗಿ ಆಗಾಗ ಭೇಟಿ ಮಾಡಿ ಬರುತ್ತಿದ್ದಾರೆ.

Vijayalakshmi Darshan Faces Backlash After Party Photos Surface While Husband Darshan Is In Jail

ಸ್ಯಾಂಡಲ್‌ವುಡ್ ನಟ ದರ್ಶನ್‌ಗೆ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್ ಟೆನ್ಷನ್ ಹುಟ್ಟಾಕಿದೆ ಎಂದು ವರದಿಯಾಗಿತ್ತು. ಜಾಮೀನು ಸಿಗುತ್ತೋ ಇಲ್ಲವೋ ಅನ್ನುವ ಆತಂಕದಲ್ಲಿ ಇದ್ದಾರೆ ಎಂದೂ ಹೇಳಲಾಗುತ್ತಿದೆ. ಇದೇ ವೇಳೆ ಪತಿಯನ್ನು ಜೈಲಿನಿಂದ ಹೊರ ತರಲು ವಿಜಯಲಕ್ಷ್ಮಿ ಕೂಡ ಹರಸಾಹಸ ಪಡುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಸ್ನೇಹಿತೆ ಶ್ರುತಿ ರಮೇಶ್ ಕುಮಾರ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿರುವ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಫುಲ್ ವೈರಲ್‌ ಆಗುತ್ತಿದ್ದು, ಫೋಟೋಗಳನ್ನ ಕಂಡ ನೆಟ್ಟಿಗರು ಪತಿ ಜೈಲಿನಲ್ಲಿರುವಾಗ ಪಾರ್ಟಿಯಲ್ಲಿ ಹೇಗೆ ಭಾಗವಹಿಸಿದಿರೀ ಎಂದು ಆಕ್ರೋಶ ವ್ಯಕ್ತಪಸಿಡಿದ್ದಾರೆ.

ವಿಜಯಲಕ್ಷ್ಮಿ ಗೆಳತಿಯ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಗೆಳತಿಯ ಬರ್ತ್‌ಡೇಯಲ್ಲಿ ಕೇಕ್ ಮಾಡಿರುವ ಫೋಟೋಗಳನ್ನು ಅವರೇ ಹಂಚಿಕೊಂಡಿದ್ದಾರೆ. ಅಂದ್ಹಾಗೆ, ಶ್ರುತಿ ರಮೇಶ್ ಕುಮಾರ್ ಎಂಬ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿಜಯಲಕ್ಷ್ಮಿ ಇರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಫೋಟೋದಲ್ಲಿ ವಿಜಯಲಕ್ಷ್ಮಿ ಶುಭಕೋರಿರುವ ಫೋಟೋಗಳು ಕೂಡ ಇವೆ.

Vijayalakshmi Darshan Faces Backlash After Party Photos Surface While Husband Darshan Is In Jail

ಮೇಲ್ನೋಟಕ್ಕೆ ಶ್ರುತಿ ರಮೇಶ್ ಕುಮಾರ್ ಉದ್ಯಮಿಯಂತೆ ಕಾಣುತ್ತಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿಯವರೊಂದಿಗೆ ಶ್ರುತಿ ರಮೇಶ್ ಕುಮಾರ್ ಉತ್ತಮ ಬಾಂಧವ್ಯವಿಟ್ಟುಕೊಂಡಿದ್ದು, ಇತ್ತೀಚೆಗೆ ನಡೆದ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವಿಜಯಲಕ್ಷ್ಮಿ ಬಗ್ಗೆ ಚರ್ಚೆ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ವಿಜಯಲಕ್ಷ್ಮಿ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾಗುವ ಅಗತ್ಯವಿತ್ತೇ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನೂ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ತಮ್ಮ ಗೆಳತಿಗೆ ಕೇಕ್ ತಿನ್ನಿಸುತ್ತಿರುವ ಫೋಟೋಗಳನ್ನು ವೈರಲ್ ಆಗುತ್ತಿವೆ. ಆ ಫೋಟೋಗಳನ್ನು ಗೆಳತಿ ಶ್ರುತಿ ರಮೇಶ್ ಕುಮಾರ್ ಹಂಚಿಕೊಂಡಿದ್ದು, "ವಿಜಯಲಕ್ಮಿ ನೀವು ಹೃದಯವಂತರು. ನಿಮಗೆ ಹತ್ತಿರವಾಗಿದ್ದರು ಯಾವಾಗಲೂ ಖುಷಿಯಾಗಿ ಇರುವಂತೆ ಬಯಸುತ್ತೀರ. ನಾವು ನಮ್ಮ ಹಾದಿಯನ್ನು ದಾಟಿ ಒಳ್ಳೆಯ ಸ್ನೇಹಿತರಾಗಿದ್ದಕ್ಕೆ ಖುಷಿಯಾಗಿದ್ದೇನೆ. ನನ್ನ ಈ ದಿನವನ್ನು ವಿಶೇಷವಾಗಿಸುವುದಕ್ಕೆ ದೂರದಿಂದ ಬಂದು ವಿಶ್ ಮಾಡಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ನೆಟ್ಟಿಗರು ಗರಂ

ಬರ್ತಡೆ ಪಾರ್ಟಿ ಫೋಟೋಗಳು ವೈರಲ್ ಆಗುತ್ತಿದ್ದಂತೆ ವಿಜಯಲಕ್ಷ್ಮಿ ಬಗ್ಗೆ ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಈ ಪಾರ್ಟಿ ಬೇಕಿತ್ತಾ?, ದರ್ಶನ್ ಜೈಲಿನಲ್ಲಿ ವಿಲ ವಿಲ.. ಇತ್ತ ವಿಜಯಲಕ್ಷ್ಮಿ ಪಾರ್ಟಿ, ಪ್ರಭಾವಿ ರಾಜಕಾರಣಿ ಸಂಬಂಧಿ ಜೊತೆ ಪಾರ್ಟಿ ಅಂತೆಲ್ಲ ಕಾಮೆಂಟ್ ಮಾಡಲಾಗುತ್ತಿದೆ. ಅಸಲಿಗೆ ಈ ಫೋಟೋ ಬಗ್ಗೆ ಇನ್ನಷ್ಟು ಸ್ಪಷ್ಟತೆ ಸಿಗಬೇಕಿದೆ. ಪಾರ್ಟಿ ನಡೆದಿದ್ದು ಯಾವಾಗ? ಇತ್ತೀಚೆಗೆ ತೆಗೆದ ಫೋಟೋಗಳಾ? ಶ್ರುತಿ ರಮೇಶ್ ಕುಮಾರ್ ಎಂಬುವವರ ಖಾತೆಯ ಒರಿಜಿನಲ್ ಅಥವಾ ಫೇಕಾ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳಿಗೆ ಕ್ಲಾರಿಟಿ ಸಿಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+