‘ಸೋನಿಯಾ ಗಾಂಧಿ ನಮ್ಮ ದೇಶದವರಾ?’: ವಂದೇ ಮಾತರಂ ವಿವಾದಕ್ಕೆ ಹೆಚ್‌ ಡಿ ಕುಮಾರಸ್ವಾಮಿ ಕಿಡಿ

ಹಾಸನ: ಬಂಕಿಮಚಂದ್ರ ಚಟರ್ಜಿ ಅವರು ಬರೆದಿರುವ ವಂದೇ ಮಾತರಂ ಗೀತೆಗೆ ಎಲ್ಲರೂ ಗೌರವ ಕೊಡಬೇಕು ಎಂದು ಸಂಸತ್ತು ಒಪ್ಪಿಗೆ ನೀಡಿದೆ. ಆದರೆ ಕಾಂಗ್ರೆಸ್ಸಿಗೆ ಅದು ಇಷ್ಟವಾಗುತ್ತಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.

ಹಾಸನದ ಹೊಳೆನರಸೀಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಹೆಚ್‌ ಡಿ ಕುಮಾರಸ್ವಾಮಿ ಅವರು, ಈ ಗೀತೆಗೆ ಪತಿಯೊಬ್ಬರೂ ಗೌರವಸಬೇಕು ಎನ್ನೋದು ನಮ್ಮ ಅಭಿಪ್ರಾಯ. ಕಾಂಗ್ರೆಸ್ ನಾಯಕರು ಇದರಲ್ಲಿ ಸಣ್ಣತನ ತೋರಿಸುವ ಅಗತ್ಯ ಇಲ್ಲ. ಮಹಾತ್ಮಗಾಂಧಿ ಅವರು ಭಾಗಿಯಾಗಿ ಕಾಂಗ್ರೆಸ್ ಅಧಿವೇಶನದಲ್ಲಿ ಮತ್ತು ಮೊದಲ ಬಾರಿಗೆ ಈ ಗೀತೆಯನ್ನು ಹಾಡಲಾಗಿತ್ತು. ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಅವರೇ ಹಾಡಿದ್ದರು. ಹೀಗಿದ್ದರೂ ಕೂಡ ಕಾಂಗ್ರೆಸ್ ವಂದೇ ಮಾತರಂ ಗೀತೆಯನ್ನು ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

Vande Mataram HD Kumaraswamy hits out at Sonia Gandhi over reported objection to Vande Mataram

ವಂದೇ ಮಾತರಂ ಗಾಯನಕ್ಕೆ ಸ್ವತಃ ಸೋನಿಯಾ ಗಾಂಧಿ ಅವರೇ ಅಡ್ಡಿಪಡಿಸಿದರು ಎಂದು ಸುದ್ದಿಗಾರರು ಗಮನ ಸೆಳೆದಾಗ ಖಾರವಾಗಿ ಉತ್ತರಿಸಿದ ಸಚಿವರು; ಸೋನಿಯಾ ಗಾಂಧಿ ಅವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಸೋನಿಯಾ ಗಾಂಧಿ ಅವರೇನು ನಮ್ಮ ದೇಶದವರಾ? ಅವರು ಮದುವೆಯಾಗಿ ನಮ್ಮ ದೇಶಕ್ಕೆ ಬಂದರು ಅಷ್ಟೇ. ಅವರಲ್ಲಿ ಹರಿಯುತ್ತಿರುವುದು ಇಟಲಿಯ ರಕ್ತ ಅಲ್ಲವೇ? ಎಂದು ಹೇಳಿದರು. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಈಗಾಗಲೇ ತಕ್ಕಪಾಠ ಕಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಶಾಸ್ತಿ ಮಾಡಲಿದ್ದಾರೆ ಎಂದರು.

ಹನೂರಿನ ಶೂಟೌಟ್ ಪ್ರಕರಣದ ಬಗ್ಗೆ ಮಾತನಾಡಿ, ಈ ಘಟನೆಯ ಬಗ್ಗೆ ಸರಕಾರದಿಂದ ಒಂದು ಬುಲೆಟಿನ್ ಬಿಟ್ಟಿದ್ದಾರೆ. ಅಲ್ಲಿಯ ರೈತರು ಕುಟುಂಬಗಳು ಅವರ ನೋವು ವ್ಯಕ್ತಪಡಿಸಿದ್ದಾರೆ. ಒಂದೇ ಕುಟುಂಬದ ಮೂವರ ಸಾವಿನ ಬಗ್ಗೆ ಜನರ ಆಕ್ರೋಶ ಇರುವುದು ಸಹಜ. ಸರ್ಕಾರ ಅವರ ಉತ್ತಮ ಬದುಕಿಗೆ ದಾರಿ ಮಾಡಿದಾಗ ಇಂತಹ ಘಟನೆಗಳು ಆಗಲ್ಲ. ಇದನ್ನ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.

ಜಿಂಕೆ ಭೇಟೆಗೆ ಹೋಗಿದ್ದವರು ಎಂದು ಸರ್ಕಾರದಿಂದ ಮಾಹಿತಿ ನೀಡಲಾಗಿದೆ. ಸಿಎಂ ತನಿಖೆ ಮಾಡಿಸೊದಾಗಿ ಹೇಳಿದ್ದಾರೆ. ಪ್ರಶ್ನೆ ಇರುವುದು ನಮ್ಮ ಅರಣ್ಯ ಇಲಾಖೆ ಸಿಬ್ಬಂದಿ ಸಾಯುವ ರೀತಿ ಗುಂಡು ಹಾರಿಸಿದ ಬಗ್ಗೆ. ಇದು ತಪ್ಪು. ಕಾಲಿಗೊ ಅಥವಾ ಜೀವಕ್ಕೆ ಅಪಾಯ ಆಗದಂತೆ ಗುಂಡು ಹಾರಿಸಿದ್ದರೆ ಎಲ್ಲರೂ ಒಪ್ಪುತ್ತಿದ್ದರು ಎಂದರು.

ಬಿಡದಿ ಪಾದಯಾತ್ರೆ ಬಗ್ಗೆ ಕಾಂಗ್ರೆಸ್ ಪಕ್ಷ ನೀಡಿರುವ ಜಾಹೀರಾತುಗಳ ಬಗ್ಗೆ ಕಿಡಿ ಕಾರ್ಯಕ್ರಮ ಕೇಂದ್ರ ಸಚಿವರು, ಇಂತಹ ಇನ್ನೂ ಹತ್ತು ಜಾಹೀರಾತು ಕೊಟ್ಟರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ರೈತರು, ರೈತ ಮಹಿಳೆಯರು ನಾವು ಭೂಮಿ ಕೊಡಲ್ಲ ಎಂದು ಹೇಳಿದ್ದಾರೆ. ಐನೂರು ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಯಾಕೆ ದಬ್ಬಾಳಿಕೆ ಮಾಡಿ, ಕೆಲವು ರೌಡಿಗಳನ್ನು ಬಿಟ್ಟು ಹೆದರಿಸಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ನೀವು ಭೂಮಿ ಕೊಡದೆ ಹೋದರೆ ಗ್ರಾಂಟ್ ಭೂಮಿ ವಾಪಸ್ ಪಡೆಯುತ್ತೇವೆ ಎಂದು ದಬ್ಬಾಳಿಕೆ ಮಾಡಿ ಏನು ಸಾಧನೆ ಮಾಡಲಿಕ್ಕೆ ಹೊರಟಿದ್ದಾರೆ ಇವರು? ಈ ಯೋಜನೆ ನಿಮಗಷ್ಟೇ ಯಾಕೆ ಬೇಕಾಗಿದೆ? ಬೇರೆ ಕಡೆ ಜಾಗ ಇಲ್ಲವೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಪಕ್ಷದ ಸತ್ಯ ಶೋಧನಾ ಸಮಿತಿ ವರದಿಯನ್ನು ಇಡೀ ರಾಜ್ಯದ ಮುಂದೆ ಇಡಿ. ಕಾಗೋಡು ತಿಮ್ಮಪ್ಪ ಸಮಿತಿಯಲ್ಲಿ ನೀವು ಸದಸ್ಯರಾಗಿದ್ದಿರಿ ಅಲ್ಲವೇ? ಆ ಸಮಿತಿಯ ವರದಿಯಲ್ಲಿ ಏನು ಉಲ್ಲೇಖ ಮಾಡಿದ್ದಾರೆ ಎಂಬುದು ಈ ಮುಖ್ಯಮಂತ್ರಿಗೆ ಗೊತ್ತಿಲ್ಲವೇ?ಯಾವುದೇ ಕಾರಣಕ್ಕೂ ಟೌನ್‌ಶಿಪ್ ಬರಕೂಡದು ಎಂದು ಅದರಲಿ ವರದಿ ನೀಡಿದ್ದಾರೆ. ಆಗ ಏನು ಶಿಫಾರಸು ಮಾಡಿದ್ದೀರಿ, ಅದೇ ಅಂಶಗಳನ್ನು ಮುದ್ರಿಸಿ ಜಾಹೀರಾತು ಕೊಡಿ ನೋಡೋಣ. ಹಾಗೆ ಮಾಡಿದರೆ ನಮಗೂ ಸ್ವಲ್ಪ ಹಣ ಖರ್ಚು ಕಡಿಮೆ ಆಗುತ್ತದೆ ಎಂದು ಟಾಂಗ್ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+