ಸಂಕ್ರಾಂತಿ ಆಗಲಿದೆ ದುಬಾರಿ, ಟಮೆಟೋ ರೇಟು ಇನ್ನೂ ಏರಲಿದೆ!

ಬೆಂಗಳೂರು, ಜನವರಿ 11: ಹಬ್ಬ ಸನಿಹ ಆಗುತ್ತಿದ್ದಂತೆ ತರಕಾರಿಗಳ ಬೆಲೆ ಏರುಮುಖದಲ್ಲಿ ಸಾಗುತ್ತಿವೆ. ಟಮೆಟೋ ರೇಟು ಈಗಾಗಲೇ ಗಗನ ತಲುಪಿದೆ ಆದರೆ ಅದು ಇನ್ನೂ ಮೇಲೇರೆ ಅಂತರಿಕ್ಷಕ್ಕೆ ಹಾರಲಿದೆ.

ಹೌದು, ಈಗಾಗಲೇ ಕೆ.ಜಿಗೆ 60 ರೂಪಾಯಿ ತಲುಪಿರುವ ಟಮೆಟೋ ಬೆಲೆ ಕೆಲವು ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ. ಮಾರುಕಟ್ಟೆಯಲ್ಲಿ ಟಮೆಟೊ ಸರಬರಾಜು ಕೊರತೆಯೇ ಈ ರೀತಿಯ ಭಾರಿ ಬೆಲೆ ಏರಿಕೆಗೆ ಕಾರಣ. ಟಮೆಟೋವನ್ನು ಕೆಲವು ಚಿಲ್ಲರೆ ಮಾರಾಟಗಾರರು ಕೆ.ಜಿಗೆ 70-75 ರೂಪಾಯಿಗೂ ಮಾರುತ್ತಿದ್ದಾರೆ.

ಟಮೆಟೋ ಮಾತ್ರವೇ ಅಲ್ಲ ಇತರ ತರಕಾರಿಗಳ ಬೆಲೆಗಳೂ ಸಹ ಏರುಗತಿಯಲ್ಲಿವೆ, ನುಗ್ಗೆಕಾಯಿ ಟಮೆಟೂವನ್ನೂ ಮೀರಿಸಿ ಎನ್ನೂ ಮೇಲಕ್ಕೆ ಏರಿದ್ದು, ನುಗ್ಗೆಕಾಯಿ ಕೆಜಿಗೆ 140 ರೂಪಾಯಿ ಇದೆ.

Tomato price in Bengaluru gone high may touch 100rs in coming days

ಪ್ರತಿದಿನ 500 ಟನ್ ಟಮೆಟೋ ನಗರಕ್ಕೆ ಬರುತ್ತದೆ ಎಂಬ ಅಂದಾಜಿದೆ ಆದರೆ ಈ ಬಾರಿ ಇದಕ್ಕೆ ಅರ್ಧದಷ್ಟು ಮಾತ್ರವೇ ಬರುತ್ತಿದೆಯಂತೆ. ಪೂರೈಕೆ ಬಹಳ ಕಡಿಮೆ ಆಗಿದ್ದು, ಮುಂದಿನ ವಾರ ಬೆಲೆ ಇನ್ನೂ ಹೆಚ್ಚಾಗಲಿದೆ ಎಂದು ಮಾರುಕಟ್ಟೆ ಮಂದಿ ಹೇಳುತ್ತಿದ್ದಾರೆ.

ಕೊಳೆಬಾಧೆ ರೋಗ, ಪ್ರತಿಕೂಲ ಹವಾಮಾನದಿಂದಾಗಿ ಟಮೆಟೊ ಇಳುವರಿ ಸರಿಯಾಗಿ ಆಗಿಲ್ಲ ಹಾಗಾಗಿ ಮಾರುಕಟ್ಟೆಗೆ ಟಮೆಟೊ ಸರಬರಾಜು ತೀವ್ರವಾಗಿ ಕಡಿಮೆ ಆಗಿದೆ. ಬೆಲೆ ಕಡಿಮೆ ಆಗಲು ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಎರಡನೇ ವಾರದ ವರೆಗೆ ಕಾಯಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಈಗ 70 ರ ಆಸುಪಾಸು ಆಡುತ್ತಿರುವ ಟಮೆಟೋ ಬೆಲೆ ಡಿಸೆಂಬರ್ ತಿಂಗಳ ಆರಂಭದಲ್ಲಿ ಕೇವಲ 18-20 ರೂಪಾಯಿಗಳು ಇತ್ತು. ಅದೇ ಕಳೆದ ಆಗಸ್ಟ್‌ನಲ್ಲಿ ಕೆ.ಜಿಗೆ ಕೇವಲ 3-4 ರೂಪಾಯಿಗೆ ಮಾರಾಟವಾಗುತ್ತಿತ್ತು.

ಮಕರ ಸಂಕ್ರಾಂತಿ ಹಬ್ಬ ಇನ್ನೇನು ಎರಡು ದಿನಗಳು ಇವೆ. ಇಂತಹಾ ಸಮಯದಲ್ಲೇ ಅಡುಗೆಗೆ ಅತಿಮುಖ್ಯವಾದ ಟಮೆಟೊ ಬೆಲೆ ಗಗನಕ್ಕೆ ಏರಿರುವುದು ಹಬ್ಬದ ಸಂತಸವನ್ನು ಕಸಿದುಕೊಳ್ಳಲಿದೆ. ಟಮೆಟೊ ಜೊತೆಗೆ ನುಗ್ಗೆಕಾಯಿ, ಬೀನ್ಸ್‌, ಕ್ಯಾರೆಟ್, ಬೀನ್ಸ್‌, ಕೋಸುಗಳ ಬೆಲೆಯೂ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+