Karnataka: ಸರ್ಕಾರದಿಂದ ಆಯ್ದ ವಾಹನಗಳ ತೆರಿಗೆ ಹೆಚ್ಚಳ: ಹಾಗಾದ್ರೆ ನೀವೆಷ್ಟು ಪಾವತಿಸಬೇಕು ನೋಡಿ
ಬೆಂಗಳೂರು, ಜುಲೈ 25: ಕರ್ನಾಟಕ ರಾಜ್ಯ ಸರ್ಕಾರವು ಆಯ್ದ ವಾಹನಗಳ ಮೇಲೆ ತೆರಿಗೆ ಹೆಚ್ಚಳ ಮಾಡುವುದಾಗಿ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ತಿಳಿಸಿತ್ತು. ಅದರಂತೆ ಮೋಟಾರು ವಾಹನಗಳ ತೆರಿಗೆ ಪರಿಷ್ಕರಣೆ ಸೋಮವಾರದಿಂದಲೇ ಜಾರಿ ಆಗಿದೆ. ಇದರಿಂದ ಈ ಕೆಳಗಿನ ವಿವಿಧ ವಾಹನಗಳಿಗೆ ತೆರಿಗೆ ಹೆಚ್ಚಾಗಿದೆ.
ಜುಲೈ 07ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನಲ್ಲಿ ಆಯವ್ಯಯ ಮಂಡಿಸಿದ್ದರು. ಈ ವೇಳೆ ಅದಕ್ಕೆ ಪೂರಕವಾಗಿ 'ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಮಸೂದೆ 2023ಕ್ಕೆ ವಿಧಾನಮಂಡಲದಲ್ಲಿ ಅನುಮೋದನೆ ಪಡೆಯಲಾಗಿತ್ತು.

ತಿದ್ದುಪಡಿ ಮಸೂದೆ ವ್ಯಾಪ್ತಿಯಲ್ಲಿ ಶಾಲಾ- ಕಾಲೇಜುಗಳ ವಾಹನಗಳು, ಅತೀ ಬಾರದ ಸರಕು ಸಾಗಣೆ ವಾಹನಗಳ ತೆರಿಗೆ ಏರಿಕೆ ಮಾಡಲಾಗಿದೆ. ಶಾಲೆಗಳ ಬಳಕೆಯಾಗುವ ವಾಹನಗಳ ಪ್ರತಿ ಚದರ ಮೀಟರ್‌ಗೆ ತೆರಿಗೆಯನ್ನು 720 ರಿಂದ 1100ಕ್ಕೆ ಹೆಚ್ಚಳವಾಗಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಯಾವ ವಾಹನಗಳಿಗೆ ತೆರಿಗೆ ಅಧಿಕ?
ಇನ್ನಿತರ ಶಿಕ್ಷಣ ಸಂಸ್ಥೆಗಳ ಒಡೆತನದಲ್ಲಿರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸಂಚಾರಕ್ಕೆ ಬಳಸುವ ವಾಹನಗಳ ಪ್ರತಿ ಚಮೀ ವಿಸ್ತೀರ್ಣದ ತೆರಿಗೆ 180ರಿಂದ 2200ಕ್ಕೆ ಹೆಚ್ಚಿಗೆ ಮಾಡಲಾಗಿದೆ. ಈ ಹಿಂದೆ ಭಾರ ಸೇರಿದಂತೆ ಒಟ್ಟು ವಾಹನದ ತೂಕ 1.5 ಟನ್‌ನಿಂದ 5.5 ಟನ್‌ಗಳವರೆಗೆ ಇರುವ ವಾಹನಗಳಿಗೆ ಒಮ್ಮೆಯೇ ಪೂರ್ಣ ಅವಧಿ ತೆರಿಗೆ ಸಂಗ್ರಹಿಸಲಾಗುತ್ತಿತ್ತು. ಇದಕ್ಕಿಂತಲೂ ಹೆಚ್ಚು ಬಾರವಿರುವ ವಾಹನಗಳು ಮೂರು ತಿಂಗಳಿಗೆ ತೆರಿಗೆ ಕಟ್ಟುವ ನಿಯಮ ಜಾರಿಯಲ್ಲಿತ್ತು. ಸದ್ಯ 1.5 ಟನ್‌ನಿಂದ 1.2 ಟನ್ ವರೆಗಿನ ಭಾರದ ವಾಹನಗಳು ಪೂರ್ಣಾವಧಿ ತೆರಿಗೆ ಪಾವತಿಸುತ್ತಿವೆ.

ಮುಂದಿನ ದಿನಗಳಲ್ಲಿ ರೂ.10 ಲಕ್ಷದಿಂದ ರೂ.15 ಲಕ್ಷದವರೆಗಿನ ಬೆಲೆಯ ಕ್ಯಾಬ್‌ಗಳಿಗೆ ಆವುಗಳ ಮೌಲ್ಯದ ಶೇಕಡಾ 9ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ಹಿಂದೆ 15 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಕ್ಯಾಬ್‌ಗಳಿಗೆ ಮಾತ್ರ ಆ ವಾಹನದ ಮೌಲ್ಯದ ಶೇ 15 ಪ್ರತಿಶತದಷ್ಟು ತೆರಿಗೆ ವಿಧಿಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ವಾನಗಳ ಪರಿಷ್ಕೃತ ತೆರಿಗೆ ಮಾಹಿತಿ
1.5 ಟನ್‌ನಿಂದ 2 ಟನ್ ಭಾರದ ವಾಹನಗಳಿಗೆ 20,000 ರೂಪಾಯಿ (ಹಳೆ ತೆರಿಗೆ- 10,000ರೂ.), 2 ಟನ್‌ನಿಂದ 3 ಟನ್‌ನ ವಾಹನಗಳಿಗೆ 30,000 ರೂಪಾಯಿ (15,000ರೂ.), 3-5 ಟನ್‌ನಿಂದ 5 ಟನ್‌ನ ವಾಹನಗಳಿಗೆ 40,000 ರೂಪಾಯಿ ( 20,000 ರೂ.), 5.5 ಟನ್‌ನಿಂದ 7.5 ಟನ್‌ನ ವಾಹನಗಳಿಗೆ ಪೂರ್ಣವಧಿಗೆ 60,000 (ಈ ಹಿಂದೆ 1ವರ್ಷಕ್ಕೆ 7,200ರೂ.), 7.5 ಟನ್‌ನಿಂದ 9.5 ಟನ್‌ನ ವಾಹನಗಳಿಗೆ ಪೂರ್ಣವಧಿಗೆ 80,000 (1ವರ್ಷಕ್ಕೆ 7,200ರೂ.) ಮತ್ತು 9.5 ಟನ್‌ನಿಂದ 12 ಟನ್‌ನ ವಾಹನಗಳಿಗೆ ಪೂರ್ಣಾವಧಿಗೆ 1ಲಕ್ಷ ರೂಪಾಯಿ (1ವರ್ಷಕ್ಕೆ 7,200ರೂ.) ತರಿಗೆ ಹೆಚ್ಚಳವಾಗಿದೆ.
ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಗೊಳಿಸುವ ಸಾಹದದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರ ಲಿಕ್ಕರ್, ಹಾಲು ಸೇರಿದಂತೆ ಇನ್ನಿತರ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಿದೆ. ಇದೀಗ ಆಯ್ದ ವಾಹನಗಳ ತೆರಿಗೆ ಹೆಚ್ಚಳ ಮಾಡಿದೆ.












Click it and Unblock the Notifications