ರಂಜಾನ್ ತಿಂಗಳಲ್ಲಿ ಹೆಚ್ಚಾಗುತ್ತಿದೆ ಉಗ್ರರ ದಾಳಿ!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜೂನ್ 27 : ಈ ಹಿಂದೆ ಭಯೋತ್ಪಾದಕ ಸಂಘಟನೆಗಳಲ್ಲಿ ಒಂದು ನಿಯಮವಿತ್ತು. ರಂಜಾನ್ ತಿಂಗಳಿನಲ್ಲಿ ಉಗ್ರರು ಯಾವುದೇ ದಾಳಿಗಳನ್ನು ನಡೆಸುತ್ತಿರಲಿಲ್ಲ. ವಿಶ್ವದ ಅನೇಕ ಉಗ್ರ ಸಂಘಟನೆಗಳು ಈ ನಿಯಮವನ್ನು ಪಾಲಿಸುತ್ತಿದ್ದವು.

ಆದರೆ, ಇಂದಿನ ದಿನಗಳಲ್ಲಿ ಎಲ್ಲವೂ ಬದಲಾಗಿದೆ. ರಂಜಾನ್ ತಿಂಗಳಿನಲ್ಲಿಯೇ ಉಗ್ರರ ದಾಳಿ ಹೆಚ್ಚಾಗುತ್ತಿದೆ. ಈ ವರ್ಷ ರಂಜಾನ್ ತಿಂಗಳು ಆರಂಭವಾದ ಬಳಿಕ ವಿಶ್ವದಲ್ಲಿ ನಡೆದ ದಾಳಿಗಳಲ್ಲಿ 543 ಜನರು ಸಾವನ್ನಪ್ಪಿದ್ದಾರೆ. ಶನಿವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ದಾಳಿಯೂ ಇದರಲ್ಲಿ ಸೇರಿದೆ. [ರಂಜಾನ್ ಉಪವಾಸದ ನಂತರ ಹೊಟ್ಟೆ ತುಂಬಿಸುವ ಸಮೋಸ]

terrorist

ರಂಜಾನ್ ಮಾಸದಲ್ಲಿಯೇ ಉಗ್ರರು ಏಕೆ ದಾಳಿ ನಡೆಸುತ್ತಾರೆ?. ಈ ಕುರಿತು ಐದು ಅಂಶಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ. [ರಂಜಾನ್ ಕುರಿತು ಸೈಯದ್ ಹಮಿದ್ ಮೊಹ್ಸಿನ್ ಲೇಖನ]

* ಸಾಮಾನ್ಯವಾಗಿ ರಂಜಾನ್ ತಿಂಗಳಿನಲ್ಲಿ ಭದ್ರತೆ ಸಾಕಷ್ಟು ಕಡಿಮೆ ಇರುತ್ತದೆ. ಹಲವಾರು ಭದ್ರತಾ ಸಂಸ್ಥೆಗಳು ಉಗ್ರರು ಈ ತಿಂಗಳಿನಲ್ಲಿ ದಾಳಿ ನಡೆಸುವುದಿಲ್ಲ ಎಂದು ಇಂದಿಗೂ ನಂಬಿದ್ದಾರೆ.

* ಉಗ್ರರು ಇಸ್ಲಾಂನಲ್ಲಿನ ನಿಯಮಗಳನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದ್ದಾರೆ. ರಂಜಾನ್ ತಿಂಗಳಿನಲ್ಲಿ ದಾಳಿಗಳನ್ನು ಮಾಡುವ ಉಗ್ರರು ಇಸ್ಲಾಂ ಧರ್ಮದಂತೆ ಮಾಡಿದ್ದೇವೆ ಎಂದು ತಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಾರೆ.

* ರಂಜಾನ್ ತಿಂಗಳಿನಲ್ಲಿ ಹತ್ಯೆ ಮಾಡುವುದು ಪವಿತ್ರ ಎಂದು ಉಗ್ರರು ಭಾವಿಸಿದ್ದಾರೆ. ದೇವರ ಬಗ್ಗೆ ನಂಬಿಕೆ ಇಲ್ಲದವರನ್ನು ನಾವು ಹತ್ಯೆ ಮಾಡಿದ್ದೇವೆ ಎಂದು ಅವರು ಅಂದುಕೊಳ್ಳುತ್ತಾರೆ.

* ಈ ತಿಂಗಳಿನಲ್ಲಿ ಹುತಾತ್ಮರಾದರೆ ಅವರು ದೇವರಿಗೆ ಅತ್ಯಂತ ಹತ್ತಿರವಾಗುತ್ತಾರೆ ಎಂದು ನಂಬುತ್ತಾರೆ. ದೇವರನ್ನು ನಂಬದವರನ್ನು ಕೊಂದರೆ ದೇವರು ಅವರನ್ನು ಮೆಚ್ಚಿಕೊಳ್ಳುತ್ತಾರೆ ಎಂದು ಉಗ್ರರು ನಂಬಿದ್ದಾರೆ.

* ಈ ತಿಂಗಳಿನಲ್ಲಿ ದಾಳಿಗಳನ್ನು ಮಾಡಿದರೆ ಹೆಚ್ಚಿನ ಬಹುಮಾನ ಸಿಗುತ್ತದೆ ಎಂಬುದು ಉಗ್ರರ ನಂಬಿಕೆ. ರಂಜಾನ್ ಮಾಸದಲ್ಲಿ ಹುತಾತ್ಮರಾದರೆ ಜಿಹಾದ್‌ಗೆ ಅತ್ಯಂತ ಶ್ರೇಷ್ಠ ತ್ಯಾಗ ಮಾಡಿದಂತೆ ಎಂಬುದು ಅವರ ನಂಬಿಕೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
There was a time when even terrorist groups had rules. Attacks on women and during the holy month of Ramadan was not permitted and a large number of terrorist groups did abide by this philosophy. However all that has changed today and attacks during the month of Ramadan are in fact on the rise.
Please Wait while comments are loading...