ಟ್ವೀಟ್ ಬಾಣ; ಗೌಡರಿಂದ ಡಿಸಿಎಂ, ಪರಮೇಶ್ವರರಿಂದ ಸಿಎಂ

ಬೆಂಗಳೂರು, ನವೆಂಬರ್ 07 : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಡುವೆ ಟ್ವಿಟರ್ ವಾರ್ ನಡೆಯುತ್ತಿದೆ. ನಳಿನ್ ರಾಜ್ಯಾಧ್ಯಕ್ಷರಾದ ದಿನದಿಂದ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಿದ್ದಾರೆ.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಡಿಯೋ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ನಳಿನ್ ಕುಮಾರ್ ಕಟೀಲ್ ನಡುವೆ ಟ್ವೀಟ್ ವಾರ್ ಆರಂಭವಾಗಿತ್ತು. ಅದು ಮುಂದುವರೆದಿದ್ದು, ಸಿದ್ದರಾಮಯ್ಯ ಸಿಎಂ ಆಗಿದ್ದು ಹೇಗೆ? ಎಂದು ಕಟೀಲ್ ಟ್ವೀಟ್ ಮಾಡಿದ್ದಾರೆ.

"ಐದು ವರ್ಷಗಳ ಕಾಲ ಸಿಎಂಯಾಗಿದ್ದು ಸ್ವಕ್ಷೇತ್ರದಲ್ಲಿ ಸೋಲುತ್ತಾರೆ ಎಂದರೆ ಅವರ ಅರ್ಹತೆ ಆರಿವಾಗುತ್ತದೆ" ಎಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋತಿದ್ದನ್ನು ನಳಿನ್ ಕುಮಾರ್ ಪ್ರಸ್ತಾಪಿಸಿದ್ದಾರೆ.

ಯಡಿಯೂರಪ್ಪ ಆಡಿಯೋ ವಿಚಾರ ಪ್ರಸ್ತಾಪಿಸಿದ್ದ ಸಿದ್ದರಾಮಯ್ಯ, "ಜೋಕ್ ಮಾಡೋರನ್ನ '......' ಎನ್ನುತ್ತಾರೆ ಗೊತ್ತಾ?" ಎಂದು ನಳಿನ್ ಕುಮಾರ್ ಕಟೀಲ್‌ರನ್ನು ಪ್ರಶ್ನೆ ಮಾಡಿದ್ದರು.

ನಳಿನ್ ಕುಮಾರ್ ಟ್ವೀಟ್

ನಳಿನ್ ಕುಮಾರ್ ಟ್ವೀಟ್

"ಯಾವುದೇ ಪಕ್ಷಕ್ಕೆ ಎಂದೂ ದುಡಿಯದೆ ಅಧಿಕಾರ ಅನುಭವಿಸಿದ ಶ್ರೀ @siddaramaiah ಆಂತಹ ಅವಕಾಶವಾದಿ ರಾಜಕಾರಣಿ ಮತ್ತೊಬ್ಬರಿಲ್ಲ. ದೇವೇಗೌಡರ ದುಡಿಮೆಯಿಂದ ಡಿಸಿಎಂ ಆದ ಸಿದ್ದರಾಮಯ್ಯ, @DrParameshwara ರವರ ತಪಸ್ಸಿನಿಂದ ಸಿಎಂ ಆದರು. ಐದು ವರ್ಷಗಳ ಕಾಲ ಸಿಎಂಯಾಗಿದ್ದು ಸ್ವಕ್ಷೇತ್ರದಲ್ಲಿ ಸೋಲುತ್ತಾರೆ ಎಂದರೆ ಅವರ ಅರ್ಹತೆ ಆರಿವಾಗುತ್ತದೆ" ಎಂದು ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.

ಜೋಕ್ ಮಾಡೋರು

ಜೋಕ್ ಮಾಡೋರು

ಸಿದ್ದರಾಮಯ್ಯ ಅವರು ನಳಿನ್ ಕುಮಾರ್ ವಿರುದ್ಧ, "ಮುಖ್ಯಮಂತ್ರಿ @BSYBJP ಆಡಿಯೋ ನನ್ನಿಂದ ರಿಲೀಸ್ ಆಗಿದೆಯೆಂದು ಬಿಜೆಪಿ ರಾಜ್ಯಾಧ್ಯಕ್ಷ @nalinkateel ಜೋಕ್ ಮಾಡಿದ್ದಾರೆ. ಬಿಜೆಪಿ ಕೋರ್ ಕಮಿಟಿ ಸಭೆಗೆ ವಿರೋಧ ಪಕ್ಷದ ನಾಯಕನನ್ನು ಆಹ್ವಾನಿಸಿದ್ದೀರಾ?. ಜೋಕ್ ಮಾಡೋರನ್ನ '......' ಎನ್ನುತ್ತಾರೆ ಗೊತ್ತಾ?" ಎಂದು ಪ್ರಶ್ನೆ ಮಾಡಿದ್ದಾರೆ. ಬಿಜೆಪಿಯ ಹಲವು ನಾಯಕರು ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೆ" ಎಂದು ಟ್ವೀಟ್ ಮಾಡಿದ್ದರು.

ನಿಮ್ಮನ್ನು ಸಭೆಗೆ ಆಹ್ವಾನಿಸುವುದುಂಟೆ

ನಿಮ್ಮನ್ನು ಸಭೆಗೆ ಆಹ್ವಾನಿಸುವುದುಂಟೆ

ಎಲ್ಲಾ ಕಮಿಟಿಗಳಲ್ಲಿದ್ದು ಕಾಂಗ್ರೆಸ್ ಅನ್ನು ನಿರ್ನಾಮ ಮಾಡುತ್ತಿರುವ ನಿಮ್ಮನ್ನು ಬಿಜೆಪಿ ಕೋರ್ ಕಮಿಟಿ ಸಭೆಗೆ ಆಹ್ವಾನಿಸುವುದುಂಟೆ? ಎಂದು ನಳಿನ್ ಪ್ರಶ್ನೆ ಮಾಡಿದ್ದಾರೆ.

ಪ್ರಧಾನಿಗಳಿಗೆ ಕೆಲಸ ಏನು?

ಪ್ರಧಾನಿಗಳಿಗೆ ಕೆಲಸ ಏನು?

ಸಿಬಿಐ, ಐಟಿ, ಇಡಿ ಮೇಲೆ ನನ್ನ ನಿಯಂತ್ರಣ ಇರುವುದು ನಿಜವೇ ಆಗಿದ್ದರೆ 56 ಇಂಚಿನ ಪ್ರಧಾನಿ ನರೇಂದ್ರ ಮೋದಿಯವರಿಗೇನು ಕೆಲಸ? ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+