ಉಡುಪಿ ಬಿಜೆಪಿ ವೆಬ್‌ಸೈಟ್‌ನಲ್ಲಿ ಪಾಕ್‌ಗೆ ಜಿಂದಾಬಾದ್!
ಉಡುಪಿ, ಡಿ. 12 : ಉಡುಪಿ ಜಿಲ್ಲಾ ಬಿಜೆಪಿ ಘಟಕದ ವೆಬ್‌ಸೈಟ್‌ನಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆಯನ್ನು ಹಾಕಲಾಗಿದ್ದು, ಭಾರತ ದೇಶವನ್ನು ಟೀಕಿಸಿ ಪಾಕಿಸ್ತಾನವನ್ನು ಹೊಗಳಿ ಅವಹೇಳನಕಾರಿ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಲಾಗಿದೆ. ಇದು ಹ್ಯಾಕರ್‌ಗಳ ಕೈವಾಡವಾಗಿದೆ.
www.bjpudupi.com ವೆಬ್‌ಸೈಟ್ ಹ್ಯಾಕ್ ಆಗಿದೆ. ಬಿಜೆಪಿ ವೆಬ್‌ಸೈಟಿಗೆ ಭೇಟಿ ನೀಡಿದರೆ, 'ಪಾಕಿಸ್ತಾನ್ ಜಿಂದಾಬಾದ್' ಎನ್ನುವ ಹೆಡ್ಡಿಂಗ್ ಜನರನ್ನು ಸ್ವಾಗತಿಸುತ್ತಿದೆ. ಪಾಕಿಸ್ತಾನಿ ಸೇನೆಯವರೊಂದಿಗೆ ಭಾರತೀಯ ಸೈನಿಕ ಕೈಕುಲುಕುವಾಗ ಬೆದರುವಂತಹ ಚಿತ್ರವನ್ನು ಅಪ್‌ಲೋಡ್ ಮಾಡಲಾಗಿದೆ.

ಪಕ್ಷದ ಜಿಲ್ಲಾ ಘಟಕ ವೆಬ್‌ಸೈಟ್ ಹ್ಯಾಕ್ ಆಗಿರುವುದನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಹ್ಯಾಕ್ ಮಾಡಿದವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದ್ದಾರೆ. [ಬ್ಯಾಂಕ್ ಖಾತೆಗೆ ಖನ್ನ, ಒಂದೂವರೆ ಕೋಟಿ ಲೂಟಿ]
ವೆಬ್‌ಸೈಟ್‌ನಲ್ಲೇನಿದೆ : ಸದ್ಯ ನೀವು ಉಡುಪಿ ಜಿಲ್ಲಾ ಬಿಜೆಪಿ ಘಟಕದ ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಅಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆ ಕಾಣುತ್ತದೆ. ಒಂದು ಫೋಟೋವನ್ನು ಅಪ್‌ಲೋಡ್ ಮಾಡಲಾಗಿದ್ದು, ಚಿತ್ರದ ಕೆಳಗಡೆ ಪಾಕಿಸ್ತಾನಕ್ಕೆ ಸಂಬಂಧಪಟ್ಟ ವಿಚಾರಗಳನ್ನು ತುಂಬಲಾಗಿದೆ. [ಮಂಗಳೂರಿನಲ್ಲಿ ಸ್ರೈಬರ್ ಕ್ರೈಂ ಪೊಲೀಸ್ ಠಾಣೆ]
ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರೆ ಗಣ್ಯರನ್ನು ಅವಹೇಳನ ಮಾಡಲಾಗಿದೆ. ಭಾರತ ದೇಶಕ್ಕೆ ಬೆದರಿಕೆ ನೀಡುವ ಸಂದೇಶವನ್ನು ಹಾಕಲಾಗಿದೆ. ದೇಶದ ಸಿಬಿಐ ಮೊದಲಾದ ಏಜೆನ್ಸಿಗಳನ್ನು ಟೀಕಿಸಲಾಗಿದ್ದು, ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್‌ಐ ವಿಶ್ವದಲ್ಲಿಯೇ ನಂ. 1 ಎಂದು ಹೊಗಳಲಾಗಿದೆ.












Click it and Unblock the Notifications