Special Trains: ಹುಬ್ಬಳ್ಳಿ, ಮೈಸೂರಿನಿಂದ ಬೇಸಿಗೆ ವಿಶೇಷ ರೈಲುಗಳ ಕಾರ್ಯಾಚರಣೆ; ಮಾರ್ಗ, ವೇಳಾಪಟ್ಟಿ
ಬೆಂಗಳೂರು: ಬೇಸಿಗೆ ರಜೆ ಶುರುವಾಗಿ ವಾರಗಳು ಕಳೆದಿವೆ. ಮಹಿಳೆಯರು, ಮಕ್ಕಳು ಕುಟುಂಬಸ್ಥರಾಗಿ ಪ್ರವಾಸಿ ತಾಣಗಳಿಗೆ, ಬೇರೆ ಬೇರೆ ಊರುಗಳಿಗೆ ತೆರಳುವವರ ಪ್ರಮಾಣ ಹೆಚ್ಚಾಗಿದೆ. ಇದರಿಂದ ರೈಲುಗಳ ಸಂಚಾರದ ಮೇಲೆ ಒತ್ತಡ ಹೆಚ್ಚಾಗಿದ್ದು, ದಟ್ಟಣೆ ನಿವಾರಣೆಗೆ ನೈಋತ್ಯ ರೈಲ್ವೆ ವಲಯದ (SWR) ರಾಜ್ಯದಿಂದ ವಿವಿಧ ಮಾರ್ಗಗಳಲ್ಲಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ರೈಲುಗಳು ಬೆಂಗಳೂರಿನ ಯಶವಂತಪುರ, ಮೈಸೂರು ಹಾಗೂ ಹುಬ್ಬಳ್ಳಿಯಿಂದ ಹೊರಡಲಿವೆ. ರೈಲುಗಳು ಮತ್ತು ವೇಳಾಪಟ್ಟಿ ವಿವರ ಇಲ್ಲಿದೆ.
ಸಾಂಸ್ಕೃತಿಕ ನಗರಿ ಮೈಸೂರು ಮತ್ತು ಬಿಹಾರದ ಮುಜಾಫರ್‌ಪುರ ನಡುವೆ ಒಂದು ಸುತ್ತಿನ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ ಮಾಡಲಿದೆ. ಮೈಸೂರು-ಮುಜಾಫರ್‌ಪುರ ಎಕ್ಸ್‌ಪ್ರೆಸ್ ರೈಲು (06243) ಏಪ್ರಿಲ್ 22 ರಂದು ಬೆಳಗ್ಗೆ 10:05 ಕ್ಕೆ ಹೊರಡುತ್ತದೆ. ಈ ರೈಲು ಕೆ.ಎಸ್.ಆರ್ ಬೆಂಗಳೂರು, ವಿಜಯವಾಡ, ಭುವನೇಶ್ವರ ಮತ್ತು ಕತಿಹಾರ್ ಮಾರ್ಗವಾಗಿ ಸಂಚರಿಸಿ ಮುಜಾಫರ್‌ಪುರ ತಲುಪಲಿದೆ.

ಮರಳಿ ಅದೇ ದಿಕ್ಕಿನಲ್ಲಿ ಮರುಪಯಣದಲ್ಲಿ ಮುಜಾಫರ್‌ಪುರ-ಮೈಸೂರು ರೈಲು (06244) ಮುಜಾಫರ್‌ಪುರದಿಂದ ಏಪ್ರಿಲ್ 25 ರಂದು ರಾತ್ರಿ 10:45 ಕ್ಕೆ ಹೊರಡಲಿದೆ. ಈ ರೈಲು 3 ಟೈರ್ ಎಸಿ, 2 ಟೈರ್ ಎಸಿ, ನಾನ್ ಎಸಿ ಕೋಚ್, ಜನರಲ್ ಸೇರಿದಂತೆ ಒಟ್ಟು 20 ಬೋಗಿಗಳನ್ನು ಒಳಗೊಂಡಿರಲಿದೆ.
ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ರೈಲು
ಉತ್ತರ ಕರ್ನಾಟಕದ ಪ್ರಮುಖ ಜಂಕ್ಷನ್ ಆಗಿರುವ ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಅಸ್ಸಾಂ ರಾಜ್ಯದ ನ್ಯೂ ಟಿನ್ಸುಕಿಯಾ ಜಂಕ್ಷನ್ ನಡುವೆ ವಿಶೇಷ ರೈಲು ಸಂಚಾರ ಸೇವೆ ಲಭ್ಯವಾಗಲಿದೆ. ಹುಬ್ಬಳ್ಳಿ-ಟುನ್ಸುಕಿಯಾ ರೈಲು (07325) ಏಪ್ರಿಲ್ 23 ರಂದು ಗುರುವಾರ ಬೆಳಗ್ಗೆ 11:45 ಕ್ಕೆ ಹೊರಟು ರವಿವಾರ ಮಧ್ಯಾಹ್ನ 02:30 ಕ್ಕೆ ನ್ಯೂ ಟಿನ್ಸುಕಿಯಾ ನಿಲ್ದಾಣ ತಲುಪಲಿದೆ.
ಮರಳಿ ಅದೇ ದಿಕ್ಕಿನಲ್ಲಿ ಟುನ್ಸುಕಿಯಾ-ಹುಬ್ಬಳ್ಳಿ ರೈಲು (07326) ಏಪ್ರಿಲ್ 27 ರಂದು ಸೋಮವಾರ ರಾತ್ರಿ 10:00 ಗಂಟೆಗೆ ನ್ಯೂ ಟಿನ್ಸುಕಿಯಾ ನಿಲ್ದಾಣದಿಂದ ಹೊರಟು ಗುರುವಾರ ರಾತ್ರಿ 11:00 ಕ್ಕೆ ಹುಬ್ಬಳ್ಳಿ ಜಂಕ್ಷನ್‌ಗೆ ಬಂದು ಸೇರಲಿದೆ.
ಈ ರೈಲು ಹಾವೇರಿ, ದಾವಣಗೆರೆ, ಎಸ್.ಎಂ.ವಿ.ಟಿ ಬೆಂಗಳೂರು ಮತ್ತು ಮಾಲ್ಡಾ ಟೌನ್ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ. 3 ಟೈರ್ ಎಸಿ, 2 ಟೈರ್ ಎಸಿ, ನಾನ್ ಎಸಿ ಕೋಚ್, ಜನರಲ್ ಸೇರಿದಂತೆ ಒಟ್ಟು 20 ಬೋಗಿಗಳನ್ನು ಈ ರೈಲು ಹೊಂದಿದೆ ಎಂದು ರೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಶವಂತಪುರ ತಲುಪಿದ ವಿಶಾಖಪಟ್ಟಣಂ ರೈಲು
ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಬೆಂಗಳೂರಿನ ಯಶವಂತಪುರಕ್ಕೆ ವಿಶೇಷ ರೈಲು ಬಿಡಲಾಗಿತ್ತು. ಈ ರೈಲು (08513) ವಿಶೇಷ ರೈಲು ಸಂಚರಿಸಲಿದೆ. ಈ ರೈಲು ವಿಶಾಖಪಟ್ಟಣಂನಿಂದ ರಾತ್ರಿ 11:00 ಗಂಟೆಗೆ ಹೊರಟು ರಾಜಮಂಡ್ರಿ, ವಿಜಯವಾಡ, ಗುಂಟೂರು ಮತ್ತು ಯಲಹಂಕ ಮಾರ್ಗವಾಗಿ ಮರುದಿನ ಸಂಜೆ 07:45ಕ್ಕೆ ಯಶವಂತಪುರ ನಿಲ್ದಾಣವನ್ನು ಬುಧವಾರ ತಲುಪಿದೆ.
ಪ್ರಯಾಣಿಕರ ಈ ಮೇಲಿನ ಎಲ್ಲಾ ರೈಲುಗಳ ಸಮಯ ಮತ್ತು ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಜಾಲತಾಣ www.indianrail.gov.in ವೆಬ್‌ಸೈಟ್ ಅಥವಾ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.













Click it and Unblock the Notifications