ವರುಣ: ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ವಿ. ಸೋಮಣ್ಣ ಗಳಿಸಿರುವ ಆಸ್ತಿ ಎಷ್ಟು?

ಮೈಸೂರು, ಏಪ್ರಿಲ್‌ 18: ವರುಣ ಹಾಗೂ ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ವಿ.ಸೋಮಣ್ಣ ಅವರು ಸೋಮವಾರ ಸಲ್ಲಿಸಿರುವ ನಾಮಪತ್ರದಲ್ಲಿ ತಮ್ಮ ಹಾಗೂ ಪತ್ನಿಯ ಹೆಸರಿನಲ್ಲಿ ಒಟ್ಟು 31.61 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ.

ನಾನಾ ಬ್ಯಾಂಕುಗಳಲ್ಲಿ 340 ಕೋಟಿ ರೂ. ಠೇವಣಿ ಇಟ್ಟಿದ್ದಾರೆ. ನಗದು 14 ಲಕ್ಷ ರೂ. ಇದ್ದು, 10.35 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಕಳೆದ ತಿಂಗಳಷ್ಟೇ 31.77 ಲಕ್ಷ ರೂ. ಮೌಲ್ಯದ ಇನ್ನೊವಾ ಕಾರು ಖರೀದಿಸಿದ್ದು, 2008ರ ಮಾಡೆಲ್‌ನ ಕ್ವಾಲಿಸ್ ವಾಹನದ ಒಡೆಯರಾಗಿದ್ದಾರೆ. ಇದಲ್ಲದೆ ತಮ್ಮ ಹಾಗೂ ಪತ್ನಿ ಹೆಸರಿನಲ್ಲಿ 7 ಕೋಟಿ ರೂಪಾಯಿಗೂ ಅಧಿಕ ಸಾಲ ಪಡೆಯಲಾಗಿದೆ ಎಂದು ಘೋಷಿಸಿದ್ದಾರೆ.

Varuna Constituency BjP Candidate V.Somanna Asset Details

ಸಚಿವ ವಿ.ಸೋಮಣ್ಣ ಆಸ್ತಿ ವಿವರ ಇಲ್ಲಿದೆ

1. ವಿ.ಸೋಮಣ್ಣ ಅವರು 4.01 ಲಕ್ಷ ರೂ. ನಗದು ಅವರ ಪತ್ನಿ ಜಿ.ಶೈಲಜಾ 9.99 ಲಕ್ಷ ರೂ. ನಗದು ಹೊಂದಿದ್ದಾರೆ.

2. ವಿ.ಸೋಮಣ್ಣ ದಂಪತಿ ಒಟ್ಟು 10.35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ.

3. ನಾನಾ ಬ್ಯಾಂಕ್ ಖಾತೆಗಳಲ್ಲಿರುವ ಠೇವಣಿ 3.10 ಕೋಟಿ ರೂ., ಪತ್ನಿ ಹೆಸರಿನಲ್ಲಿ 26.83 ಲಕ್ಷ ರೂ ಠೇವಣಿ ಇಟ್ಟಿದ್ದಾರೆ

4. ವಿ.ಸೋಮಣ್ಣ 3 ಕೋಟಿ ರೂ ಮೌಲ್ಯದ ಅಪಾರ್ಟ್‌ಮೆಂಟ್‌, ನಿವೇಶನ ಹೊಂದಿದ್ದಾರೆ.

5. ವಿ.ಸೋಮಣ್ಣ ಹೆಸರಿನಲ್ಲಿ 10 ಎಕರೆ 35 ಗುಂಟೆ ಕೃಷಿ ಜಮೀನು ಇದೆ.

6. ಸೋಮಣ್ಣ 2.90 ಕೋಟಿ ರೂ., ಪತ್ನಿ ಶೈಲಜಾ 4.53 ಕೋಟಿ ರೂ. ಸಾಲ ಹೊಂದಿದ್ದಾರೆ.

7. 2008ರ ಮಾಡೆಲ್‌ನ ಒಂದು ಕ್ವಾಲಿಸ್ ಕಾರು (71 ಸಾವಿರ ರೂ. ಮೌಲ್ಯದ್ದು)

8. ಸೋಮಣ್ಣ ಮಾರ್ಚ್‌ನಲ್ಲಷ್ಟೇ ಖರೀದಿಸಿದ ಇನ್ನೊವಾ ಕಾರು (31,77,417 ರೂ.ಮೌಲ್ಯದ್ದು)

Varuna Constituency BjP Candidate V.Somanna Asset Details

ವರುಣಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ವಿ.ಸೋಮಣ್ಣ ಸೋಮವಾರ (ಏಪ್ರಿಲ್‌ 17) ನಾಮಪತ್ರ ಸಲ್ಲಿಸಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಲು ಸಿದ್ಧರಾಗಿರುವ ವಿ.ಸೋಮಣ್ಣ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಸದ ಪ್ರತಾಪ್‌ ಸಿಂಹ ಸಾಥ್‌ ನೀಡಿದ್ದರು.

ನಾಮಪತ್ರ ಸಲ್ಲಿಕೆಗೂ ಮೊದಲು ವಿ.ಸೋಮಣ್ಣ ಮೈಸೂರಿನ ಇತಿಹಾಸ ಪ್ರಸಿದ್ಧ ಶ್ರೀ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇನ್ನು ವಿ.ಸೋಮಣ್ಣ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ಬಿಜೆಪಿ ಬೃಹತ್‌ ಸಾರ್ವಜನಿಕ ಸಮಾವೇಶ ನಡೆಸಲಾಯಿತು. ಬಿಜೆಪಿ ಸಮಾವೇಶದಲ್ಲಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್, ಸಿದ್ದರಾಜು, ಸದಾನಂದ, ಮಹದೇವ ಸ್ವಾಮಿ, ಸಿದ್ದಲಿಂಗಸ್ವಾಮಿ, ಮಹದೇವಯ್ಯ, ಶಿವಣ್ಣ, ನಾರಾಯಣ ಸ್ವಾಮಿ, ಪ್ರತಾಪ್ ಸಿಂಹ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ಹಾಗೂ ಸಾವಿರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+