Bengaluru 2nd Airport: 2 ನೇ ವಿಮಾನ ನಿಲ್ದಾಣವಾದರಷ್ಟೆ ತುಮಕೂರು ಕ್ರಿಕೆಟ್ ಸ್ಟೇಡಿಯಂ ಕನಸು ನನಸು
ತುಮಕೂರು, ಮಾರ್ಚ್ 18: ಬೆಂಗಳೂರಲ್ಲಿ ಎರಡನೇ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ನಿರ್ಮಾಣದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಸಹ ಸಂಸತ್‌ನಲ್ಲೂ ಈ ಬಗ್ಗೆ ಪ್ರಸ್ತಾಪಿಸುವ ಮೂಲಕ ಗಮನ ಸೆಳೆದಿದ್ದಾರೆ. ಸಸದ್ಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಭಾರೀ ಪ್ರಮಾಣದಲ್ಲಿ ಹೆಚ್ಚಿದ್ದು, ವಿಮಾನಗಳ ಹಾರಾಟದ ನಿರ್ವಹಣೆಯೇ ಸವಾಲಾಗಿದೆ. ಇತ್ತ ಹೊಸ ಏರ್‌ಪೋರ್ಟ್ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡು ನಡುವೆ ಜಟಾಪಟಿ ಏರ್ಪಟ್ಟಿಟ್ಟು, ಇತ್ತ ರಾಜ್ಯ ಸರ್ಕಾರ ಮೂರು ಸ್ಥಳವನ್ನ ಫೈನಲ್ ಮಾಡಿದೆ.
ಬೆಂಗಳೂರಲ್ಲಿ ಎರಡನೇ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ನಿರ್ಮಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಎರಡನೇ ಏರ್‌ಪೋರ್ಟ್ ಅನ್ನು ಎಲ್ಲಿ ನಿರ್ಮಿಸಬೇಕು ಎಂಬುದು ಇನ್ನು ಫೈನಲ್ ಆಗಿಲ್ಲವಾದರೂ ಮೂರು ಸ್ಥಳಗಳ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ತುಮಕೂರು ಜಿಲ್ಲೆಯ ಶಿರಾದಲ್ಲಿ ಎರಡನೇ ವಿಮಾನ ನಿಲ್ದಾಣವಾಗಬೇಕು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹಾಗೂ ಶಾಸಕರಾದ ಟಿ ಬಿ ಜಯಚಂದ್ರ ಅವರು ಬೇಡಿಕೆ ಇಟ್ಟಿದ್ದಾರೆ.

ತುಮಕೂರು ಭಾಗದಲ್ಲಿ ಎರಡನೇ ವಿಮಾನ ನಿಲ್ದಾಣವಾದರೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಲಿದೆ ಎಂದು ಸ್ಥಳೀಯ ಜನಪ್ರತಿನಿಧಿಗಳು ಬೇಡಿಕೆ ಇಟ್ಟಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾದರೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳು ನಡೆಸಲು ಪೂರಕ ವಾತಾವರಣವೂ ಸೃಷ್ಠಿಯಾಗಬೇಕು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸ್ತಾಪ ಫಲಪ್ರದವಾದರೆ ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳನ್ನು ಶೀಘ್ರ ನಿರೀಕ್ಷಿಸಬಹುದು ಎಂದು ಹೇಳಲಾಗಿದೆ.
ತಾಲೂಕಿನ ಸೋರೆಕುಂಟೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ವಿಳಂಬವಾಗುತ್ತಿದೆ. ನಿರೀಕ್ಷಿಸಿದಂತೆ ಎರಡು ವರ್ಷದಲ್ಲಿ ಪೂರ್ಣಗೊಳ್ಳುವುದು ಕಷ್ಟ. ಇನ್ನೂ ಕ್ರಿಕೆಟ್ ಸ್ಟೇಡಿಯಂಗೆ 'ಬೌಂಡರಿ'ಯೇ ನಿಗದಿಯಾಗಿಲ್ಲ. 2024ರ ಡಿಸೆಂಬರ್ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಟೇಡಿಯಂಗೆ ಭೂಮಿಪೂಜೆ ನೆರವೇರಿಸುವ ಮೂಲಕ ತಮಕೂರು ಕ್ರಿಕೆಟಿಗರು, ಕ್ರಿಕೆಟ್ ಪ್ರೇಮಿಗಳ ಆರು ದಶಕದ ಕನಸು ಸಾಕಾರಕ್ಕೆ ಮುನ್ನುಡಿ ಬರೆದಿದ್ದರು. ಕೆಎಸ್‌ಸಿಎ ಎರಡು ವರ್ಷದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ವಿಶ್ವಾಸವೂ ವ್ಯಕ್ತವಾಗಿತ್ತು. ಆದರೆ ಇದೀಗ ನಾಲ್ಕು ತಿಂಗಳು ಕಳೆಯುತ್ತಾ ಬಂದರೂ ಇನ್ನೂ ಸಂಬಂಧಿಸಿದ ಪ್ರಕ್ರಿಯೆಯೇ ಚುರುಕುಗೊಂಡಿಲ್ಲ.
ಇನ್ನೂ ಸರ್ಕಾರ ಹಾಗೂ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ನಡುವೆ ಒಪ್ಪಂದ ಆಗಿದೆ. ಆದರೆ ಇನ್ನೂ ಕೆಐಎಡಿಬಿ ಸ್ಟೇಡಿಯಂನ ಬೌಂಡರಿಯನ್ನು ಗುರುತಿಸಿ, ಜಾಗವನ್ನು ಸಮತಟ್ಟು ಮಾಡಿಕೊಡಬೇಕಿದೆ. ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದು, ಪ್ರಕ್ರಿಯೆ ಹಂತದಲ್ಲಿದೆ. ಅಷ್ಟರೊಳಗೆ ಕೆಐಎಡಿಬಿ ತನ್ನ ಕೆಲಸ ಮುಗಿಸಿ ಕೊಡಬೇಕು. ಕ್ರಿಕೆಟ್ ಸ್ಟೇಡಿಯಂನ ವಿನ್ಯಾಸ ಇನ್ನೂ ಸಿದ್ಧವಾಗಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾದರೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳು ನಡೆಸಲು ಪೂರಕ ವಾತಾವರಣವೂ ಸೃಷ್ಠಿಯಾಗಬೇಕು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸ್ತಾಪ ಫಲಪ್ರದವಾದರೆ ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳನ್ನು ಶೀಘ್ರ ನಿರೀಕ್ಷಿಸಬಹುದು.












Click it and Unblock the Notifications