10 Richest Candidates: ಕಣದಲ್ಲಿರುವ ಹತ್ತು 'ಕುಬೇರ' ಅಭ್ಯರ್ಥಿಗಳು ಇವರೇ..

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಎಲ್ಲಾ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಗೆಲುವಿಗಾಗಿ ಭಾರಿ ಕಸರತ್ತು ಮಾಡುತ್ತಿದ್ದಾರೆ. ಚುನಾವಣೆಗಾಗಿ ನಾಮಪತ್ರ ಸಲ್ಲಿಸುವ ವೇಳೆ ಎಲ್ಲಾ ಅಭ್ಯರ್ಥಿಗಳು ತಮ್ಮ ಆಸ್ತಿಯನ್ನು ಘೋಷಿಸಿಕೊಳ್ಳಬೇಕಾಗುತ್ತದೆ. ರಾಜ್ಯದಲ್ಲಿ ನಾಲ್ಕು ಅಭ್ಯರ್ಥಿಗಳು ಸಾವಿರ ಕೋಟಿಗಿಂತ ಅಧಿಕ ಆಸ್ತಿ ಹೊಂದಿದ್ದಾರೆ. ಇನ್ನೂ ಹಲವಾರು ಅಭ್ಯರ್ಥಿಗಳು ನೂರಾರು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಎಡಿಆರ್ ಈ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನಲೆ, ಆಸ್ತಿ, ವಿದ್ಯಾಭ್ಯಾಸ, ಶಿಕ್ಷಣದ ಬಗ್ಗೆ ವಿವರಗಳನ್ನು ನೀಡಿದೆ. ರಾಜ್ಯದಲ್ಲಿ ಚುನಾವಣೆಯಲ್ಲಿ ನಿಂತಿರುವ ಸಾಕಷ್ಟು ಅಭ್ಯರ್ಥಿಗಳು ಕೋಟಿ ವೀರರು ಎಂದು ಅಂಕಿ ಅಂಶ ತಿಳಿಸುತ್ತದೆ. ರಾಷ್ಟ್ರೀಯ ಪಕ್ಷಗಳಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳಲ್ಲಿ ಶೇಕಡಾ 71 ರಷ್ಟು ಅಭ್ಯರ್ಥಿಗಳು ಕೋಟ್ಯಧಿಪತಿಗಳು ಎಂದು ತಿಳಿಸಲಾಗಿದೆ.

 Top 10 Richest Candidates in Karnataka Assembly Election 2023

ಪ್ರಾದೇಶಿಕ ಪಕ್ಷಗಳಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳಲ್ಲಿ ಶೇಕಡಾ 74 ರಷ್ಟು ಮಂದಿ ಕೋಟಿಗಿಂತ ಅಧಿಕ ಆಸ್ತಿ ಹೊಂದಿರುವುದಾಗಿ ಎಡಿಆರ್ ಮಾಹಿತಿ ನೀಡಿದೆ. ನೋಂದಣಿಯಾಗಿರುವ ಆದರೆ ಪ್ರಚಾರದಲ್ಲಿಲ್ಲದ ಪಕ್ಷಗಳಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಶೇಕಡಾ 19ರಂದು ಮಂದಿ ಕೋಟಿ ಕುಳಗಳಾಗಿದ್ದಾರೆ. ಪಕ್ಷೇತರವಾಗಿ ಸ್ಪರ್ಧೆ ಮಾಡಿರುವವರಲ್ಲಿ ಶೇಕಡಾ 24ರಷ್ಟು ಅಭ್ಯರ್ಥಿಗಳು ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಅಖಾಡದಲ್ಲಿರುವ ಅಭ್ಯರ್ಥಿಗಳಲ್ಲಿ ಅಗ್ರ ಶ್ರೀಮಂತರನ್ನು ಪಟ್ಟಿಯಲ್ಲಿ ನೀಡಲಾಗಿದೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಯೂಸುಫ್ ಷರೀಫ್ (ಕೆಜಿಎಫ್ ಬಾಬು) 1633 ಕೋಟಿ ರುಪಾಯಿ ಆಸ್ತಿ ಹೊಂದುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಬಿಜೆಪಿಯ ಎನ್‌. ನಾಗರಾಜು (ಎಂಟಿಬಿ), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

(Source: ADR Press Release dated 3rd May, 2023)

ಕ್ಷೇತ್ರದ ಸಂಖ್ಯೆ ಕ್ಷೇತ್ರದ ಹೆಸರು ಅಭ್ಯರ್ಥಿಯ ಹೆಸರು ಪಕ್ಷ ಘೋಷಿತ ಆಸ್ತಿ(in crores)
169 ಚಿಕ್ಕಪೇಟೆ ಯೂಸುಫ್ ಷರೀಫ್ (ಕೆಜಿಎಫ್ ಬಾಬು) ಪಕ್ಷೇತರ 1633,66,35,438
178 ಹೊಸಕೋಟೆ ಎನ್.ನಾಗರಾಜು (ಎಂಟಿಬಿ) ಬಿಜೆಪಿ 1609,56,44,113
184 ಕನಕಪುರ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ 1413,80,02,404
166 ಗೋವಿಂದರಾಜ ನಗರ ಪ್ರಿಯಕೃಷ್ಣ ಕಾಂಗ್ರೆಸ್ 1156,83,93,089
158 ಹೆಬ್ಬಾಳ ಸುರೇಶ್ ಬಿಎಸ್ (ಬೈರತಿ) ಕಾಂಗ್ರೆಸ್ 648,14,94,854
163 ಶಾಂತಿನಗರ ಎನ್.ಎ.ಹ್ಯಾರಿಸ್ ಕಾಂಗ್ರೆಸ್ 439,20,99,180
195 ಬೇಲೂರು ಎಚ್.ಕೆ.ಸುರೇಶ್ ಬಿಜೆಪಿ 435,30,50,751
175 ಬೊಮ್ಮನಹಳ್ಳಿ ನಾರಾಯಣರಾಜು ಜೆಡಿಎಸ್ 416,79,75,837
94 ಬಳ್ಳಾರಿ ನಗರ ಅನಿಲ್‌ ಲಾಡ್‌ ಜೆಡಿಎಸ್ 380,57,29,648
76 ಹಳಿಯಾಳ ಆರ್.ವಿ.ದೇಶಪಾಂಡೆ ಕಾಂಗ್ರೆಸ್ 363,21,13,405
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+