ಜ. 1 ರಿಂದ ನೈಋತ್ಯ ರೈಲ್ವೆ ಕೆಲವು ರೈಲು ವೇಳಾಪಟ್ಟಿ ಬದಲು, ರೈಲುಗಳ ವಿವರ
ಬೆಂಗಳೂರು, ಡಿಸೆಂಬರ್ 31: ಜನವರಿ 1, 2025ರಿಂದ ಹಲವು ನಿಯಮಗಳು ಬದಲಾವಣೆಯಾಗಲಿವೆ. ಭಾರತೀಯ ರೈಲ್ವೆ ಸಹ ತನ್ನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಇದಕ್ಕೆ ಅನುಗುಣವಾಗಿ ನೈಋತ್ಯ ರೈಲ್ವೆಯು ಹಲವು ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕೃರಣೆ ಮಾಡಿದ್ದು, ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ. ರೈಲು ಪ್ರಯಾಣಕ್ಕೆ ಮೊದಲು ಪರಿಷ್ಕೃತ ವೇಳಾಪಟ್ಟಿಯನ್ನು ಗಮನಿಸಿ ಎಂದು ಮನವಿ ಮಾಡಿದೆ.
ಸಾಮಾಜಿಕ ಜಾಲತಾಣದ ಮೂಲಕ ನೈಋತ್ಯ ರೈಲ್ವೆ ಈ ಕುರಿತು ಮಾಹಿತಿ ನೀಡಿದೆ. ಸಾರ್ವಜನಿಕ ವೇಳಾಪಟ್ಟಿ- 21 ಅನ್ನು 2025 ಜನವರಿ 1ರಿಂದ ಜಾರಿ ಮಾಡಲಾಗಿದೆ. ಪ್ರಯಾಣಿಕರು ಪ್ರಯಾಣದ ಮೊದಲು ತಮ್ಮ ರೈಲಿನ ಪರಿಷ್ಕೃತ ವೇಳಾಪಟ್ಟಿಯನ್ನು ನೋಡಿ ಎಂದು ಮಾಹಿತಿ ನೀಡಿದೆ.

ಹೊಸ ವೇಳಾಪಟ್ಟಿಯನ್ನು ನೋಡಲು ಪ್ರಯಾಣಿಕರು ನೈಋತ್ಯ ರೈಲ್ವೆಯ ಸಾಮಾಜಿಕ ಜಾಲತಾಣಕ್ಕೆ ಭೇಟಿ ನೀಡಬಹುದು ಅಲ್ಲದೇ ನೈಋತ್ಯ ರೈಲ್ವೆಯ ವೆಬ್‌ಸೈಟ್ https://swr.indianrailways.gov.in/ ಮೂಲಕವೂ ಮಾಹಿತಿ ಪಡೆಯಬಹುದಾಗಿದೆ.
ವೇಳಾಪಟ್ಟಿ ಬದಲಾದ ರೈಲುಗಳು
* 11006 ಪುದುಚೇರಿ-ದಾದರ್. ಬೆಳಗಾವಿ ನಿಲ್ದಾಣ. ತಲುಪುವ ಮತ್ತು ಬಿಡುವ ವೇಳೆ 17.05/ 17.10.
* 11022 ತಿರುನೆಲ್ವೇಲಿ-ದಾದರ್. ಘಟಪ್ರಭಾ ನಿಲ್ದಾಣ. ತಲುಪುವ ಮತ್ತು ಬಿಡುವ ವೇಳೆ 18.13/ 18.15.
* 11036 ಮೈಸೂರು-ದಾದರ್ ಎಕ್ಸ್‌ಪ್ರೆಸ್. ಕುಡಚಿ ನಿಲ್ದಾಣ. ತಲುಪುವ ಮತ್ತು ಬಿಡುವ ವೇಳೆ 18.54/ 18.55.
* 16592 ಮೈಸೂರು ಜಂಕ್ಷನ್- ಎಸ್‌ಎಸ್‌ಎಸ್ ಹುಬ್ಬಳ್ಳಿ, ಹಂಪಿ ಎಕ್ಸ್‌ಪ್ರೆಸ್. ಬಳ್ಳಾರಿ ನಿಲ್ದಾಣ. ತಲುಪುವ ಮತ್ತು ಬಿಡುವ ವೇಳೆ 05.25/ 05.30.
* 16536 ಪಂಡರಾಪುರ- ಮೈಸೂರು ಜಂಕ್ಷನ್ ಎಕ್ಸ್‌ಪ್ರೆಸ್. ವಿಜಯಪುರ ನಿಲ್ದಾಣ. ತಲುಪುವ ಮತ್ತು ಬಿಡುವ ವೇಳೆ 17.30/ 17.40.
* 12649 ಯಶವಂತಪುರ-ಹಜರತ್ ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್. ಎಸ್‌ಎಸ್‌ಎಸ್ ಹುಬ್ಬಳ್ಳಿ ತಲುಪುವ ಮತ್ತು ಬಿಡುವ ವೇಳೆ 20.05/ 20.25. ಗದಗ 21.25/ 21.27. ಕೊಪ್ಪಳ 22.18/ 22.20.
* 16590 ಸಾಂಗ್ಲಿ-ಕೆಎಸ್ಆರ್ ಬೆಂಗಳೂರು ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್. ಬೆಳಗಾವಿ ನಿಲ್ದಾಣ ತಲುಪುವ ಮತ್ತು ಬಿಡುವ ವೇಳೆ 18.25/ 18.30. ಧಾರವಾಡ ನಿಲ್ದಾಣ 21.13/ 21.15.
* 16533 ಜೋಧ್‌ಪುರ್-ಕೆಎಸ್ಆರ್ ಬೆಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್. ಬಳ್ಳಾರಿ ನಿಲ್ದಾಣ. ತಲುಪುವ ಮತ್ತು ಬಿಡುವ ವೇಳೆ 18.15/ 18.20. 16531 ಅಜ್ಮೀರ್ ಕೆಎಸ್ಆರ್ ಬೆಂಗಳೂರು. ತಲುಪುವ ಮತ್ತು ಬಿಡುವ ವೇಳೆ 18.15/ 18.20.
* 12649 ಯಶವಂತಪುರ-ಹಜರತ್ ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್. ಯಶವಂತಪುರ ನಿಲ್ದಾಣ ತಲುಪುವ ಮತ್ತು ಬಿಡುವ ವೇಳೆ 13.00, ತುಮಕೂರು 13.43/ 13.45.
* 16315 ಮೈಸೂರು-ತಿರುವನಂತಪುರಂ ನಾರ್ತ್ ಎಕ್ಸ್‌ಪ್ರೆಸ್. ಕೆಎಸ್ಆರ್ ಬೆಂಗಳೂರು ತಲುಪುವ ಮತ್ತು ಬಿಡುವ ವೇಳೆ 16.25/ 16.40, ಬೆಂಗಳೂರು ದಂಡು 16.50/ 16.52, ಕೆಆರ್ ಪುರ 17.03/ 17.05, ವೈಟ್ ಫೀಲ್ಡ್ 17.14/ 17.15, ಬಂಗಾರಪೇಟೆ ಜಂಕ್ಷನ್ 17.50/ 17.52, ಕುಪ್ಪಂ 18.20/ 18.22.












Click it and Unblock the Notifications