Special Trains: ಬೆಳಗಾವಿ-ಮೀರಜ್ ಮಧ್ಯೆ ವಿಶೇಷ ರೈಲುಗಳ ವಿಸ್ತರಣೆ, ವೇಳಾಪಟ್ಟಿ
ಹುಬ್ಬಳ್ಳಿ, ಜನವರಿ 30: ಉತ್ತರ ಕರ್ನಾಟಕ ಭಾಗದಿಂದ ಗೋವಾ ಭಾಗಕ್ಕೆ ಸಂಪರ್ಕ ಕಲ್ಪಿಸುವ ನೈಋತ್ಯ ರೈಲ್ವೆಯ ಕೆಲವು ಎಕ್ಸ್‌ಪ್ರೆಸ್ ರೈಲುಗಳನ್ನು ವಿಸ್ತರಣೆ ಮಾಡುವ ಮೂಲಕ ಪ್ರಯಾಣಿಕರಿಗೆ ರೈಲ್ವೆ ಅಧಿಕಾರಿಗಳು ಸಿಹಿ ಸುದ್ದಿ ನೀಡಿದ್ದಾರೆ.
ಪ್ರಯಾಣಿಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಬೆಳಗಾವಿ ಮತ್ತು ಮೀರಜ್ ನಿಲ್ದಾಣಗಳ ನಡುವಿನ ಕಾಯ್ದಿರಿಸದ ವಿಶೇಷ ರೈಲುಗಳ ಕಾರ್ಯಾಚರಣೆ ಇದೇ ವರ್ಷ 2025ರ ಮಾರ್ಚ್ 31ರವರೆಗೆ ವಿಸ್ತರಣೆ ಮಾಡಲಾಗಿದೆ.

ವಿಸ್ತರಣೆಗೊಂಡ ರೈಲುಗಳು, ವಿವರ
ಬೆಳಗಾವಿ-ಮೀರಜ್-ಬೆಳಗಾವಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 07301/07302) ಹಾಗೂ ಬೆಳಗಾವಿ-ಮಿರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲುಗಳ (07303/07304) ಸಂಚಾರವನ್ನು ಮುಂದಿನ ಮಾರ್ಚ್ ಅಂತ್ಯದವರೆಗೆ ನೈಋತ್ಯ ರೈಲ್ವೆ ಅಧಿಕಾರಿಗಳು ವಿಸ್ತರಣೆ ಮಾಡಿ ಆದೇಶಿಸಿದ್ದಾರೆ.
ಇದೇ ಮಾರ್ಗದ ರೈಲುಗಳನ್ನು ಇದಕ್ಕೂ ಮೊದಲು ಈ ರೈಲುಗಳ ಸಂಚಾರವನ್ನು 2025ರ ಜನವರಿ 31ರವರೆಗೆ ಮಾತ್ರವೇ ಓಡಿಸಲು ಸೂಚನೆ ಇತ್ತು. ಇದೀಗ ಪ್ರಯಾಣಿಕರ ಅಗತ್ಯತೆ ನೋಡಿಕೊಂಡು ಮತ್ತೆ ಎರಡು ತಿಂಗಳು ಹೆಚ್ಚಿನ ಅವಧಿಗೆ ವಿಸ್ತರಣೆ ಮಾಡಲಾಘಿದೆ. ಈ ವಿಶೇಷ ರೈಲುಗಳು ಅಸ್ತಿತ್ವದಲ್ಲಿರುವ ಅದೇ ಸಮಯಕ್ಕೆ ಚಲಿಸಲಿವೆ. ಆಯಾ ನಿಲ್ದಾಣಗಳಲ್ಲಿ ಎಂದಿನಂತೆ ನಿಲುಗಡೆ ನೀಡಲಿವೆ. ಇದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ರೈಲ್ವೆ ಹುಬ್ಬಳ್ಳಿ ವಲಯ ತಿಳಿಸಿದೆ.
ರೈಲು ಸಂಚಾರ ಭಾಗಶಃ ರದ್ದು ಮುಂದುವರಿಕೆ
ಕ್ಯಾಸಲ್ ರಾಕ್-ಲೋಂಡಾ ನಿಲ್ದಾಣಗಳ ಮಧ್ಯೆ ರೈಲ್ವೆ ವಿದ್ಯುದ್ದೀಕರಣ ಮತ್ತು ಎಂಜಿನಿಯರಿಂಗ್ ಕಾಮಗಾರಿ ನಡೆಸುತ್ತಿರುವ ಕಾರಣದಿಂದಾಗಿ ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ರೈಲು (ಸಂಖ್ಯೆ 17333/17334) ಭಾಗಶಃ ರದ್ದುಗೊಳಿಸಲಾಗಿತ್ತು. ಈ ಸಂಚಾರ ರದ್ದು ನಿರ್ಧಾರವನ್ನು ಮುಂದಿನ ಕೆಲವು ದಿನಗಳ ವರೆಗೆ ಮುಂದುವರಿಸಲಾಗುತ್ತದೆ.

ಮುಂದಿನ ತಿಂಗಳ ಫೆಬ್ರವರಿ 28ರವರೆಗೆ ಮೀರಜ್-ಕ್ಯಾಸಲ್ ರಾಕ್ ಡೈಲಿ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17333) ಲೋಂಡಾವರೆಗೂ ಮಾತ್ರ ಸಂಚರಿಸಲಿದೆ. ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳ ನಡುವಿನ ಪ್ರಯಾಣ ರದ್ದುಗೊಳಿಸಲಾಗಿದೆ.
ಕ್ಯಾಸಲ್ ರಾಕ್-ಮೀರಜ್ ಡೈಲಿ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17334) ಫೆಬ್ರವರಿ 28 ರವರೆಗೆ ಕ್ಯಾಸಲ್ ರಾಕ್ ನಿಲ್ದಾಣದ ಬದಲು ಲೋಂಡಾ ನಿಲ್ದಾಣದಿಂದ ಪ್ರಯಾಣ ಆರಂಭಿಸುತ್ತದೆ. ಕ್ಯಾಸಲ್ ರಾಕ್ ಮತ್ತು ಲೋಂಡಾ ನಿಲ್ದಾಣಗಳ ನಡುವಿನ ಪ್ರಯಾಣ ರದ್ದುಗೊಳಿಸಲಾಗಿದೆ. ಈ ಮೊದಲು, ಈ ರೈಲುಗಳನ್ನು ಜನವರಿ 31, 2025 ರವರೆಗೆ ಭಾಗಶಃ ರದ್ದುಗೊಳಿಸಲು ನಿರ್ಧರಿಸಿತ್ತು, ಈ ರದ್ದು ನಿರ್ಧಾರವನ್ನು ಮತ್ತೀಗ ವಿಸ್ತರಣೆ ಮಾಡಲಾಗಿದೆ.
(This is an AI generated aticle image through WISE)












Click it and Unblock the Notifications