ಮಂತ್ರಾಲಯ ಭಕ್ತರಿಗೆ ಗುಡ್‌ನ್ಯೂಸ್: ಮೈಸೂರು-ಬೆಂಗಳೂರು ಭಾಗದಿಂದ ವಿಶೇಷ ರೈಲು, ವೇಳಾಪಟ್ಟಿ ಇಲ್ಲಿದೆ
ಬೆಂಗಳೂರು; ಕರ್ನಾಟಕದಿಂದ ಅದರಲ್ಲೂ ರಾಜಧಾನಿ ಬೆಂಗಳೂರು, ಮೈಸೂರು ಭಾಗದಿಂದ ಮಂತ್ರಾಲಯಕ್ಕೆ ತೆರಳುವವರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಮಂತ್ರಾಲಯಕ್ಕೆ ತೆರಳಲು ಸರಿಯಾದ ಬಸ್, ಟ್ರೈನ್ ಇಲ್ಲ ಎಂದು ದೂರುತ್ತಿರುವವರಿಗೆ ನೈಋತ್ಯ ರೈಲ್ವೆಯು ವಿಶೇಷ ರೈಲುಗಳನ್ನು ಬಿಟ್ಟಿದೆ. ಈ ರೈಲು ಮೂರು ರಾಜ್ಯಗಳ ಜನರಿಗೆ ಅನುಕೂಲ ಒದಗಿಸಲಿದೆ.
ಮಂತ್ರಾಲಯಕ್ಕೆ ಸಾರಿಗೆ ಬಸ್‌ಗಳ ಮೂಲಕ ಸಂಚರಿಸಲು ಟಿಕೆಟ್ ದರ ದುಬಾರಿ ಅನ್ನುವವರು ಸಹ ನೈಋತ್ಯ ರೈಲ್ವೆ ಕಾರ್ಯಾಚರಣೆ ನಡೆಸುತ್ತಿರುವ ಕಾಕಿನಾಡ-ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ (17289/17290) ಕಡಿಮೆ ದರದಲ್ಲಿ ನೀವು ಮಂತ್ರಾಲಯಕ್ಕೆ ಹೋಗಬಹುದು. ಇನ್ನುಮುಂದೆ ಮಂತ್ರಾಲಯಕ್ಕೆ ರೈಲ್ವೆ ಸೇವೆ ಲಭ್ಯವಿದ್ದು, ಇದು ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಈ ರೈಲಿನ ವೇಳಾಪಟ್ಟಿ, ಮಾರ್ಗ, ನಿಲುಗಡೆ ವಿವರ ಮುಂದಿದೆ.

ಕಾಕಿನಾಡ-ಮೈಸೂರು ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಯ ಭಕ್ತರ ಸಂಖ್ಯೆಗೇನು ಕಡಿಮೆ ಇಲ್ಲ. ಆಂಧ್ರ ಪ್ರದೇಶ-ಕರ್ನಾಟಕ ಗಡಿಯಲ್ಲಿರುವ ಮಂತ್ರಾಯಕ್ಕೆ ಕರ್ನಾಟಕದ ಮೂಲೆ ಮೂಲೆಗಳಿಂಗೆ ತೆರಳಲು ಸಾರಿಗೆ ಕೊರತೆ ಇದೆ. ಈಗೀಗ ವಿವಿಧ ಕಡೆಗಳಿಂದ ನೇರ ಬಸ್, ರೈಲು ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ.
ಮಂತ್ರಾಲಯ ರೈಲಿನ ಸಂಚಾರ ಸಮಯ
ಕಾಕಿನಾಡ್-ಮೈಸೂರು-ಬೆಂಗಳೂರು-ಮಂತ್ರಾಲಯ ವಿಶೇಷ ಎಕ್ಸ್‌ಪ್ರೆಸ್ ರೈಲು ಮೈಸೂರಿನಿಂದ ಸಂಜೆ 5.05ಕ್ಕೆ ಹೊರಡುತ್ತದೆ. ಬೆಂಗಳೂರಿಗೆ ಬಂದ ಇಲ್ಲಿಂದ ರಾತ್ರಿ 8.25ಕ್ಕೆ ಹೊರಡಲಿದೆ. ಮಾರನೇ ದಿನ ಬೆಳಗ್ಗೆ 3.30ರ ಸುಮಾರಿಗೆ ಮಂತ್ರಾಲಯ ರಸ್ತೆ ತಲುಪುತ್ತದೆ. ಅಲ್ಲಿಂದ ಕೊಂಚ ದೂರದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ನೀವು ಆಟೋ ರಿಕ್ಷಾದಲ್ಲಿ ತೆರಳಬಹುದಾಗಿದೆ.
ಇನ್ನೂ ಆಂಧ್ರದ ಕಾಡಿನಾಡನಿಂದ ಇದೇ ರೈಲು ನಸುಕಿನ ಜಾವ 2.30ಕ್ಕೆ ಬಿಡುತ್ತದೆ. ರಾಯಚೂರು, ಯಾದಗಿರಿ ಮೂಲಕ ಸಾಗಿ ಮಧ್ಯಾಹ್ನ 12.30ಕ್ಕೆ ಬೆಂಗಳೂರು ಮೆಜೆಸ್ಟಿಕ್ ರೈಲು ನಿಲ್ದಾಣ ತಲುಪುತ್ತದೆ. ಮೈಸೂರಿನಿಂದ ಹೊರಟಾದ ರೈಲು ನಸುಕಿನ ಜಾವ 4.23ಕ್ಕೆ ರಾಯಚೂರು ಮತ್ತು 6 ಗಂಟೆಗೆ ಯಾದಗಿರಿ ತಲುಪುತ್ತದೆ ಎಂದು ರೈಲ್ವೆ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.
ಈ ಮಂತ್ರಾಲಯ ವಿಶೇಷ ರೈಲು ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ, ತುಮಕೂರು ಹಾಗೂ ಉತ್ತರ ಕರ್ನಾಟಕ ರಾಯಚೂರು, ಯಾದಗಿರಿ ಮತ್ತು ಸೇಡಂ ಭಾಗದ ಜನರಿಗೆ ಸಾರಿಗೆ ಸೇವೆ ಒದಗಿಸಲಿದೆ. ಬಸ್‌ಗಿಂತ ಕಡಿಮೆ ಬೆಲೆಯಲ್ಲಿ ನೀವು ಮಂತ್ರಾಲಯಕ್ಕೆ ಪ್ರಯಾಣಿಸಬಹುದು. ರಾಯರ ದರ್ಶನ ಪಡೆದು ಪುನೀತರಾಗಬಹುದು.
ರೈಲು ನಿಲುಗಡೆ ನಿಲ್ದಾಣಗಳು/ಮಾರ್ಗ
ಮಂತ್ರಾಲಯ ವಿಶೇಷ ಒಂದೇ ರೈಲು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಗಡಿ ಭಾಗದ ಜಿಲ್ಲೆಗಳ ಪ್ರಯಾಣಿಕರಿಗೆ ಸೇವೆ ನೀಡುತ್ತದೆ. ಕಾಕಿನಾಡ್ ಕಡೆಯಿಂದ ಬರುವ ವಿಶೇಷ ರೈಲು (17289) ರೈಲು ಸಮಲ್ಕೋಟ್, ರಾಜಮಂಡ್ರಿ, ನಿಡದವೋಲು, ತನುಕು, ಭೀಮಾವರಂ ಟೌನ್, ಅಕಿವಿಡು, ಕೈಕಲೂರು, ಗುಡಿವಾಡ, ವಿಜಯವಾಡ, ಗಂಟೂರು, ಬಳಿಕ ತೆಲಂಗಾಣ ರಾಜ್ಯದ ನಲ್ಗೊಂಡ, ಸಿಕಂದರಾಬಾದ್, ಬೇಗಂಪೇಟ್, ಲಿಂಗಂಪಲ್ಲಿ, ವಿಕಾರಾಬಾದ್, ನಂತರ ಕರ್ನಾಟಕದ ಸೇಡಂ, ಯಾದಗಿರಿ, ರಾಯಚೂರು, ಮಂತ್ರಾಲಯ ರಸ್ತೆ, ಅದೋನಿ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ, ಯಲಹಂಕ, ಬೆಂಗಳೂರು ಕ್ಯಾಂಟ್, ಕೆಎಸ್ ಆರ್ ಬೆಂಗಳೂರು, ಕೆಂಗೇರಿ, ರಾಮನಗರ, ಮಂಡ್ಯ, ಮೈಸೂರು ಮಾರ್ಗದಲ್ಲಿ ಸಾಗಲಿದೆ. ಈ ಮೇಲಿನ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಹೆಚ್ಚಿನ ಮಾಹಿತಿಗೆ ರೈಲ್ವೆ ಇಲಾಖೆ ಅಧಿಕೃತ ವೆಬ್‌ಸೈಟ್, ಸಹಾಯವಾಣಿ ಇಲ್ಲವೇ ಐಆರ್ ಸಿಟಿಸಿ ಮೂಲಕ ಪರಿಶೀಲಿಸಬಹುದು, ಮುಂಗಡ ಟಿಕೆಟ್ ಸಹ ಬುಕ್ ಮಾಡಬಹುದು.


Click it and Unblock the Notifications
