Tomato Price: ಇಳಿಕೆಯತ್ತ ಟೊಮೆಟೊ ದರ: ನಾಲ್ಕು ದಿನಗಳಲ್ಲಿ ಭಾರಿ ಕುಸಿತ

ಸಾರ್ವಕಾಲಿಕ ಏರಿಕೆ ಕಂಡಿದ್ದ ಟೊಮೆಟೊ ದರ ಸದ್ಯ ಇಳಿಕೆ ಕಾಣುತ್ತಿದ್ದು ಗ್ರಾಹಕರು ನಿಟ್ಟುಸಿರು ಬಿಟ್ಟರೆ ರೈತರಲ್ಲಿ ಆತಂಕ ಶುರುವಾಗಿದೆ. ದೇಶದ ಪ್ರಮುಖ ಟೊಮೆಟೊ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ 1000 ರೂಪಾಯಿವರೆಗೆ ಬೆಲೆ ಕುಸಿತ ಕಂಡಿದೆ.

ಕಳೆದ ವಾರ 15 ಕೆ.ಜಿ. ಬಾಕ್ಸ್ ಟೊಮೆಟೊ ದರ 2,700 ರೂ.ನಿಂದ 1,500 ರೂಪಾಯಿಗೆ ಕಡಿಮೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಟೊಮೆಟೊ ಬೆಲೆ 1000 ರೂಪಾಯಿಗಿಂತ ಹೆಚ್ಚು ಕುಸಿತ ಕಂಡಿದೆ. ಮುಂದಿನ ದಿನಗಳಲ್ಲಿ ಟೊಮೆಟೊ ದರ ಮತ್ತಷ್ಟು ಕುಸಿತ ಕಾಣುವ ಸಾಧ್ಯತೆ ಇದೆ.

Tomato Prices Decline After Hitting All-Time High

ಕಳೆದ ಎರಡು ತಿಂಗಳಿನಿಂದ ಇಡೀ ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿತ್ತು, ಹಿಂದೆಂದೂ ಕಾಣದ ಗರಿಷ್ಠ ಮೊತ್ತಕ್ಕೆ ಟೊಮೆಟೊ ಮಾರಾಟವಾಗಿದೆ. ದೆಹಲಿಯಲ್ಲಿ 250 ರೂಪಾಯಿಗಿಂತ ಹೆಚ್ಚಿನ ಮೊತ್ತಕ್ಕೆ ಕೆ.ಜಿ ಟೊಮೆಟೊ ಮಾರಾಟವಾಗಿತ್ತು.

ಜನರ ಜೇಬಿಗೆ ಕತ್ತರಿ ಹಾಕಿದ್ದ ಟೊಮೆಟೊ ಬೆಲೆ ಸದ್ಯ ಇಳಿಕೆಯತ್ತ ಸಾಗುತ್ತಿರುವುದು ಮಾರಾಟಗಾರರಿಗೆ ಮತ್ತು ಗ್ರಾಹಕರಿಗೆ ಸಮಾಧಾನ ತಂದಿದೆ. ಆದರೆ ದರ ಏರಿಕೆಯಿಂದ ಭರ್ಜರಿ ಲಾಭ ಕಾಣುತ್ತಿದ್ದ ರೈತರಲ್ಲಿ ದರ ಕುಸಿತ ಸ್ವಲ್ಪ ಆತಂಕ ಮೂಡಿಸಿದೆ.

ಮಹಾರಾಷ್ಟ್ರ ಆಂಧ್ರ, ತಮಿಳುನಾಡು ಸೇರಿ ಹಲವು ರಾಜ್ಯಗಳಿಂದ ಮಾರುಕಟ್ಟೆಗೆ ಟೊಮೆಟೊ ಪೂರೈಕೆ ಆಗುತ್ತಿರುವುದರಿಂದ ಬೆಲೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಮಾರುಕಟ್ಟೆಗೆ ಬಂದರೆ ದರ ಇನ್ನಷ್ಟು ಕಡಿಮೆಯಾಗಲಿದೆ.

ಲಕ್ಷ-ಲಕ್ಷ ಲಾಭ ಗಳಿಸಿದ ರೈತರು

ಹಲವು ವರ್ಷಗಳಿಂದ ಟೊಮೆಟೊ ಬೆಳೆದು ಕೈಸುಟ್ಟುಕೊಂಡಿದ್ದ ರೈತರಿಗೆ ಈ ಬಾರಿ ಕೆಂಪು ಸುಂದರಿ ಭಾರಿ ಲಾಭ ತಂದುಕೊಟ್ಟಿದ್ದು, ರೈತರು ಲಕ್ಷಾಂತರ ರೂಪಾಯಿ ಲಾಭ ಪಡೆದುಕೊಂಡಿದ್ದಾರೆ. ಭಾರಿ ಬೆಲೆ ಏರಿಕೆಯಿಂದ ಟೊಮೆಟೊ ತೋಟಗಳಿಗೆ ಕಳ್ಳರ ಕಾಟ ಕೂಡ ಹೆಚ್ಚಾಗಿತ್ತು. ಮಾರುಕಟ್ಟೆಗೆ ಒಯ್ಯುವುದು ಕೂಡ ಕಷ್ಟಕರವಾಗಿತ್ತು.

ಹಲವು ರೈತರು ಹಗಲು ರಾತ್ರಿ ಕಾದು ಬೆಳೆಯನ್ನು ಕಾಪಾಡಿಕೊಂಡರೆ, ಇನ್ನೂ ಕೆಲವು ರೈತರು ತೋಟಗಳಿಗೆ ಸಿಸಿಟಿವಿ ಕೂಡ ಅಳವಡಿಸಿದ್ದರು. ಹಲವು ಕಡೆಗಳಲ್ಲಿ ಟೊಮೆಟೊ ಸಾಗಿಸುವ ವಾಹನಗಳನ್ನು ಕೂಡ ಕಳವು ಮಾಡಿದ್ದರು. ಕೋಲಾರ ಎಪಿಎಂಸಿ ಅಧಿಕಾರಿಗಳು ನೀಡಿದ್ದ ಮಾಹಿತಿ ಪ್ರಕಾರ ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಹಲವು ರೈತರು ಟೊಮೆಟೊ ಮಾರಿ ಕೋಟಿಗಟ್ಟಲೆ ಲಾಭ ಪಡೆದುಕೊಂಡಿದ್ದಾರೆ.

ಟೊಮೆಟೊ ಬೆಲೆ ಏರಿಕೆ ಕಂಡ ಬಳಿಕ ಸದ್ಯ ಟೊಮೆಟೊ ಸಸಿಗಳಿಗೆ ಭಾರಿ ಬೇಡಿಕೆ ಬಂದಿದೆ. ನರ್ಸರಿಗಳಲ್ಲಿ ಲಕ್ಷಾಂತರ ಸಸಿಗಳು ಮಾರಾಟವಾಗುತ್ತಿದ್ದು, ರೈತರು ಕೆಂಪು ಸುಂದರಿಯನ್ನು ಬೆಳೆದು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+