ಕರ್ನಾಟಕದ ಮೇಲಿರುವ ಒಟ್ಟು ಸಾಲ ಎಷ್ಟು?; ಅಂಕಿ ಅಂಶಗಳು
ಬೆಂಗಳೂರು, ಜುಲೈ 14; ಕರ್ನಾಟಕದಲ್ಲಿ ಹೊಸ ಸರ್ಕಾರ ಆಸ್ತಿತ್ವಕ್ಕೆ ಬಂದು ಎರಡು ತಿಂಗಳು ಕಳೆಯುತ್ತಾ ಬಂದಿದೆ. ಹೊಸ ಸರ್ಕಾರ ಬಜೆಟ್ ಮಂಡನೆ ಮಾಡಿದೆ. ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ 5 ಗ್ಯಾರಂಟಿ ಯೋಜನೆಗಳಿಗಾಗಿಯೇ ಸಾವಿರಾರು ಕೋಟಿ ರೂಪಾಯಿ ಖರ್ಚಾಗಲಿದೆ. ಸರ್ಕಾರದ ಬೊಕ್ಕಸಕ್ಕೆ ಹಣ ಎಲ್ಲಿಂದ ಬರುತ್ತದೆ? ಎಂಬುದು ಪ್ರಶ್ನೆ.
ಸರ್ಕಾರದ ರಾಜ್ಯವನ್ನು ಸಾಲದ ಶೂಲಕ್ಕೆ ತಳ್ಳುತ್ತದೆ ಎಂಬುದು ಪ್ರತಿಪಕ್ಷಗಳ ಆರೋಪವಾಗಿದೆ. ಹಾಗಾದರೆ ರಾಜ್ಯದ ಮೇಲಿರುವ ಒಟ್ಟು ಸಾಲ ಎಷ್ಟು, ಎಲ್ಲಿಂದ ಎಷ್ಟು ಸಾಲ ಪಡೆಯಲಾಗಿದೆ?. ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ವಿವರಣೆ ನೀಡಿದ್ದಾರೆ.

ವಿಧಾನ ಪರಿಷತ್ ಕಲಾಪದಲ್ಲಿ ಹೇಮಲತಾ ನಾಯಕ್ ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ಕೊಟ್ಟಿದ್ದಾರೆ. 2017-18 ರಿಂದ 2021-22ರ ತನಕ ರಾಜ್ಯ ಮಾಡಿರುವ ಸಾಲದ ಅಂಕಿ, ಅಂಶಗಳನ್ನು ನೀಡಿದ್ದಾರೆ. 2022-23ನೇ ಸಾಲಿಗೆ ಸಂಬಂಧಿಸಿದಂತೆ ಮಹಾಲೇಖಪಾಲರ ಕಚೇರಿಯಿಂದ ಇನ್ನೂ ಅಂತಿಮವಾಗಿರುವುದಿಲ್ಲ. ಅಂತಿಮವಾದ ಬಳಿಕ ಅಂತಿಮ ವರದಿ ಮಂಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕದ ಸಾಲದ ವಿವಿರಗಳು; ಮೇ 2023ರ ವರೆಗಿನ ರಾಜ್ಯದ ಸಾಲದ ಮೊತ್ತ ಎಷ್ಟು? (ಸಂಪೂರ್ಣ ಮಾಹಿತಿಯನ್ನು ನೀಡುವುದು) ಎಂದು ಕೇಳಲಾಗಿತ್ತು.
ಸಿದ್ದರಾಮಯ್ಯ ಉತ್ತರದಲ್ಲಿ ರಾಜ್ಯ ಸರ್ಕಾರದ ಮೇಲೆ, ಮಹಾಲೇಖಪಾಲರ ಪೂರ್ವ ವಾಸ್ತವಿಕ ಲೆಕ್ಕದ ಅನ್ವಯ ಮಾರ್ಚ್ 2022ರ ಅಂತ್ಯಕ್ಕೆ ಬಾಕಿ ಇರುವ ಒಟ್ಟು ಸಾರ್ವಜನಿಕ ಸಾಲದ ಮೊತ್ತ ರೂ. 374426.82 ಕೋಟಿಗಳು ಎಂದು ಹೇಳಿದ್ದಾರೆ. ರಾಜ್ಯದ ಒಟ್ಟು ಸಾಲದ ಮೊತ್ತದ ವಿವರಗಳು (ರೂ., ಕೋಟಿಗಳಲ್ಲಿ) ಆಂತರಿಕ ಸಾಲ (ಮುಕ್ತ ಮಾರುಕಟ್ಟೆ, ನಬಾರ್ಡ್ & ಇತರೆ ಸಾಲಗಳು) 329041.81 ಮತ್ತು ಭಾರತ ಸರ್ಕಾರದ ಸಾಲ ಮತ್ತು ಮುಂಗಡಗಳು 45385.00 ಆಗಿದೆ.
ಮಹಾಲೇಖಪಾಲರ ಕಛೇರಿಯಿಂದ 2022-23ನೇ ಸಾಲಿನ ಲೆಕ್ಕಗಳು ಇನ್ನೂ ಅಂತಿಮವಾಗಿರುವುದಿಲ್ಲ. ಅಂತಿಮವಾದ ನಂತರ ಮಹಾಲೇಖಪಾಲರ ಕಛೇರಿಯಿಂದ ಅಂತಿಮ ಲೆಕ್ಕದ ವಿವರ ಮಂಡಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ವಾರ್ಷಿಕ ಬಡ್ಡಿ ಮತ್ತು ಸಾಲ ಅಸಲು ಮರುಪಾವತಿಗೆ ಬೇಕಾಗುವ ಹಣವೆಷ್ಟು? ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರ ನೀಡಿರುವ ಸಿದ್ದರಾಮಯ್ಯ ಪ್ರತಿ ವರ್ಷ ಅಯವ್ಯಯ ಅಂದಾಜಿನಲ್ಲಿ, ಅಸಲು ಪಾವತಿಗೆ ಬೇಕಾಗುವ ಮೊತ್ತವನ್ನು ಲೆಕ್ಕ ಹಾಕಿ ಪ್ರಧಾನ ಲೆಕ್ಕ ಶೀರ್ಷಿಕೆ: 6003 & 6004 ರಡಿಯಲ್ಲಿ ಹಾಗೂ ಬಡ್ಡಿ ಪಾವತಿಗೆ ಪ್ರಧಾನ ಲೆಕ್ಕ ಶೀರ್ಷಿಕೆ: 2049ರಡಿಯಲ್ಲಿ ಅನುದಾನ ಕಲ್ಪಿಸಿಕೊಳ್ಳಲಾಗುತ್ತದೆ. 2023-24ನೇ ಸಾಲಿನ ಜುಲೈ ಮಾಹೆಯ ಆಯವ್ಯಯದಲ್ಲಿ ಅಸಲು ಪಾವತಿಗೆ ಬೇಕಾಗುವ ಹಾಗೂ ಬಡ್ಡಿಗೆ ಮೀಸಲಿರಿಸಲಾದ ಅನುದಾನದ ವಿವರಗಳು ರೂ. ಕೋಟಿಗಳಲ್ಲಿ. ಬಡ್ಡಿ ಪಾವತಿಗೆ 34027.08 ಮತ್ತು ಅಸಲು ಪಾವತಿಗೆ 22440.59 ಆಗಿದೆ.
ಕಳೆದ 5 ವರ್ಷಗಳ ಸಾಲ; ಕಳೆದ 5 ವರ್ಷಗಳಲ್ಲಿ ಕರ್ನಾಟಕ ಸರ್ಕಾರವು ಪಡೆದಿರುವ ಸಾಲದ ವಿವರಗಳು ಹೀಗಿವೆ (ರೂ. ಕೋಟಿಗಳಲ್ಲಿ). 2017-18 ಒಟ್ಟು 25121.86. ಇವುಗಳಲ್ಲಿ ಮಾರುಕಟ್ಟೆ ಸಾಲ 22098.00, ನಬಾರ್ಡ್‌ನಿಂದ ಸಾಲಗಳು 1080.62, ಬಾಹ್ಯ ಸಹಾಯ ಪಡೆದ ಯೋಜನೆಗಳಿಗೆ ಸಾಲ-ಬ್ಯಾಕ್-ಟು-ಬ್ಯಾಕ್ 1943.25, ಬಂಡವಾಳ ವೆಚ್ಚಕ್ಕಾಗಿ ರಾಜ್ಯಕ್ಕೆ ವಿಶೇಷ ಸಾಲದ ನೆರವು 0.00 ಆಗಿದೆ.
2018-19 ಒಟ್ಟು 41914.12. ಇವುಗಳಲ್ಲಿ ಮಾರುಕಟ್ಟೆ ಸಾಲ 39600.00, ನಬಾರ್ಡ್‌ನಿಂದ ಸಾಲಗಳು 869.73, ಬಾಹ್ಯ ಸಹಾಯ ಪಡೆದ ಯೋಜನೆಗಳಿಗೆ ಸಾಲ-ಬ್ಯಾಕ್-ಟು-ಬ್ಯಾಕ್ 1444.39, ಬಂಡವಾಳ ವೆಚ್ಚಕ್ಕಾಗಿ ರಾಜ್ಯಕ್ಕೆ ವಿಶೇಷ ಸಾಲದ ನೆರವು 0.00.
2019-20 ಒಟ್ಟು 50149.14. ಇವುಗಳಲ್ಲಿ ಮಾರುಕಟ್ಟೆ ಸಾಲ 48500.00, ನಬಾರ್ಡ್‌ನಿಂದ ಸಾಲಗಳು 973.89, ಬಾಹ್ಯ ಸಹಾಯ ಪಡೆದ ಯೋಜನೆಗಳಿಗೆ ಸಾಲ-ಬ್ಯಾಕ್-ಟು-ಬ್ಯಾಕ್ 675.26, ಬಂಡವಾಳ ವೆಚ್ಚಕ್ಕಾಗಿ ರಾಜ್ಯಕ್ಕೆ ವಿಶೇಷ ಸಾಲದ ನೆರವು 0.00 ಆಗಿದೆ.
2020-21 ಒಟ್ಟು 72120.91. ಇವುಗಳಲ್ಲಿ ಮಾರುಕಟ್ಟೆ ಸಾಲ 69000.00, ನಬಾರ್ಡ್‌ನಿಂದ ಸಾಲಗಳು 1413.87, ಬಾಹ್ಯ ಸಹಾಯ ಪಡೆದ ಯೋಜನೆಗಳಿಗೆ ಸಾಲ-ಬ್ಯಾಕ್-ಟು-ಬ್ಯಾಕ್ 1402.04, ಬಂಡವಾಳ ವೆಚ್ಚಕ್ಕಾಗಿ ರಾಜ್ಯಕ್ಕೆ ವಿಶೇಷ ಸಾಲದ ನೆರವು 305.00.
2021-22 ಒಟ್ಟು 62531.93. ಇವುಗಳಲ್ಲಿ ಮಾರುಕಟ್ಟೆ ಸಾಲ 59000.00, ನಬಾರ್ಡ್‌ನಿಂದ ಸಾಲಗಳು 1461.46, ಬಾಹ್ಯ ಸಹಾಯ ಪಡೆದ ಯೋಜನೆಗಳಿಗೆ ಸಾಲ-ಬ್ಯಾಕ್-ಟು-ಬ್ಯಾಕ್ 1618.97, ಬಂಡವಾಳ ವೆಚ್ಚಕ್ಕಾಗಿ ರಾಜ್ಯಕ್ಕೆ ವಿಶೇಷ ಸಾಲದ ನೆರವು 451.50 ಆಗಿದೆ.












Click it and Unblock the Notifications