ಲಗ್ನ ಪತ್ರಿಕೇಲಿ (ಎಂಎ) ಅಂತ ಬರೆಸಿಕೊಳ್ಳೋಣ ಅಂತಿದ್ದೆ!

ಅಂತೂ ಇಂತೂ ಮೂರ್ನಾಕು ವರ್ಷ ಶ್ರಮಪಟ್ಟು ಒಂದು ಡಿಗ್ರಿ ಅಂತ ಮಾಡ್ಕಂಡಿದ್ದೆ. ಆದರೆ ಈ ಯುಜಿಸಿಯವರೇನೋ ನಾವ್ ಪಡ್ಕಂಡಿದ್ದು ಡಿಗ್ರಿನೇ ಅಲ್ಲಾ ಅಂಥ ಹೇಳಿದಾರಂತೆ ಏನ್ ಕತೆ ಇದು? ಎಂದು ಕೆಎಸ್ ಒಯುದಲ್ಲಿ ಎಂಎ ಮುಗಿಸಿದ್ದೇನೆ ಎಂದು ಮೊನ್ನೆ ಅಷ್ಟೇ ಕೊಚ್ಚಿಕೊಂಡಿದ್ದ ನಾಗರಾಜ ಹೇಳ್ತಾ ಇದ್ದ.

ಇದರ ಹಕೀಕತ್ತು ಒಂದೊಂದೆ ಆಗಿ ಹೊರಗೆ ಬಿತ್ತು. ಕಲಬುರಗಿ, ಕುವೆಂಪು ವಿವಿಗೆ ಹೋಲಿಸಿದ್ರೆ ನಾವ್ ನಕಲು ಮಾಡಿದ್ದು ಇಲ್ಲ. ಅದೇನೋ ವಿಶ್ವವಿದ್ಯಾಲಯದವರು ನಿಯಮ ಮುರಿದ್ದಾರಂತೆ, ನಮಗೇನು ಗೊತ್ತು ನಾವ್ ಫೀಸು ಕಟ್ಟಿ ಡಿಗ್ರಿ ಮಾಡ್ಕಂಡಿದ್ದೇವೆ. ಈ ಬಾರಿ ಲಗ್ನ ಪತ್ರಿಕೆಲೂ ಪಕ್ಕಕ್ಕೆ ದೊಡ್ಡದಾಗಿ ಎಂಎ ಅಂಥ ಪ್ರಿಂಟ್ ಹಾಕಿಸಬೇಕು ಅಂಥ ಮಾಡಿದ್ದೆ? ಹಾಗಾದರೆ ಏನ್ ಮಾಡಣ? ನಾಗರಾಜನ ಪ್ರಶ್ನೆ ಉತ್ತರ ಕೋಡೋರು ಯಾರೂ ಇರ್ಲಿಲ್ಲ. ಅವನ ಬಡಬಡಿಕೆ ಹಾಗೆ ಮುಂದಯವರಿದಿತ್ತು.[ಮಾನ್ಯತೆ ರದ್ದು : ಏಕೆ, ಏನು, ಮುಂದೇನು?]

ksou

ನಾನು ಎರಡು ವರ್ಷ ಪರೀಕ್ಷೆ ಬರೆದಿದ್ದೇನೆ. ಎಲ್ಲೂ ಅಕ್ರಮ ಆದಂಗೆ ಕಂಡಿಲ್ಲ. ಪರೀಕ್ಷೆ ಸಹ ಸರಿಯಾಗೇ ಮಾಡಿದ್ದಾರೆ. ಹಾಗಾದರೆ ವಿವಿಯವರು ಮುರಿದ ನಿಯಮಗಳೇನು? ಎಂಬುದನ್ನು ಯುಜಿಸಿ ಸ್ಪಷ್ಟವಾಗಿ ಹೇಳ್ಬೇಕಲ್ಲ? ಅದನ್ನು ಬಿಟ್ಟು ಎರಡು ವರ್ಷದ ಡಿಗ್ರಿಗೆ ಕೊಡಲಿ ಹಾಕ್ಬುಟ್ರೇ? ನಮ್ಮಂಥವರೂ ಏನು ಮಾಡಬೇಕು? ಯುಜಿಸಿಯವರು ನಮ್ಮ ಫೀಸು ವಾಪಸ್ ಕೊಡ್ತಾರಾ?

ಅದು ಕಳೆದ ವರ್ಷದ ಕೊನೆ ಪರೀಕ್ಷೆ. ನಾನು ಒಂದು ಗಂಟೆ ತಡವಾಗಿ ಹೋಗಿದ್ದೆ. ಹೆಂಗೂ ಮುಕ್ತ ವಿವಿ ತಕಂತಾರೆ ಬಿಡು ಎಂಬ ಹುಚ್ಚು ವಿಶ್ವಾಸ ನನಗೆ ಭಂಡಧೈರ್ಯ ತಂದಿಕೊಟ್ಟಿತ್ತು. ಆದ್ರೆ ಮೇಲ್ವಿಚಾರಕರು ಒಳಕ್ಕೆ ಬಿಟ್ಕಳ್ಳಲಿಲ್ಲ. ಹೀಗಿದ್ದಾಗ ಇವರ ವ್ಯವಸ್ಥೆ ಬಗ್ಗೆ ದೋಷ ಹುಡುಕುವುದು ಸರಿ ಅಲ್ಲಾ ಬಿಡಿ.[ಹೊರ ರಾಜ್ಯಗಳಲ್ಲಿ ಪ್ರವೇಶಕ್ಕೆ ಅವಕಾಶವಿಲ್ಲ]

ಅದೇನೋ ರಾಜ್ಯದ ಹೊರಗೆ ಅಡ್ಮಿಷನ್ ತಗಂಡವ್ರಂತೆ. ಅದು ನಿಯಮ ಬಾಹಿರ ಆಗಿದ್ರೆ ವಿವಿದಲ್ಲವಾ ತಪ್ಪು! ನಮ್ಮ ಡಿಗ್ರಿ ಯಾಕ್ ಕಿತ್ಗತೀರಾ? ನಾವು ಸರಿಯಾಗಿ ಓದಿಯೇ ಬರೆದಿದ್ದು ಎನ್ನುವಾಗ ನಾಗರಾಜ ಸ್ಚಲ್ಪ ಆಕ್ರೋಶಭರಿತನಾಗೇ ಇದ್ದ.

ಈ ವರ್ಸ್ ಅತ್ಲಾಗೆ ಒಂದು ಮದುವೆ ಮಾಡ್ಕಳ್ಳಣಾ ಅಂತಿದ್ದೆ. ಎಂಎ ಡಿಗ್ರಿ ಆದ ಖುಸಿನೂ ಇತ್ತು. ಥತ್ತೇರಕಿ,,, ಈ ಯುಜಿಸಿಯವರೂ ಎಲ್ಲಾ ಕಿತ್ಗಂಬುಟ್ರು. ನಾನು ಓದಿದ್ದು ಹೌದು , ಪರೀಕ್ಷೆ ಬರೆದಿದ್ದು ಹೌದು, ಡಿಗ್ರಿ ಪಡ್ಕಂಡಿದ್ದು ಹೌದು.. ಆದ್ರೆ ಅದಕ್ಕೆ ಜೀವ ಇಲ್ಲ. ಪ್ರಮಾಣಪತ್ರ ತಗಂಡು ಏನು ಮಂಡಕ್ಕಿ ಕಟ್ಲಾ?[ಇಗೋ ಬಂತು, ಬೆಂಗಳೂರಿನ ಟ್ರಾಫಿಕ್ ಗೆ ಪರಿಹಾರ]

ನನ್ನ ಡಿಗ್ರಿಗೆ ನಾನೇನು ಸರ್ಕಾರಿ ಕೆಲಸ ಕೇಳ್ತಾ ಇಲ್ಲ. ಅದು ನನಗೆ ಬೇಕೂ ಆಗಿಲ್ಲ. ಮನೆ ಕಡೆ ದನ ಮೇಸ್ಕಂಡೆ ಇರ್ತಿನಿ. ಇನ್ನು ಮುಂದೆ ಅಡ್ಮಿಸನ್ ತಕಬಡಿ ಅಂದ್ರೆ ಒಪ್ಗಬದಿತ್ತು. ಅದನ್ನು ಬಿಟ್ಟು ಡಿಗ್ರಿ ಪಡಕಂಡವರದ್ದು ರದ್ದು ಅಂದ್ರೆ!

ಯುಜಿಸಿ, ಕೆಎಸ್ ಒಯು ಕಿತ್ತಾಟದಲ್ಲಿ ನಮ್ಮ ಡಿಗ್ರಿ ಕಿತ್ಗಳ್ಳಾದು ಸರಿ ಇಲ್ಲಾ ಬುಡಿ. ಈಗೇನೋ ಕೋರ್ಟ್ ಗೆ ಹೋಗವ್ರಂತೆ. ಅದರ ತೀರ್ಪು ಹೊರ್ ಬೀಳದು ಯಾವಾಗೇನೋ? ಅಲ್ಲಿವರೆಗೆ ನಾನು ಮದುವೆ ಮಾಡ್ಕಳ್ದೇ ಇರಾಕ್ ಆಯ್ತದಾ? ಇವರ್ ಏನೇ ಅಂದ್ಕಳ್ಲಿ. ನಾನ್ ಲಗ್ನ ಪತ್ರಿಕೆಯಲ್ಲಿ ಎಂಎ ಅಂಥ ಹಾಕ್ಸ ಮಗನೆಯಾ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+