Bengaluru-Hubballi Train: ಬೆಂಗಳೂರು-ಹುಬ್ಬಳ್ಳಿ ಮಧ್ಯೆ ಈ ಎರಡು ದಿನ ರೈಲು ರದ್ದು!

ಬೆಂಗಳೂರು, ನವೆಂಬರ್‌ 20: ನೈಋತ್ಯ ರೈಲ್ವೆಯು ಬೆಂಗಳೂರು-ಹುಬ್ಬಳ್ಳಿ ಮಧ್ಯೆ ನವೆಂಬರ್​ 20 ಮತ್ತು 21 ರಂದು ಪ್ರಯಾಣಿಸುವ ಎರಡು ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

ಹೌದು, ರೈಲು ಸಂಖ್ಯೆ 07340 ಮತ್ತು 07339 ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಕೆಎಸ್‌ಆರ್ ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು ಕಳಪೆ ಆಕ್ಯುಪೆನ್ಸಿ ಕಾರಣ ನೀಡಿ ರದ್ದುಗೊಂಡಿವೆ. ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಪ್ರಯಾಣಿಸುವ ರೈಲುಗಳು ಕಳಪೆ ಆಕ್ಯುಪೆನ್‌ಸಿಯ ಕಾರಣ ಮುಂದಿನ ಸುತ್ತೋಲೆ ಹೊರಡಿಸುವವರೆಗು ರದ್ದಾಗೊಳಿಸಲಾಗುತ್ತದೆ.

train-cancel-between-bengaluru-and-hubballi

ರೈಲು ಸಂಖ್ಯೆ 06246, 06245 ಹೊಸಪೇಟೆ-ಹರಿಹರ ಪ್ಯಾಸೆಂಜರ್​​ ರೈಲುಗಳನ್ನು ಕಾರಣಾಂತರಗಳಿಂದ ನವೆಂಬರ್​ 17,18,19 ರದ್ದು ಮಾಡಲಾಗಿತ್ತು. ಇದೀಗ ರೈಲುಗಳು ಮೊದಲಿನ ವೇಳಾಪಟ್ಟಿಯಂತೆ ಮತ್ತೆ ಪ್ರಾರಂಭವಾಗಿವೆ. ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಬಾರ್ಮರ್ ಮಧ್ಯೆ ಹೆಚ್ಚು ರೈಲುಗಳನ್ನು ಓಡಿಸಲು ಇಲಾಖೆ ನಿರ್ಧರಿಸಿದೆ.

ರೈಲು ಸಂಖ್ಯೆ 06521 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಬಾರ್ಮರ್ ವಿಶೇಷ ಎಕ್ಸ್‌ಪ್ರೆಸ್, ನವೆಂಬರ್ 21 ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಸಂಜೆ 4.30 ಕ್ಕೆ ಹೊರಡಲಿದೆ. ನವೆಂಬರ್ 23 ರಂದು ಮಧ್ಯಾಹ್ನ 1.45 ಕ್ಕೆ ಬಾರ್ಮರ್ ತಲುಪುತ್ತದೆ.

ರೈಲು ಸಂಖ್ಯೆ 06522 ಬಾರ್ಮರ್-ಸರ್ ಎಂ. ವಿಶ್ವೇಶ್ವರಯ್ಯ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ನವೆಂಬರ್ 24 ರಂದು ಬೆಳಿಗ್ಗೆ 3.45 ಕ್ಕೆ ಬಾರ್ಮರ್‌ನಿಂದ ಹೊರಟು, ನವೆಂಬರ್ 25 ರಂದು ಬೆಳಿಗ್ಗೆ 11.30 ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ತಲುಪಲಿದೆ.

ಈ ರೈಲುಗಳು ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ದಾವಣಗೆರೆ, ರಾಣಿಬೆನ್ನೂರು, ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರಸ್ತೆ, ವಾಪಿ, ಸೂರತ್‌, ವಡೋದರಾ, ಅಹಮದಾಬಾದ್, ಮಹೇಶನ, ಪಟಾನ್, ಭಿಲ್ಡಿ, ಧನೇರಾ, ರಾಣಿವಾರ, ಮರ್ವಾರ್ ಭಿನ್ಮಾಲ್, ಮೋದ್ರನ್, ಜಲೋರ್, ಮೊಕಲ್ಸರ್, ಸಂಧಾರಿ, ಬಲೋತ್ರಾ ಮತ್ತು ಬೈತು ಮಾರ್ಗವಾಗಿ ಪ್ರಯಾಣಿಸುತ್ತದೆ.

ಈ ರೈಲುಗಳು ಎರಡು ಎಸಿ ಟು-ಟೈರ್ ಕೋಚ್‌ಗಳನ್ನು ಹೊಂದಿವೆ. 15 ಎಸಿ ತ್ರೀ-ಟೈರ್ ಎಕಾನಮಿ ಕೋಚ್‌ಗಳು ಮತ್ತು ಎರಡು ಲಗೇಜ್/ಜನರೇಟರ್/ಬ್ರೇಕ್ ವ್ಯಾನ್‌ಗಳನ್ನು ಹೊಂದಿವೆ. ಕಾರಟಗಿ ಮತ್ತು ಸಿದ್ದಾಪುರ ನಿಲ್ದಾಣಗಳಲ್ಲಿ ನಡೆಯುತ್ತಿರುವ ರೈಲ್ವೆ ಸಂಬಂಧಿತ ಕಾಮಗಾರಿಗಳಿಂದಾಗಿ ಈ ಕೆಳಗಿನ ರೈಲುಗಳು ಭಾಗಶಃ ರದ್ದುಗೊಳ್ಳಲಿವೆ.

ನವೆಂಬರ್ 21 ರಿಂದ 30 ರವರೆಗೆ ರೈಲು ಸಂಖ್ಯೆ 16545 ಯಶವಂತಪುರ-ಕಾರಟಗಿ ಎಕ್ಸ್‌ಪ್ರೆಸ್ ಸೇವೆಯನ್ನು ಗಂಗಾವತಿ ಮತ್ತು ಕಾರಟಗಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ನವೆಂಬರ್ 21 ರಿಂದ 30 ರವರೆಗೆ ರೈಲು ಸಂಖ್ಯೆ 17303 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕಾರಟಗಿ ಎಕ್ಸ್‌ಪ್ರೆಸ್ ಸೇವೆಯನ್ನು ಗಂಗಾವತಿ ಮತ್ತು ಕಾರಟಗಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 07381 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕಾರಟಗಿ ಪ್ಯಾಸೆಂಜರ್ ವಿಶೇಷ ಪ್ರಯಾಣವನ್ನು ನವೆಂಬರ್ 21 ರಿಂದ 30 ರವರೆಗೆ ಗಂಗಾವತಿ ಮತ್ತು ಕಾರಟಗಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.

ರೈಲು ಸಂಖ್ಯೆ 16546 ಕಾರಟಗಿ-ಯಶವಂತಪುರ ಎಕ್ಸ್‌ಪ್ರೆಸ್ ಪ್ರಯಾಣವು ನವೆಂಬರ್ 22 ರಿಂದ ಡಿಸೆಂಬರ್ 1 ರವರೆಗೆ ಕಾರಟಗಿ ನಿಲ್ದಾಣದಿಂದ ಬದಲಾಗಿ ಗಂಗಾವತಿಯಿಂದ ಹೊರಡಲಿದೆ. ರೈಲು ಸಂಖ್ಯೆ 17304 ಕಾರಟಗಿ-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ಪ್ರಯಾಣವು ನವೆಂಬರ್ 22 ರಿಂದ ಡಿಸೆಂಬರ್ 1 ರವರೆಗೆ ಕಾರಟಗಿ ನಿಲ್ದಾಣದಿಂದ ಬದಲಾಗಿ ಗಂಗಾವತಿಯಿಂದ ಹೊರಡಲಿದೆ. ರೈಲು ಸಂಖ್ಯೆ 07382 ಕಾರಟಗಿ-ಎಸ್‌ಎಸ್‌ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ವಿಶೇಷ ಪ್ರಯಾಣವು ನವೆಂಬರ್ 21 ರಿಂದ 30 ರವರೆಗೆ ಕಾರಟಗಿ ನಿಲ್ದಾಣದಿಂದ ಬದಲಾಗಿ ಗಂಗಾವತಿಯಿಂದ ಹೊರಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+