• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಅನ್‌ಲಾಕ್; ಸಬ್ ರಿಜಿಸ್ಟರ್ ಕಚೇರಿಗಳು ಓಪನ್

|
Google Oneindia Kannada News

ಬೆಂಗಳೂರು, ಜೂನ್ 07; ಕರ್ನಾಟಕ ಸರ್ಕಾರ ಜೂನ್ 7ರಿಂದ 14ರ ತನಕ ಲಾಕ್‌ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಆದರೆ ಅನ್‌ಲಾಕ್ ಪ್ರಕ್ರಿಯೆಗೆ ಸಹ ಚಾಲನೆ ನೀಡಿದೆ.

ಸರ್ಕಾರ ಭಾನುವಾರ ಸಬ್ ರಿಜಿಸ್ಟರ್ ಕಚೇರಿಗಳನ್ನು ತೆರೆಯಲು ಅನುಮಿತಿ ನೀಡಿದೆ. ರಾಜ್ಯದಲ್ಲಿರುವ 243 ಸಬ್ ರಿಜಿಸ್ಟರ್ ಕಚೇರಿಗಳು ಸೋಮವಾರದಿಂದಲೇ ತೆರೆಯಲಿವೆ.

 ಲಾಕ್ ಡೌನ್ ಬೇಡ ಎಂದ ಸಚಿವರಿಗೆ ಡಾ.ಸುಧಾಕರ್ ಹೇಳಿದ್ದೇನು? ಲಾಕ್ ಡೌನ್ ಬೇಡ ಎಂದ ಸಚಿವರಿಗೆ ಡಾ.ಸುಧಾಕರ್ ಹೇಳಿದ್ದೇನು?

ಸರ್ಕಾರಕ್ಕೆ ಆದಾಯ ತಂದುಕೊಂಡುವ ಪ್ರಮುಖ ಮೂಲ ಮುದ್ರಾಂಕ ಹಾಗೂ ನೋಂದಣಿ ಶುಲ್ಕ. ಹೀಗಾಗಿ ಸಬ್ ರಿಜಿಸ್ಟರ್ ಕಚೇರಿಗಳನ್ನು ಆರಂಭಿಸಲು ಒಪ್ಪಿಗೆ ಕೊಡಲಾಗಿದೆ.

ಶಿವಮೊಗ್ಗ; ಕೋವಿಡ್ ಕೇರ್ ಸೆಂಟರ್‌ನಲ್ಲಿ ನರಕದ ಅನುಭವ ಶಿವಮೊಗ್ಗ; ಕೋವಿಡ್ ಕೇರ್ ಸೆಂಟರ್‌ನಲ್ಲಿ ನರಕದ ಅನುಭವ

ಈಗಾಗಲೇ ಸರ್ಕಾರ ರಫ್ತು ಆಧಾರಿತ ಕೈಗಾರಿಕೆಗಳು ಕಾರ್ಯ ನಿರ್ವಹಣೆ ಮಾಡಲು ಅವಕಾಶ ನೀಡಿತ್ತು. ಈಗ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುತ್ತಲೇ ಕಚೇರಿಗಳನ್ನು ಆರಂಭಿಸಲು ಒಪ್ಪಿಗೆ ನೀಡಿದೆ.

ಚಿಕ್ಕಮಗಳೂರು; ಕೋವಿಡ್ ಕೇರ್‌ ಸೆಂಟರ್‌ನಲ್ಲಿ ಅಧಿಕಾರಿಗಳ ಡ್ಯಾನ್ಸ್ ಚಿಕ್ಕಮಗಳೂರು; ಕೋವಿಡ್ ಕೇರ್‌ ಸೆಂಟರ್‌ನಲ್ಲಿ ಅಧಿಕಾರಿಗಳ ಡ್ಯಾನ್ಸ್

ಮೇ ತಿಂಗಳಿನಲ್ಲಿ ಕೊರೊನಾ ಕರ್ಫ್ಯೂ ಘೋಷಣೆ ಮಾಡಿದ ಬಳಿಕ ಸಬ್ ರಿಜಿಸ್ಟರ್ ಕಚೇರಿಗಳನ್ನು ಮುಚ್ಚಲಾಗಿತ್ತು. ಸರ್ಕಾರ ಲಾಕ್‌ಡೌನ್ ಅನ್ನು ಜೂನ್ ತನಕ ವಿಸ್ತರಣೆ ಮಾಡಿದ ಹಿನ್ನಲೆ ಕಚೇರಿಗೆ ಬೀಗ ಬಿದ್ದಿತ್ತು.

Recommended Video

   Indian Navyಗೆ ಈಗ 50 ಸಾವಿರ ಕೋಟಿ ವೆಚ್ಚದ Submarine | Oneindia Kannada

   ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಭಾನುವಾರದ ವರದಿಯಂತೆ 12,209 ಹೊಸ ಪ್ರಕರಣ ದಾಖಲಾಗಿದೆ. ಪಾಸಿಟಿವಿಟಿ ದರ ಶೇ 7.71ಕ್ಕೆ ಇಳಿಕೆಯಾಗಿದೆ.

   English summary
   Karnataka government extended lockdown till June 14. But allowed to open of district registrar and sub-registrar-offices in state.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X