Karnataka Railways: ಹುಬ್ಬಳ್ಳಿ-ಬೆಂಗಳೂರು ರೈಲುಗಳ ಸೇವೆ ವಿಸ್ತರಣೆ, ಅಪ್ಡೇಟ್

ಬೆಂಗಳೂರು, ನವೆಂಬರ್ 11: ದಕ್ಷಿಣ ಕರ್ನಾಟಕದ ಬೆಂಗಳೂರು ಮಹಾನಗರದಿಂದ ಉತ್ತರ ಕರ್ನಾಟಕದ ನಗರ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವಲ್ಲಿ ನೈಋತ್ಯ ರೈಲ್ವೆ ವಲಯವು ಮಹತ್ವದ ಪಾತ್ರ ನಿರ್ವಹಿಸುತ್ತದೆ. ಇದೀಗ ರೈಲ್ವೆ ಅಧಿಕಾರಿಗಳು ಈ ಎರಡು ನಿಲ್ದಾಣಗಳ ಮಧ್ಯೆ ಓಡಿಸುತ್ತಿದ್ದ ದೈನಂದಿನ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ರೈಲುಗಳ ಸೇವೆಯ ಅವಧಿಯನ್ನು ವಿಸ್ತರಣೆ ಮಾಡಿದೆ ಎಂದು ಸೋಮವಾರ ತಿಳಿಸಿದೆ.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವಿಶೇಷ (ಸಂಖ್ಯೆ 07339/07340) ರೈಲುಗಳ ಅವಧಿಯನ್ನು ಈಗಿರುವ ನಿಲುಗಡೆ ಮತ್ತು ಸಮಯದೊಂದಿಗೆ ವಿಸ್ತರಿಸಣೆ ಮಾಡಲಾಗಿದೆ. ಈ ಕುರಿತು ನೈಋತ್ಯ ರೈಲ್ವೆ ಸೋಮವಾರ ಅಪ್ಡೇಟ್ ನೀಡಿದೆ. ಈ ಮಾರ್ಗದಲ್ಲಿ ಒಡಾಡುವ ಪ್ರಯಾಣಿಕರು ಗಮನಿಸಿ, ಮುಂಗಡ ಟಿಕೆಟ್ ಬುಕ್ ಮಾಡಿಕೊಂಡು ಸಂಚರಿಸಬಹುದಾಗಿದೆ.

SWR Extended Service Period of Bengaluru to Hubballi Daily Express Trains

* ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್‌ಆರ್‌ ಬೆಂಗಳೂರು ಡೈಲಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ವಿಶೇಷ ರೈಲು (ಸಂಖ್ಯೆ 07339 ) ಸೇವೆಯು ಈ ಮೊದಲು 2024ರ ಡಿಸೆಂಬರ್ 31ರವರೆಗೆ ಮಾತ್ರವೇ ಓಡಿಸಲು ನಿಗದಿಯಾಗಿತ್ತು. ಇದೀಗ ಈ ರೈಲು ಸೇವೆಯ ಅವಧಿಯನ್ನು 2025ರ ಜನವರಿ 1 ರಿಂದ ಜೂನ್ 30ರವರೆಗೆ ವಿಸ್ತರಣೆ ಮಾಡಲಾಗಿದೆ.

* ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 07340) ಸೇವೆ ಈ ಮೊದಲು 2025ರ ಜನವರಿ 1ರವರೆಗೆ ಸಂಚರಿಸಲು ನಿಗದಿ ಆಗಿತ್ತು. ಇದೀಗ 2025ರ ಜನವರಿ 2 ರಿಂದ ಜುಲೈ 1 ರವರೆಗೆ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ಕನಮಡಿ ಅವರು ಮಾಹಿತಿ ನೀಡಿದ್ದಾರೆ.

ಕರ್ನಾಟಕದಿಂದ ಶಬರಿಮಲೈಗೆ ವಿಶೇಷ ರೈಲು ಸೇವೆ

ಮುಂಬರುವ ಶಬರಿಮಲೆ ಋತುವಿನಲ್ಲಿ ಹೆಚ್ಚುವರಿ ದಟ್ಟಣೆ ಆಗುವ ಸಂಭವವಿದೆ. ಹೀಗಾಗಿ ಕರ್ನಾಟಕದ ಬೆಂಗಳೂರಿನ ಎಸ್‌ಎಂವಿಟಿ ರೈಲು ನಿಲ್ದಾಣದಿಂದ ಕೇರಳದ ದಕ್ಷಿಣ ಕೊಚುವೇಲಿ ರೈಲು ನಿಲ್ದಾಣಗಳಿಗೆ ಮುಂದಿನ ಮೂರು ತಿಂಗಳ ಕಾಲ ವಾರಕ್ಕೆ ಒಂದು ರೈಲಿನಂತೆ ವಿಶೇಷ ರೈಲು ಕಾರ್ಯಾಚರಣೆ ಮಾಡಲು ರೈಲ್ವೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ರೈಲುಗಳು ಒಟ್ಟು ಹನ್ನೆರಡು ಬಾರಿ ಸೇವೆ ನೀಡಲಿವೆ.

ರೈಲು ಸಂಖ್ಯೆ 06083 ಕೇರಳದ ಕೊಚುವೇಲಿ-ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ( ಕೊಚುವೇಲಿ ನಿಲ್ದಾಣದಿಂದ 2024ರ ನವೆಂಬರ್ 12 ರಿಂದ 2025 ಜನವರಿ 28 ರವರೆಗೆ ಓಡಾಡಲಿದೆ. ನಿಗದಿಯಾದ ದಿನ ಸಂಜೆ 18:05 ಗಂಟೆಗೆ ಹೊರಟು, ಮರುದಿನ ದಿನ 10:55 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಬರಲಿದೆ.

ರೈಲು ಸಂಖ್ಯೆ: 06084 ಎಸ್‌ಎಂವಿಟಿ ಬೆಂಗಳೂರು-ಕೊಚುವೇಲಿ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಿಂದ 2024ರ ನವೆಂಬರ್ 13 ರಿಂದ 2025 ಜನವರಿ 29ರವರೆಗೆ ಸೇವೆ ನೀಡಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+