ಬೆಂಗಳೂರಲ್ಲಿ ಸೆಕೆ: ರಾಜ್ಯಾದ್ಯಂತ ವಾರಾಂತ್ಯದಲ್ಲಿ ಮಳೆ ಸಾಧ್ಯತೆ
Recommended Video

ಬೆಂಗಳೂರು, ಅಕ್ಟೋಬರ್ 1: ಬೆಂಗಳೂರಲ್ಲಿ ಪ್ರತಿ ದಿನ ಸಂಜೆಯ ನಂತರ ಮಳೆಯಾಗುತ್ತಿದ್ದರೂ ವಿಪರೀತ ಸೆಕೆ ಆರಂಭವಾಗಿದೆ. ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಅ.6ರಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು ವಾರದ ಅಂತ್ಯದಲ್ಲಿ ಕರ್ನಾಟಕಾದ್ಯಂತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಗಾರು ಹಿಂದೆ ಸರಿಯುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ವಾಡಿಕೆ ಹಿಂಗಾರು ಮಳೆ ಮುನ್ಸೂಚನೆಯನ್ನು ಇಲಾಖೆ ನೀಡಿದೆ. ಅ.7-8ರಂದು ವಾಯುಭಾರ ಕುಸಿತ ಉಂಟಾಗಲಿರುವ ಕಾರಣ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಹಾಸನ, ಬೀದರ್, ಬಾಳೆಹೊನ್ನೂರಿನಲ್ಲಿ ಭಾನುವಾರ ಸಾಧಾರಣ ಮಳೆಯಾಗಿದೆ.

ಒಂದು ವಾರದಲ್ಲಿ ದಕ್ಷಿಣ ಒಳನಾಡು ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಸೆಪ್ಟೆಂಬರ್ ತಿಂಗಳ ಮಧ್ಯಭಾಗದಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತು. ಕೆಲ ದಿನಗಳು ಹಗಲಿನಲ್ಲಿ ಏರುತ್ತಿದ್ದ ಸೆಕೆ ಸಂಜೆ ಸಮಯಕ್ಕೆ ಮಳೆ ಬಂದಾಗ ಕಡಿಮೆಯಾಗುತ್ತಿತ್ತು, ಇನ್ನು ಕೆಲ ದಿನಗಳಲ್ಲಿ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಟಬಹುದು ಎಂದು ಅಂದಾಜಿಸಲಾಗಿದೆ.












Click it and Unblock the Notifications