Get Updates
Get notified of breaking news, exclusive insights, and must-see stories!

ಕನ್ನಡದಲ್ಲಿ ಟ್ವೀಟ್ ಮಾಡಿದ ಯುಎಸ್ ಕಾನ್ಸುಲೇಟ್ ಬೆಂಗಳೂರಿಗೆ ಬರುತ್ತಾ?

Recommended Video

      ಅಮೆರಿಕಾದ ರಾಯಭಾರಿಯನ್ನ ಭೇಟಿ ಮಾಡಿದ ಎಚ್ ಡಿ ಕೆ | ಕನ್ನಡದಲ್ಲಿ ಟ್ವೀಟ್ ಮಾಡಿದ ಯುಎಸ್ ಕಾನ್ಸುಲೇಟ್

      ಬೆಂಗಳೂರು, ಜೂನ್ 1: ಚೆನ್ನೈನಲ್ಲಿರುವ ಅಮೆರಿಕದ ಕಾನ್ಸುಲೇಟ್ ಕಚೇರಿಯು ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಪ್ರಾದೇಶಿಕ ಭಾಷಾ ಪ್ರೇಮವನ್ನು ಮೆರೆದಿದೆ.

      ಭಾರತದಲ್ಲಿನ ಅಮೆರಿಕದ ರಾಯಭಾರಿ ಕೆನ್ನೆತ್ ಜಸ್ಟರ್ ಅವರು ತಮ್ಮ ಬೆಂಗಳೂರು ಪ್ರವಾಸದ ವೇಳೆ ಗುರುವಾರ ನೂತನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅಲ್ಲದೆ, ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಸಹ ಭೇಟಿ ಮಾಡಿದ್ದರು.

      ಈ ಭೇಟಿಯ ಬಗ್ಗೆ ಚೆನ್ನೈನಲ್ಲಿರುವ ಅಮೆರಿಕದ ಕಾನ್ಸುಲೇಟ್ ಕಚೇರಿಯು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕನ್ನಡದಲ್ಲಿ ಟ್ವೀಟ್ ಮಾಡಿದೆ.

      ಕಾನ್ಸುಲೇಟ್ ಕನ್ನಡದಲ್ಲಿ ಟ್ವೀಟ್ ಮಾಡಿರುವುದಕ್ಕೆ ಟ್ವಿಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ಬಳಕೆ ಮಾಡಿರುವುದಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ.

      us consulate in chennai tweeted in kannada

      ಕೇಂದ್ರ ಸರ್ಕಾರದ ಸಚಿವರುಗಳು ಅಮೆರಿಕ ಕಾನ್ಸುಲೇಟ್‌ಅನ್ನು ನೋಡಿ ಕಲಿತುಕೊಳ್ಳಬೇಕು. ಕರ್ನಾಟಕಕ್ಕೆ ಸಂಬಂಧಿಸಿದ ಟ್ವೀಟ್‌ಗಳು ಕನ್ನಡದಲ್ಲಿಯೇ ಇರಬೇಕು. ಇದರಿಂದ ಅಧಿಕ ಜನರನ್ನು ತಲುಪಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

      ತಮ್ಮ ಸ್ವಂತ ಖಾತೆಯಿಂದಲೂ ಟ್ವೀಟ್ ಮಾಡಿರುವ ಕೆನ್ನೆತ್ ಜಸ್ಟರ್, ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಭೇಟಿಯಾಗಿದ್ದು ಒಂದು ಗೌರವ. ಭಾರತ-ಅಮೆರಿಕ ವ್ಯವಹಾರ ವಾತಾವರಣ ಮತ್ತು ಅವರ ಆಡಳಿತದ ದೃಷ್ಟಿಕೋನಗಳ ಕುರಿತು ಉತ್ತಮ ಚರ್ಚೆ ನಡೆಯಿತು ಎಂದು ಕೆನ್ನೆತ್ ಟ್ವೀಟ್ ಮಾಡಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+