ಓಲೈಕೆ, ಧರ್ಮದ ರಾಜಕಾರಣ ಮಾಡ್ತಾ ಇರೋದು ಕಾಂಗ್ರೆಸ್: ಶೋಭಾ ಕರಂದ್ಲಾಜೆ

ಇಡೀ ವ್ಯವಸ್ಥೆ ಹಾಳು ಮಾಡುವ ಕೆಲಸ ಸಿದ್ದರಾಮಯ್ಯ ಮಾಡಿದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಕೊಪ್ಪಳ,ಫೆಬ್ರವರಿ22: ಮಂಗಳೂರು, ಬೆಂಗಳೂರು, ಮೈಸೂರಿನ ಜೈಲಿನಲ್ಲಿದ್ದ ಪಿ.ಎಫ್.ಐ ಕಾರ್ಯಕರ್ತರನ್ನ ಸಿದ್ದರಾಮಯ್ಯ ಸರ್ಕಾರ ಬಿಡುಗಡೆ ಮಾಡ್ತು. ಮುಸ್ಲಿಂ ಮತಗಳ ಓಲೈಕೆಗೆ ಕಾಂಗ್ರೆಸ್ ರಾಜಕಾರಣ ಮಾಡ್ತಾ ಇದೆ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಈ ಕುರಿತು ಬುಧವಾರ ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾವು ಒಲೈಕೆಯಂಥ ರಾಜಕಾರಣ ಮಾಡುವುದಿಲ್ಲ. ಶಾದಿ ಭಾಗ್ಯ ಒಂದು ವರ್ಗಕ್ಕೆ ಮಾತ್ರ ಯಾಕೆ ಕೊಟ್ರು. ಓಲೈಕೆ, ಧರ್ಮದ ರಾಜಕಾರಣ ಮಾಡ್ತಾ ಇರೋದು ಕಾಂಗ್ರೆಸ್ ನವರದು ಎಂದು ಕಿಡಿಕಾರಿದ್ದಾರೆ.

ಅಹಿಂದ ಹೆಸರಿನಲ್ಲಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದರು.ಅವರ ಅಧಿಕಾರಕ್ಕೆ ಬಂದ ತಕ್ಷಣವೇ ಮಾಡಿದ್ದು, ಟಿಪ್ಪು ಜಯಂತಿ ಮಾಡಿದರು. ವ್ಯಕ್ತಿ ಪೂಜೆ ಮಾಡೋದು ಮುಸ್ಲಿಂ ಧರ್ಮದಲ್ಲಿ ಇಲ್ಲ. ಆದರೆ ಶಾಲಾ ಮಕ್ಕಳಲ್ಲಿ ಜಾತಿ ತಂದರು, ವೀರಶೈವ ಧರ್ಮ ಹೊಡೆಯೋಕೆ ನೋಡಿದರು.ಇಡೀ ವ್ಯವಸ್ಥೆ ಹಾಳು ಮಾಡುವ ಕೆಲಸ ಸಿದ್ದರಾಮಯ್ಯ ಮಾಡಿದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Union Minister Shobha Karandlaje Slams Siddaramaiah

ಟಿಪ್ಪುನ್ನು ಹೊಡೆದಂತೆ ಸಿದ್ದರಾಮಯ್ಯನವರನ್ನು ಹೊಡೆಯುವ ಅಶ್ವಥ್ ನಾರಾಯಣ ಹೇಳಿರುವ ವಿಚಾರವಾಗಿ ಮಾತನಾಡಿ ನೂರಕ್ಕೆ ನೂರು ತಪ್ಪು, ಆ ರೀತಿ ಯಾರೂ ಹೇಳಬಾರದು.ಪ್ರಜಾ ತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಅವಕಾಶ ಇದೆ. ಅವರವರ ಪಕ್ಷ ಅವರವರ ಸಿದ್ದಾಂತದ ಮೇಲೆ ಮಾತನಾಡುತ್ತೆ. ಸಿದ್ದಾಂತದ ಆಧಾರದ ಮೇಲೆ ಪಕ್ಷ ಕಟ್ಟಬೇಕು. ಅಶ್ವಥ್ ನಾರಾಯಣ ಮಾತನಾಡಿದ್ದು ತಪ್ಪು. ನಮ್ಮ ಪಕ್ಷದಲ್ಲಿ ಇಂತಹ ಸಿದ್ದಾಂತ ಇಲ್ಲ ಎಂದರು.

Union Minister Shobha Karandlaje Slams Siddaramaiah

ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರಕಾರವಿದೆ. ಅಭಿವೃದ್ಧಿ ಕೆಲಸಕ್ಕೆ ಡಬಲ್ ಇಂಜಿನ್ ಸರಕಾರ ಬರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಹಿಂದೆ ಭಾರತ ಪ್ರಧಾನಿಗಳು ವಿದೇಶಕ್ಕೆ ಹೋದರೆ ಸಾಲಕ್ಕಾಗಿ, ಭಿಕ್ಷೆಗಾಗಿ ಬರುತ್ತಿದ್ದಾರೆ ಎನ್ನುತ್ತಿದ್ದರು. ಆದರೆ ಈಗ ಭಾರತ ಪ್ರಬಲವಾಗಿದೆ. ಉಕ್ರೇನ್ ರಷ್ಯಾದ ಯುದ್ದದಲ್ಲಿ ಭಾರತದ ಪ್ರಧಾನಿ ಹೇಳಿದಂತಾಗಿದೆ. ಪ್ರಧಾನಿಯವರು ಈಗಲೂ 2024 ರ ಚುನಾವಣೆಯ ಬಗ್ಗೆ ಮಾತನಾಡುತ್ತಿಲ್ಲ.ಪ್ರಧಾನಿಯವರು ಅಭಿವೃದ್ದಿ ಗುರಿಯಾಗಿಟ್ಟುಕೊಂಡು ಮಾತನಾಡುತ್ತಾರೆ ಎಂದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+