ತೆರಿಗೆ ಸಂಗ್ರಹ: ಸರ್ಕಾರಕ್ಕೆ ಬಹುದೊಡ್ಡ ಹೊಡೆತ ಕೊಟ್ಟ ಲಾಕ್‌ಡೌನ್

ಬೆಂಗಳೂರು, ಆ. 19: ಕೊರೊನಾ ವೈರಸ್‌ನಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭಾರಿ ಹೊಡೆತ ಬಿದ್ದಿದೆ. ಕಳೆದ 5 ತಿಂಗಳುಗಳ ಅವಧಿಯಲ್ಲಿ ಬರೊಬ್ಬರಿ 58,422 ಕೋಟಿ ರೂಪಾಯಿಗಳ ತೆರಿಗೆ ಖೋತಾ ಆಗಿದೆ ಎಂದು ಸರ್ಕಾರದ ಮಾಹಿತಿಯಿಂದ ತಿಳಿದು ಬಂದಿದೆ. ರಾಜ್ಯ ಸರ್ಕಾರಕ್ಕೆ ಹೆಚ್ಚು ಆದಾಯ ತಂದು ಕೊಡುವ ನಾಲ್ಕು ಪ್ರಮುಖ ಇಲಾಖೆಗಳಿಂದ ಬರುವ ಆಧಾಯಕ್ಕೆ ಹೊಡೆತ ಬಿದ್ದಿದೆ.

Recommended Video

      ಸರ್ಕಾರಿ ಶಾಲೆಯಲ್ಲೊಬ್ಬ 3D ಶಿಕ್ಷಕ | Oneindia Kannada

      ವಾಣಿಜ್ಯ, ಅಬಕಾರಿ, ಮೋಟಾರು ಹಾಗೂ ಮುಂದ್ರಾಕ ಇಲಾಖೆಗಳ ತೆರಿಗೆ ಸಂಗ್ರಹದಲ್ಲಿ ಬಹುದೊಡ್ಡ ಆರ್ಥಿಕ ಹೊಡೆತ ಬಿದ್ದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕಡಿಮೆ ತೆರಿಗೆ ಸಂಗ್ರಹವಾಗಿದೆ. ಇದರೊಂದಿಗೆ ಕೇಂದ್ರ ಸರ್ಕಾರದಿಂದ ಬರಬೇಕಾಗಿದ್ದ ಜಿಎಸ್‌ಟಿ ತೆರಿಗೆ ಹಣ ಕೂಡ ಬಾಕಿಯಾಗಿದೆ. ಇದೀಗ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿವೆ. ಆದರೂ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಜಿಎಸ್‌ಟಿ ಅನುದಾನವನ್ನು ಎದುರು ನೋಡುವಂತಾಗಿದೆ. ಲಾಕ್‌ಡೌನ್ ವೇಳೆಯಲ್ಲಿಯೇ ರಾಜ್ಯ ಸರ್ಕಾರ ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ಕೊಟ್ಟಿದ್ದು ಯಾಕೆ ಎಂಬುದು ಇದರಿಂದ ಬಹಿರಂಗವಾಗಿದೆ. ಒಟ್ಟಾರೆ ತೆರಿಗೆ ಸಂಗ್ರಹದ ವಿವರ ಹೀಗಿದೆ.

      ಕಳೆದ 2019ರ ಮಾರ್ಚ್‌ನಿಂದ ಜುಲೈವರೆಗೆ ಐದು ತಿಂಗಳುಗಳ ಅವಧಿಯಲ್ಲಿ81,052 ಕೋಟಿ ರೂಪಾಯಿಗಳ ತೆರಿಗೆ ಹಣ ಸಂಗ್ರಹಿಸಲಾಗಿತ್ತು. ಆದರೆ ಈ ವರ್ಷದಲ್ಲಿ ಸಂಗ್ರಹವಾದ ತೆರಿಗೆ ಹಣ ಕೇವಲ 22,630 ಕೋಟಿ ರೂಪಾಯಿಗಳು ಮಾತ್ರ. ಹೀಗಾಗಿ ಈ ಐದು ತಿಂಗಳುಗಳ ಅವಧಿಯಲ್ಲಿ ರಾಜ್ಯದ ಬೊಕ್ಕಸಕ್ಕೆ 58,422 ಕೋಟಿ ರೂಪಾಯಿ ತೆರಿಗೆ ಸಂಗ್ರಹ ಖೋತಾ ಆಗಿದೆ. ಈ ಐದು ತಿಂಗಳುಗಳ ಇಲಾಖಾವಾರು ತೆರಿಗೆ ಖೋತಾ ಹೀಗಿದೆ!

      ವಾಣಿಜ್ಯ ತೆರಿಗೆ ಇಲಾಖೆ

      ವಾಣಿಜ್ಯ ತೆರಿಗೆ ಇಲಾಖೆ

      ಕಳೆದ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಮುಖವಾಗಿ ವಾಣಿಜ್ಯ ತೆರಿಗೆ ಇಲಾಖೆಯಿಂದ ಸಂಗ್ರಹವಾಗುವ ತೆರಿಗೆಯಲ್ಲಿ 35,286 ಕೋಟಿ ರೂಪಾಯಿಗಳ ಕೊರತೆ ಉಂಟಾಗಿದೆ. 2019ರಲ್ಲಿ ಈ ನಾಲ್ಕು ತಿಂಗಳುಗಳ ಅವಧಿಯಲ್ಲಿ 49,142 ಕೋಟಿ ರೂ.ಗಳ ತೆರಿಗೆ ಸಂಗ್ರಹವಾಗಿತ್ತು. ಈ ವರ್ಷ 2020ರ ಏಪ್ರಿಲ್‌ನಿಂದ ಜುಲೈವರೆಗೆ ಕೇವಲ 13,835 ಕೋಟಿ ರೂಪಾಯಿಗಳ ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ. ಹೀಗಾಗಿ ಪ್ರಮುಖವಾಗಿ ಸರ್ಕಾರಕ್ಕೆ ಆದಾಯ ತರುವ ಇಲಾಖೆಯಲ್ಲಿಯೇ ಹಿನ್ನಡೆಯಾಗಿದೆ.

      ಅಬಕಾರಿ ಇಲಾಖೆ

      ಅಬಕಾರಿ ಇಲಾಖೆ

      ಲಾಕ್‌ಡೌನ್‌ ಮಧ್ಯೆಯೂ ಮದ್ಯದ ಅಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ಕೊಟ್ಟಿತ್ತು. ಇದು ಅಬಕಾರಿ ಇಲಾಖೆಯ ತೆರಿಗೆ ಸಂಗ್ರಹದ ಮಹತ್ವವನ್ನು ತೋರಿಸುತ್ತದೆ. ಆದರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸಕ್ತ ಸಾಲಿನ ಐದು ತಿಂಗಳುಗಳಲ್ಲಿ ಬರೊಬ್ಬರಿ 12 ಸಾವಿರ ಕೋಟಿ ರೂಪಾಯಿಗಳ ತೆರಿಗೆ ಖೋತಾ ಅಬಕಾರಿ ಇಲಾಖೆಯಲ್ಲಿ ಆಗಿದೆ.

      ಈ ಸಾಲಿನ ಗುರಿ ಸಾಧಿಸುವುದು ಹೋಗಲಿ ಕಳೆದ ಸಾಲಿನಲ್ಲಿ ಮಾರ್ಚ್ ತಿಂಗಳಿನಿಂದ ಜುಲೈವರೆಗೆ 17,865 ಕೋಟಿ ರೂಪಾಯಿಗಳ ತೆರಿಗೆ ಸಂಗ್ರಹವಾಗಿತ್ತು. ಈ ಸಲ ಅದಕ್ಕಿಂತ ಹೆಚ್ಚಿನ ಗುರಿ ಹೊಂದಲಾಗಿತ್ತು. ಆದರೆ ಈ ಸಲ ಕೊರೊನಾ ಹಾವಳಿಯಿಂದ 5,865 ಕೋಟಿ ರೂಪಾಯಿಗಳ ತೆರಿಗೆ ಸಂಗ್ರಹಿಸಲು ಮಾತ್ರ ಸಾಧ್ಯವಾಗಿದೆ.

      ಮುದ್ರಾಂಕ & ಮೋಟಾರು

      ಮುದ್ರಾಂಕ & ಮೋಟಾರು

      ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮುದ್ರಾಂಕ ಇಲಾಖೆಯಲ್ಲಿ 6,867 ಕೋಟಿ ರೂಪಾಯಿಗಳಷ್ಟು ಕಡಿಮೆ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷ 8,727 ಕೋಟಿ ರೂ. ಸಂಗ್ರಹಿಸಲಾಗಿತ್ತು. ಈ ಸಲ ಕೇವಲ 1,860 ಕೋಟಿ ರೂ.ಗಳ ತೆರಿಗೆ ಸಂಗ್ರಹವನ್ನು ಮಾತ್ರ ಮಾಡಲಾಗಿದೆ. ಇದು ರಿಯಲ್ ಎಸ್ಟೇಟ್ ಕ್ಷೇತ್ರ ನೆಲಕಚ್ಚಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

      ಮೋಟಾರು ವಾಹನ ತೆರಿಗೆ ಇಲಾಖೆಯಲ್ಲಿ ಕೂಡ 3,947 ಕೋಟಿ ರೂಪಾಯಿ ಕಡಿಮೆ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷ 4,878 ಕೋಟಿ ರೂ. ಸಂಗ್ರಹಿಸಲಾಗಿತ್ತು. ಈ ವರ್ಷ ಅದು ಕೇವಲ 931 ಕೋಟಿ ರೂ. ಮಾತ್ರ ಸಂಗ್ರಹಿಸಲು ಸಾಧ್ಯವಾಗಿದೆ.

      ಇತರೆ ಮೂಲಗಳಿಂದ ಸಂಗ್ರಹವಾಗುತ್ತಿದ್ದ ತೆರಿಗೆ ಹಣದಲ್ಲಿಯೂ ಖೋತಾ ಆಗಿದೆ. ಇತರೆ ಮೂಲಗಳಿಂದ ಆಗುತ್ತಿದ್ದ 301 ಕೋಟಿ ರೂ. ತೆರಿಗೆ ಸಂಗ್ರಹದಲ್ಲಿ ಖೋತಾ ಆಗಿದೆ. ಕಳೆದ ವರ್ಷ ಇತರೇ ಮೂಲಗಳಿಂದ 440 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. ಈ ವರ್ಷ ಅದು 139 ಕೋಟಿ ರೂ.ಗಳಾಗಿದೆ.

      ಜಿಎಸ್‌ಟಿ

      ಜಿಎಸ್‌ಟಿ

      ಕೇಂದ್ರದಿಂದ ರಾಜ್ಯಕ್ಕೆ 5 ತಿಂಗಳಲ್ಲಿ ಬರಬೇಕಾದ ಜಿಎಸ್ಟಿ ಹಣ 13,017 ಕೋಟಿ ರೂ. ಹಣ ಬಂದಿಲ್ಲ. ಕಳೆದ ಮಾರ್ಚ್ ತಿಂಗಳಿನಿಂದ ಈವರೆಗೆ ಸಂಗ್ರಹವಾದ ತೆರಿಗೆ ಹೀಗಿದೆ. ಮಾರ್ಚ್ 3,555 ಕೋಟಿ ರೂ., ಏಪ್ರಿಲ್ 840 ಕೋಟಿ ರೂ., ಮೇ 2011 ಕೋಟಿ ಕೋಟಿ ರೂ., ಜೂನ್ 3137 ಕೋಟಿ ರೂ. ಹಾಗೂ ಜುಲೈನಲ್ಲಿ 3474 ಕೋಟಿ ರೂ. ಸಂಗ್ರಹವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+