Karnataka Dam Water Level on August 12: ರಾಜ್ಯದ ಅಣೆಕಟ್ಟುಗಳ ಹೊರಹರಿವು ಹೆಚ್ಚಳ, ಪಟ್ಟಿ
ಬೆಂಗಳೂರು, ಆಗಸ್ಟ್ 12: ರಾಜ್ಯದ ಅರ್ಧ ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಕಳೆದ ಕೆಲವು ವಾರಗಳಿಂದ ಸುರಿದ ವಿಪರೀತ ಮಳೆಗೆ ನದಿಗಳಿಗೆ ಜೀವ ಕಳೆ ಬಂದರೆ, ಮತ್ತೊಂದೆಡೆ ಕರ್ನಾಟಕದ ಪ್ರಮುಖ ಜಲಾಶಯಗಳು ಮೈದುಂಬಿಕೊಂಡಿವೆ. ಪರಿಣಾಮ ಒಂದಷ್ಟು ಅಣೆಕಟ್ಟುಗಳಿಂದ ಸಾವಿರಾರು ಕ್ಯೂಸೆಕ್ಸ್ ನೀರನ್ನು ಹೊರ ಬೀಡಲಾಗುತ್ತಿದೆ.
ಬರಗಾಲದಿಂದ ತತ್ತರಿಸಿದ್ದ ರಾಜ್ಯಕ್ಕೆ ಭಾರೀ ಮಳೆ ಸುರಿಯಲು ಆರಂಭಿಸುತ್ತಿದ್ದಂತೆ ಡ್ಯಾಂಗಳ ಒಳಹರಿವು ಏರಿಕೆ ಆಗತೊಡಗಿದೆ. ಇದೀಗ ಎಲ್ಲ ಡ್ಯಾಂಗಳು ಭರ್ತಿ ಹಂತಕ್ಕೆ ಬಂದು ತಲುಪಿವೆ. ಈಗ ಒಳಹರಿವಿಗಿಂತ ಹೊರ ಹರಿವಿನ ಪ್ರಮಾಣ ಹೆಚ್ಚಾಗಿದೆ. ಹಾಗಾದರೆ ಯಾವ ಜಲಾಶಯಗಳಲ್ಲಿ ಎಷ್ಟೆಷ್ಟು ನೀರು ತುಂಬಿಕೊಂಡಿದೆ, ನೀರು ಬಿಡಲಾಗುತ್ತಿದೆ ಎಂಬ ಮಾಹಿತಿ ಇಲ್ಲಿದೆ.

ರಾಜ್ಯದ ಜಲಾಶಯಗಳ ಇಂದಿನ ಅಪ್ಡೇಟ್, ಪಟ್ಟಿ
* ಆಲಮಟ್ಟಿ ಜಲಾಶಯ
ಜಲಾಶಯ ಒಟ್ಟು ಸಾಮರ್ಥ್ಯ- 123 ಟಿಎಂಸಿ
ಇಂದಿನ ಮಟ್ಟ - 118 ಟಿಎಂಸಿ
ಹೊರಹರಿವು - 21,108 ಕ್ಯೂಸೆಕ್
ಒಳಹರಿವು - 54,830 ಕ್ಯೂಸೆಕ್
* KRS ಜಲಾಶಯದ ವಿವರ
ಒಟ್ಟು ಸಾಮರ್ಥ್ಯ - 49 ಟಿಎಂಸಿ
ಇಂದಿನ ಮಟ್ಟ- 47.106 ಟಿಎಂಸಿ
ಹೊರಹರಿವು - 38,318 ಕ್ಯೂಸೆಕ್
ಒಳಹರಿವು - 21,060 ಕ್ಯೂಸೆಕ್
* ಕಬಿನಿ ಜಲಾಶಯ
ಜಲಾಶಯ ಒಟ್ಟು ಸಾಮರ್ಥ್ಯ- 19 ಟಿಎಂಸಿ
ಇಂದಿನ ಮಟ್ಟ - 18.76 ಟಿಎಂಸಿ
ಹೊರಹರಿವು - 6350 ಕ್ಯೂಸೆಕ್
ಒಳಹರಿವು - 4782 ಕ್ಯೂಸೆಕ್

* ಹೇಮಾವತಿ ಜಲಾಶಯ
ಒಟ್ಟು ಸಾಮರ್ಥ್ಯ- 37. 11 ಟಿಎಂಸಿ
ಇಂದಿನ ನೀರಿನ ಮಟ್ಟ- 35.895 ಟಿಎಂಸಿ
ಒಳಹರಿವು - 15,875 ಕ್ಯೂಸೆಕ್
ಹೊರಹರಿವು - 9206 ಕ್ಯೂಸೆಕ್
* ತುಂಗಭದ್ರಾ ಜಲಾಶಯ
ಒಟ್ಟು ಸಾಮರ್ಥ್ಯ - 105.79 ಟಿಎಂಸಿ
ಇಂದಿನ ಮಟ್ಟ - 97 ಟಿಎಂಸಿ
ಹೊರಹರಿವು - 1,50,000 ಕ್ಯೂಸೆಕ್
ಒಳಹರಿವು - 25,571 ಕ್ಯೂಸೆಕ್
* ಹಾರಂಗಿ ಜಲಾಶಯ
ಒಟ್ಟು ನೀರಿನ ಸಾಮರ್ಥ್ಯ- 8.5 ಟಿಎಂಸಿ
ಇಂದಿನ ಸಂಗ್ರಹ - 8.44 ಟಿಎಂಸಿ
ಒಳಹರಿವು -3168 ಕ್ಯೂಸೆಕ್
ಹೊರಹರಿವು - 2000 ಕ್ಯೂಸೆಕ್
* ಲಿಂಗನಮಕ್ಕಿ ಜಲಾಶಯ
ಒಟ್ಟು ಸಾಮರ್ಥ್ಯ- 151 ಟಿಎಂಸಿ
ಇಂದಿನ ಮಟ್ಟ - 143.75 ಟಿಎಂಸಿ
ಒಳಹರಿವು - 7713 ಕ್ಯೂಸೆಕ್
ಹೊರಹರಿವು - 7611 ಕ್ಯೂಸೆಕ್
* ಮಲಪ್ರಭಾ ಜಲಾಶಯ
ಒಟ್ಟು ನೀರಿನ ಸಾಮರ್ಥ್ಯ - 37.73 ಟಿಎಂಸಿ
ಇಂದಿನ ಸಂಗ್ರಹ - 34.31 ಟಿಎಂಸಿ
ಒಳಹರಿವು - 1887 ಕ್ಯೂಸೆಕ್
ಹೊರಹರಿವು - 1887 ಕ್ಯೂಸೆಕ್
ಸದ್ಯ ತುಂಗಭದ್ರಾ ಡ್ಯಾಂ ನಿಂದ ಅತ್ಯಧಿಕ ಹೊರಹರಿವು ಕಂಡು ಬಂದಿದೆ. ಈ ಡ್ಯಾಂನ ಕ್ರಸ್ಟ್ ಗೇಟ್ ಲಿಂಕ್ ಕಟ್ಟಾಗಿದೆ. ಗೇಟ್ ಕೊಚ್ಚಿಕೊಂಡು ಹೋಗಿದೆ. ನೀರಿನ ಒತ್ತಡ ಹೆಚ್ಚಳ ಹಿನ್ನೆಲೆಯಲ್ಲಿ ಅತ್ಯಧಿಕ ನೀರನ್ನು ಹೊರ ಬಿಡಲಾಗಿದೆ. ಜಲಾಶಯದ ಕೆಳವ ಭಾಗದ ಜನರಿಗೆ ಪ್ರವಾಹ ಆತಂಕ ಎದುರಾಗಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುನ್ಸೂಚನೆ ಕೊಡಲಾಗಿದೆ.












Click it and Unblock the Notifications