ನೈಋತ್ಯ ರೈಲ್ವೆ ವಲಯದಲ್ಲಿ ರೈಲುಗಳ ಸಮಯ ಪರಿಷ್ಕರಣೆ, ಯಾವ ರೈಲುಗಳ ಬದಲಾವಣೆ ತಿಳಿಯಿರಿ

ಬೆಂಗಳೂರು, ಅಕ್ಟೋಬರ್‌ 04: ನೈಋತ್ಯ ರೈಲ್ವೆ ವಿಭಾಗವು ತನ್ನ ವಲಯದಲ್ಲಿ ಸಂಚರಿಸುತ್ತಿರುವ 568 ರೈಲುಗಳ ಪೈಕಿ 314 ರೈಲುಗಳ ಸಮಯವನ್ನು ಅಕ್ಟೋಬರ್ 1 ರಿಂದ ಪರಿಷ್ಕರಿಸಲಾಗಿದೆ ಎಂದು ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ (ಅಡ್ಮಿನ್) ಕುಸುಮಾ ಹರಿಪ್ರಸಾದ್ ತಿಳಿಸಿದ್ದಾರೆ.

ಪ್ರತಿ ಅಕ್ಟೋಬರ್‌ನಲ್ಲಿ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ. ಈಗ ಬೆಂಗಳೂರು ವಿಭಾಗವು ದೈನಂದಿನ, ಸಾಪ್ತಾಹಿಕ, ಎರಡು ವಾರಕ್ಕೊಮ್ಮೆ, ಮೂರು ವಾರಕ್ಕೊಮ್ಮೆ ಸೇರಿದಂತೆ 396 ರೈಲುಗಳನ್ನು ನಿರ್ವಹಿಸುತ್ತದೆ. ಇಲ್ಲಿ 292 ರೈಲುಗಳ ಸಮಯವನ್ನು ಪರಿಷ್ಕರಿಸಲಾಗಿದೆ. ವಿಭಾಗವು ನಿರ್ವಹಿಸುವ ದೈನಂದಿನ ಸರಾಸರಿ ರೈಲುಗಳು 264 ಆಗಿದ್ದು, ಅದರಲ್ಲಿ 205 ಎಕ್ಸ್‌ಪ್ರೆಸ್ ಮತ್ತು 59 ಪ್ರಯಾಣಿಕ ರೈಲುಗಳಾಗಿವೆ. ರೈಲುಗಳ ವೇಗವನ್ನು ಸುಮಾರು 5 ನಿಮಿಷದಿಂದ 70 ನಿಮಿಷಗಳವರೆಗೆ ಹೆಚ್ಚಿಸಲಾಗಿದೆ. ಎರಡು ರೈಲುಗಳ ದ್ವಿಗುಣ ಮಾಡಲಾಗಿ ಮತ್ತು ಮೂರು ರೈಲು ಜೋಡಿಗಳನ್ನು ವಿಸ್ತರಿಸಲಾಗಿದೆ ಎಂದು ಅವರು ಹೇಳಿದರು.

Train Time Revision in South Western Railway Zone, Know which trains change

ನೈಋತ್ಯ ರೈಲ್ವೆ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಹಲವು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ರೈಲು ನಂಬರ್ 16219 ಚಾಮರಾಜನಗರ-ತಿರುಪತಿ ರೈಲಿನ ವೇಳಾಪಟ್ಟಿಯನ್ನು ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಬದಲಾವಣೆ ಮಾಡಲಾಗಿದೆ. ಬದಲಾದ ವೇಳಾಪಟ್ಟಿ ಅನ್ವಯ 30 ನಿಮಿಷ ಮೊದಲೇ ರೈಲು ತಿರುಪತಿ ನಿಲ್ದಾಣಕ್ಕೆ ತಲುಪುತ್ತದೆ.

ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸಲು ಹೊಸ ರೈಲುಗಳನ್ನು ಓಡಿಸಬೇಕು ಎಂಬ ಬೇಡಿಕೆ ಹಲವು ದಿನಗಳಿಂದಲೂ ಇದೆ. ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಮುರುಡೇಶ್ವರ ರೈಲನ್ನು ಕಾರವಾರ ತನಕ ವಿಸ್ತರಣೆ ಮಾಡಿ ಎಂದು ಈಗ ಬೇಡಿಕೆ ಇಡಲಾಗಿದೆ. ನೈಋತ್ಯ ರೈಲ್ವೆ ಬೆಂಗಳೂರು-ಚನ್ನಪಟ್ಟಣ ನಡುವೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಅನುಕೂಲ ಮಾಡಕೊಡಲು ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ.

ಅಕ್ಟೋಬರ್ 1ರಿಂದಲೇ ಜಾರಿಗೆ ಬರುವಂತೆ ಚನ್ನಪಟ್ಟಣ-ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ರೈಲು ಚನ್ನಪಟ್ಟಣದಿಂದ 17:15ಕ್ಕೆ ಹೊರಟು ಬೆಂಗಳೂರು ನಗರವನ್ನು 18:30ಕ್ಕೆ ತಲುಪಲಿದೆ. ಇಷ್ಟು ದಿನ ರೈಲು 16:50 ಗಂಟೆಗೆ ಚನ್ನಪಟ್ಟಣದಿಂದ ಹೊರಟು ಕೆಎಸ್ಆರ್‌ ಬೆಂಗಳೂರು ನಿಲ್ದಾಣಕ್ಕೆ 18:05ಕ್ಕೆ ತಲುಪುತ್ತಿತ್ತು. ಈ ರೈಲು ಮಾರ್ಗದಲ್ಲಿ ರಾಮನಗರ, ಕೆತೋಹಳ್ಳಿ ಹಾರ್ಟ್‌, ಬಿಡದಿ, ಹೆಜ್ಜಾಲ, ಕೆಂಗೇರಿ, ಜ್ಞಾನ ಭಾರತಿ ಹಾಲ್ಟ್, ನಾಯಂಡಹಳ್ಳಿ, ಕೃಷ್ಣದೇವರಾಯ ಹಾಲ್ಟ್‌ ನಿಲ್ದಾಣಗಳ ಮೂಲಕ ಕೆಎಸ್ಆರ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

ಮೈಸೂರು ನಂಜನಗೂಡು ಚಾಮರಾಜನಗರ ವಿಭಾಗದಲ್ಲಿ ಸಂಚರಿಸುವ 06233, 06300, 06299, 06234, 06275, 06276 ಮತ್ತು 06544 ಸಂಖ್ಯೆಯ ರೈಲುಗಳು ಅಕ್ಟೋಬರ್ 1, 2023 ರಿಂದ ವೇಳಾಪಟ್ಟಿ ಪರಿಷ್ಕರಣೆಗೆ ಒಳಗಾಗಲಿವೆ. ಸಮಯದ ಪರಿಷ್ಕರಣೆಯು ಭಾರತೀಯ ರೈಲ್ವೆಯ ಹೊಸ ವೇಳಾಪಟ್ಟಿಯ (TAG 2023-24) ಭಾಗವಾಗಿದೆ. ಇದು ಅಕ್ಟೋಬರ್ 1, 2023 ರಿಂದ ಜಾರಿಗೆ ಬರುತ್ತದೆ. ನೂತನ ವೇಳಾಪಟ್ಟಿಯು ಅಕ್ಟೋಬರ್ 1, 2023 ರಿಂದ ಪ್ರಾರಂಭವಾಗುವ ಪ್ರಯಾಣಗಳಿಗೆ ಜಾರಿಗೆ ಬರಲಿದೆ ಎಂದು ನೈಋತ್ಯ ರೈಲ್ವೆ (SWR) ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+