ಕೆಜಿಎಫ್ ಬಾಬು ಮನೆ ಮೇಲೆ ಇಡಿ ದಾಳಿ: 8 ರಿಯಲ್ ಎಸ್ಟೇಟ್ ಕಂಪನಿಗಳ ದಾಖಲೆ ವಶ

ಬೆಂಗಳೂರು, ಮೇ 28: ರಾಜಕೀಯ ನಾಯಕನಾಗಲು ತೆರಳಿ ಜೇಬು ಖಾಲಿ ಮಾಡಿಕೊಂಡಿದ್ದ ಕೆಜಿಎಫ್ ಬಾಬು ಅಲಿಯಾಸ್ ಸ್ಕ್ರಾಪ್ ಬಾಬು ಅವರ ಮನೆ ಮೇಲೆ ಇಡಿ (ಜಾರಿ ನಿರ್ದೇಶನಾಲಯ) ದಾಳಿ ನಡೆದಿದೆ. ಈ ದಾಳಿ ಬೆನ್ನಲ್ಲೇ ಯೂಸಫ್ ಷರೀಪ್ ಅಲಿಯಾಸ್ ಕೆಜಿಎಫ್ ಬಾಬು ಶ್ರೀಮಂತಿಕೆಗೆ ನಾಂದಿ ಹಾಡಿದ ಏಳು ರಿಯಲ್ ಎಸ್ಟೇಟ್ ಕಂಪನಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕೇವಲ ಐದನೇ ತರಗತಿ ಓದಿರುವ ಯೂಸೆಫ್ ಷರೀಫ್ ಒಂದು ಕಾಲದಲ್ಲಿ ಕೇವಲ ಒಂದು ಬೀಡಿಗಾಗಿ ಒದ್ದಾಡುತ್ತಿದ್ದರು. ಚಿಕ್ಕ ಬಾಬು ಎಂದೇ ಹೆಸರು ಪಡೆದಿದ್ದ ಬಾಬುಗೆ ಅದೃಷ್ಟ ಖುಲಾಯಿಸಿದ್ದು ಕೆಜಿಎಫ್ ಗಣಿಯಲ್ಲಿ ಮಿಲ್ ಗಳನ್ನು (ಗುಜರಿ ವ್ಯಾಪಾರ) ಖರೀದಿಸಿ ಮಾರಾಟಕ್ಕೆ ಯತ್ನಿಸಿದ್ದರು. ಈ ವೇಳೆ ಆ ಮಿಲ್ ನೊಳಗೆ ಚಿನ್ನದ ಗಟ್ಟಿಗಳು ಸಿಕ್ಕಿದ್ದರಿಂದ ಯೂಸೆಫ್ ಷರೀಫ್ ಅದೃಷ್ಟವೇ ಬದಲಾಗಿತ್ತು ಎಂಬ ಮಾತಿದೆ. ನಾನು ಕೆಜಿಎಫ್ ನಿಂದಲೇ ಶ್ರೀಮಂತನಾಗಿದ್ದು ಎಂದು ಅನೇಕ ಸಲ ಬಾಬು ಹೇಳಿಕೊಂಡಿದ್ದಾರೆ.

Umra developers KGF Babu house raided by income tax department

ಕೆಜಿಎಫ್ ನಲ್ಲಿ ಚುನಾವಣೆಗೆ ನಿಲ್ಲಲು ತಯಾರಿ ನಡೆಸಿದ್ದ ಬಾಬು ಶ್ರೀಮಂತಿಕೆ ನೋಡಿ ಕಾಂಗ್ರೆಸ್ ಗಾಳ ಹಾಕಿತ್ತು. ಕಾಂಗ್ರೆಸ್ ಹಿರಿಯ ನಾಯಕರ ಸಂಪರ್ಕ ಸಿಕ್ಕ ಬಳಿಕ ಕಳೆದ ಡಿಸೆಂಬರ್ ನಲ್ಲಿ ನಡೆದ ಬೆಂಗಳೂರು ನಗರದ ಸ್ಥಳೀಯ ಸಂಸ್ಥೆ ಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಗೆ ಕೈ ಪಕ್ಷ ಪ್ರತಿನಿಧಿಸಿದ್ದರು. ಚುನಾವಣೆಯಲ್ಲಿ ಸೋಲುಂಡಿದ್ದರು. ಗುಜರಿ ಬಾಬು ಕೆಲವು ಅವಾಂತರದ ಪೋಟೋಗಳು ಇದೇ ವೇಳೆ ಬಿಡುಗಡೆಯಾಗಿ, ಕೆಜಿಎಫ್ ಬಾಬು ಕಣ್ಣೀರು ಹಾಕಿದ್ದರು.

Umra developers KGF Babu house raided by income tax department

ಯೂಸೆಫ್ ಷರೀಪ್ ಅಲಿಯಾಸ್ ಕೆಜಿಎಫ್ ಬಾಬು ಒಡೆತನದ 9 ರಿಯಲ್ ಎಸ್ಟೇಟ್ ಕಂಪನಿಗಳಿಗೆ. ಈ ಕಂಪನಿಗಳು ಬಹುತೇಕ ಸರ್ಕಾರದ ಜಮೀನನ್ನು ಅಕ್ಷನ್ ನಲ್ಲಿ ಖರೀದಿಸಿ ಬೇರೆಯವರಿಗೆ ಮಾರಾಟ ಮಾಡುವ ಕೆಲಸದಲ್ಲಿ ತೊಡಗಿವೆ. ಕೆಲ ಸರ್ಕಾರಿ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡಿರುವ ಬಾಬು ಬೆಂಗಳೂರಿನಲ್ಲಿ ಹಲವು ಎಕರೆ ಬಹಿರಂಗ ಹರಾಜಿನಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡಿ ಅದನ್ನು ನಾಲ್ಕೈದು ಪಟ್ಟು ದುಪ್ಪಟ್ಟು ದರಕ್ಕೆ ಮಾರಾಟ ಮಾಡಿರುವುದಕ್ಕೆ ಒನ್ ಇಂಡಿಯಾ ಕನ್ನಡಕ್ಕೆ ದಾಖಲೆಗಳು ಲಭ್ಯವಾಗಿವೆ.

Umra developers KGF Babu house raided by income tax department

ಬಾಬು ಒಡೆತನಕ್ಕೆ ಸೇರಿದ ಕಂಪನಿಗಳ ವಿವರ:

ಕೆಜಿಎಫ್ ಬಾಬು ಒಡೆತನಕ್ಕೆ ಸೇರಿದ ಟೆನೋ ಲ್ಯಾಂಡ್ ಡೆವಲಪರ್ಸ್ ಪ್ರೆ. ಲಿ. ಹಿಲ್ ಲ್ಯಾಂಡ್ ಬಿಲ್ಡ್ ಕಾನ್ ಪ್ರೆ. ಲಿಮಿಟೆಡ್, ಉಮ್ರಾ ಬ್ರದರ್ಸ್, ಉಮ್ರಾ ಡೆಲವಪರ್ಸ್, ಆಫನಾನ್ ಡೆವಲಪರ್ಸ್, ಹಿಲ್ ಲ್ಯಾಂಡ್ ಪ್ರಾಪರ್ಟಿಸ್, ಜುಮೇರಾ ಕನ್‌ಸ್ಟ್ರಕ್ಷನ್ ಪ್ರೆ. ಲಿ. ಜಾಮ್ ಜಾಮ್ ಬಿಲ್ಡರ್ಸ್, ಎಂವಿಆರ್ ಸೆಕ್ಯುರಿಟಿಸ್ ಪ್ರೆ. ಲಿ. ಸೇರಿದಂತೆ ಹಲವು ಕಂಪನಿಗಳ ಒಡೆಯನಾಗಿದ್ದಾನೆ ಕೆಜಿಎಫ್ ಬಾಬು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+